ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ಗೆ ಕೌಂಟ್ಡೌನ್! ಬೆಂಗಳೂರಿನಲ್ಲಿ ಅಂತಿಮ ಪರೀಕ್ಷೆ ಆರಂಭ
ಬೆಂಗಳೂರು; ರಾಜ್ಯದ ಜನರ ಬಹುನಿರೀಕ್ಷೆಯ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆಯ ಕಾಲ ಸನ್ನಿಹಿತವಾಗಿದೆ. ಹೌರಾ ಮತ್ತು ಕಾಮಾಕ್ಯಾ ನಡುವೆ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಓಡಿಸಲಾಗಿದೆ. ಬೆಂಗಳೂರು-ಮುಂಬೈ ನಡುವೆ ದೇಶದ ಎರಡನೇ ಸ್ಲೀಪರ್ ವಂದೇ ಭಾರತ್ ರೈಲು ಸಂಚಾರ ಮಾಡಲಿದೆ. ಇದರ ಕಾರ್ಯಾಚರಣೆಗೂ ಮುನ್ನ ಅಂತಿಮ ಹಂತದ ತಾಂತ್ರಿಕ ಪರೀಕ್ಷೆ ನಡೆಸಲು ಬೆಂಗಳೂರಿನ ಎಸ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ಗೆ ಆಗಮಿಸಿದೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ಅವರು ದೃಢಪಡಿಸಿದ್ದಾರೆ.
ವಂದೇ ಭಾರತ್ ಸ್ಲೀಪರ್ ರೈಲು ಇದಾಗಿದ್ದು ಗಾರ್ಡನ್ ಸಿಟಿ ಬೆಂಗಳೂರಿನಿಂದ ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ ಮಾರ್ಗವಾಗಿ ವಾಣಿಜ್ಯ ನಗರಿ ಮುಂಬೈನ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ತಲುಪಲಿದೆ. ಇದರ ಕಾರ್ಯಾಚರಣೆಗೆ ಈಗಾಗಲೇ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಅಂತಿಮ ಹಂತದ ಸುರಕ್ಷತಾ ಪರೀಕ್ಷೆಗಳು ನಡೆಯುತ್ತಿವೆ. ಇದಾಗುತ್ತಿದ್ದಂತೆ ಆದಷ್ಟು ಶೀಗ್ರವೇ ಪ್ರಯಾಣಿಕರ ಸೇವೆಗೆ ಗ್ರೀನ್ ಸಿಗ್ನಲ್ ದೊರೆಯಲಿದೆ.

ಬೆಂಗಳೂರಿನಲ್ಲಿ ತಾಂತ್ರಿಕ ಪರೀಕ್ಷೆ
ರೈಲಿನಲ್ಲಿ ಸುದೀರ್ಘ ಪ್ರಯಾಣ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಹೈಟೆಕ್ ವಂದೇ ಭಾರತ್ ಸ್ಲೀಪರ್ ರೈಲು ತಯಾರಿಸಲಾಗಿದೆ. ಬೆಂಗಳೂರಿನಲ್ಲೇ ಯಾಂತ್ರಿಕ ಪರೀಕ್ಷೆ ಹಾಗೂ ಅಂತಿಮ ಹಂತದ ಪ್ರಾಯೋಗಿಕ ಸಂಚಾರ, ಪರೀಕ್ಷೆಗಳು ನಡೆಯಲಿವೆ. ಸದ್ಯ ಈ ರೈಲು ಬಿಇಎಂಎಲ್ ವಶದಲ್ಲಿದೆ. ಎಲ್ಲ ವಿಧದ ಅಂತಿಮ ತಾಂತ್ರಿಕ ಪರೀಕ್ಷೆಗಳು ಮುಗಿಯುತ್ತಿದ್ದಂತೆ ಯಶಸ್ವಿ ಪ್ರಾಯೋಗಿಕ ಚಾಲನೆ ನಡೆಸಲಾಗುವುದು. ಅದಾದ ಬಳಿಕ ರೈಲ್ವೆ ಇಲಾಖೆಗೆ ಕಳಹಿಸಲಾಗುತ್ತದೆ ಎಂದು ಕನಮಡಿ ತಿಳಿಸಿದ್ದಾರೆ.
ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಹಿಂದೆ ನೀಡಿದ ಭರವಸೆಯಂತೆ ಬೆಂಗಳೂರು-ಮುಂಬೈ ಮಧ್ಯೆ ಶೀಘ್ರವೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಸೇವೆಗೆ ಲಭ್ಯವಾಗಲಿದೆ. ಬೆಂಗಳೂರಿಂದ ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾರ್ಗವಾಗಿ ಪುಣೆ ಮೂಲಕ ಮುಂಬೈಗೆ ತಲುಪುತ್ತದೆ. ಈ ಮಾರ್ಗದ ಎಲ್ಲ ಪ್ರಯಾಣಿಕರಿಗೆ ಈ ರೈಲು ಸಹಕಾರಿಯಾಗಲಿದೆ. ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಸೇವೆಯನ್ನು ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ಲೀಪರ್ ವಂದೇ ಭಾರತ್ ರೈಲಿನ ವೈಶಿಷ್ಟ್ಯಗಳು
ಪ್ರಸ್ತುತ ಸ್ಲೀಪರ್ ವಂದೇ ಭಾರತ್ ಸ್ಲೀಪರ್ 16 ಬೋಗಿಗಳ ಸಹಿತ ಸಂಚಾರ ನಡೆಲಿದೆ. ಇದರಲ್ಲಿ ಬರೋಬ್ಬರಿ 823 ಪ್ರಯಾಣಿಕರು ಪ್ರಯಾಣಿಸಬಹುದು. 11 ಥ್ರಿ ಟೈರ್ ಎಸಿ ಕೋಚ್, 4 ಸೆಕೆಂಡ್ ಏಸಿ, ಒಂದು ಫಸ್ಟ್ ಏಸಿ ಬೋಗಿಗಳು ಇವೆ. ಒಳಾಗಂಣ ವಿಶಾಲವಾಗಿದ್ದು, ಶೌಚಾಲಯ, ಸಿಸಿಟಿವಿ, ಅತ್ಯಾಧುನಿಕ ಸೀಟು, ಸ್ವಯಂ ಚಾಲಿತ ಬಾಗಿಲುಗಳ ವ್ಯವಸ್ಥೆ, ಸುಧಾರಿತ ಸಸ್ಪೆನ್ಷನ್ ಸಿಸ್ಟಮ್, ಕವಚ್ ತಂತ್ರಜ್ಞಾನ, ಅಗ್ನಿ ಸುರಕ್ಷತಾ ಸಾಧನಾ, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಸೇರಿದಂತೆ ಅಗತ್ಯ ಎಲ್ಲ ಮೂಲಸೌಕರ್ಯಗಳನ್ನು ಈ ರೈಲು ಒಳಗೊಂಡಿದೆ. ಪ್ರತಿ ಗಂಟೆಗೆ ಗಂಟೆಗೆ ಗರಿಷ್ಠ 180 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ರೈಲು ಹೊಂದಿದೆ.
ಅತ್ಯಾಧುನಿಕ ಐಷಾರಾಮಿ ರೈಲು ಎಂದು ಈ ರೈಲನ್ನು ಕರೆಯಬಹುದು. ವಂದೇ ಭಾರತ್ ರೈಲು ಆಗಮಿಸಿ ರೈಲ್ವೆ ಜಾಲದಲ್ಲಿ ಕ್ರಾಂತಿ ಉಂಟು ಮಾಡಿತ್ತು. ದೇಶಾದ್ಯಂತ ಸುಮಾರು 150ಕ್ಕೂ ಅಧಿಕ ವಂದೇ ಭಾರತ್ ರೈಲುಗಳು ಪ್ರತಿನಿತ್ಯ ಕಾರ್ಯ ನಿರ್ವಹಿಸುತ್ತಿದೆ. ಅದರ ಬೆನ್ನಲ್ಲೆ ಸ್ಲೀಪರ್ ವಂದೇ ಭಾರತ್ ರೈಲುಗಳನ್ನು ಸರ್ಕಾರ ಟ್ರ್ಯಾಕ್ಗೆ ಇಳಿಸುತ್ತಿದೆ. ಶೀಘ್ರವೇ ಮುಂಬೈ-ಕರ್ನಾಟಕದ ಜನರ ಕನಸು ನನಸಾಗಲಿದೆ.













Click it and Unblock the Notifications