ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಗುಪ್ತಾಂಗ ತೋರಿಸಿದವನಿಗೆ ಬಿತ್ತು ವಿದ್ಯಾರ್ಥಿನಿಯರ ಗೂಸಾ

ಮೌಂಟ್ ಕಾರ್ಮೆಲ್ ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಡುತ್ತಿದ್ದವನ ಬಂಧನ. ತಪ್ಪಿತಸ್ಥನನ್ನು ಹಿಡಿದು ಚಚ್ಚಿ ಪೊಲೀಸರಿಗೆ ಒಪ್ಪಿಸಿದ ವಿದ್ಯಾರ್ಥಿನಿಯರು.

|
Google Oneindia Kannada News

ಬೆಂಗಳೂರು, ಆಗಸ್ಟ್ 30: ನಗರದ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿಯರಿಗೆ ತನ್ನ ಗುಪ್ತಾಂಗ ತೋರಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಾಲಕಿಯರೇ ಹಿಡಿದು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತನನ್ನು ವಿಜೇಶ್ ಎಂದು ಗುರುತಿಸಲಾಗಿದೆ.

ಯುವತಿ ಜತೆ ಚಕ್ಕಂದ ಆಡಲು ಹೋಗಿ, ಆಸ್ಪತ್ರೆ ಸೇರಿದ 'ರೋಮಿಯೋ'ಯುವತಿ ಜತೆ ಚಕ್ಕಂದ ಆಡಲು ಹೋಗಿ, ಆಸ್ಪತ್ರೆ ಸೇರಿದ 'ರೋಮಿಯೋ'

ತನ್ನನ್ನು ತಾನು ಪತ್ರಕರ್ತನೆಂದು ಬಿಂಬಿಸಿಕೊಳ್ಳುತ್ತಿದ್ದ ದಿನನಿತ್ಯವೂ ಮೌಂಟ್ ಕಾರ್ಮೆಲ್ ಶಾಲೆಯ ಬಳಿ ನಿಲ್ಲುವುದನ್ನು ರೂಢಿ ಮಾಡಿಕೊಂಡಿದ್ದ.

Bengaluru Mount Carmel students caught hold offender who was giving sexual harassment

ಹಾಗೆ, ಬಂದವನು ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ತನ್ನ ಗುಪ್ತಾಂಗ ತೋರಿಸುತ್ತಾ ಅಸಹ್ಯ ಸಂಜ್ಞೆಗಳನ್ನು ತೋರುತ್ತಾ ಅವರಿಗೆ ಮುಜುಗರ ಉಂಟು ಮಾಡುತ್ತಿದ್ದ. ಇದರಿಂದ ಅನೇಕ ವಿದ್ಯಾರ್ಥಿನಿಯರು ರೋಸಿ ಹೋಗಿದ್ದರು.

ಶಾಲೆಯ ಬಳಿಯಿರುವ ಲೂಪ್ ರಸ್ತೆಯೇ ಈತನ ಅಡ್ಡೆಯಾಗಿತ್ತು. ದ್ವಿಚಕ್ರ ವಾಹನಗಳಲ್ಲಿ ಬರುವ ಮೌಂಟ್ ಕಾರ್ಮೆಲ್ ವಿದ್ಯಾರ್ಥಿನಿಯರು ಸಾಮಾನ್ಯವಾಗಿ ಇದೇ ಲೂಪ್ ರಸ್ತೆಯಲ್ಲಿಯೇ ತಮ್ಮ ಬೈಕುಗಳನ್ನು ನಿಲ್ಲಿಸುತ್ತಾರೆ. ಹೀಗಾಗಿ, ಇಲ್ಲಿಗೆ ಬರುವ ವಿದ್ಯಾರ್ಥಿನಿಯರ ಮೇಲೆಯೇ ವಿಜೇಶ್ ನ ಕಣ್ಣು ಬಿದ್ದಿತ್ತು.

Recommended Video

Astrologer's Sexual Assault Revealed | OneIndia KAnnada

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕವಿವಿ ಪ್ರಾಧ್ಯಾಪಕ ಅಮಾನತುವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕವಿವಿ ಪ್ರಾಧ್ಯಾಪಕ ಅಮಾನತು

ಈತ ಉಪಟಳ ತಾಳಲಾರದ ಹುಡುಗಿಯರಲ್ಲಿ ಹತ್ತು ವಿದ್ಯಾರ್ಥಿಯರು ಸೇರಿ ಧೈರ್ಯಮಾಡಿ ಈತನಿಗೆ ಗೂಸಾ ಕೊಟ್ಟಿದ್ದಾರೆ. ಹಾಗೆ ಗೂಸಾ ಕೊಟ್ಟ ನಂತರ ಈತನನ್ನು ಹೈ ಗ್ರೌಂಡ್ಸ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ಈತ ಪತ್ರಕರ್ತನಲ್ಲ ಎಂಬುದು ಪತ್ತೆಯಾಗಿದೆ. ಸುಮ್ಮನೇ ತನ್ನ ದ್ವಿಚಕ್ರ ವಾಹನದ ಮೇಲೆ ಪ್ರೆಸ್ ಎಂದು ನಮೂದಿಸಿಕೊಂಡಿದ್ದ. ಈತ ಬೆಂಗಳೂರಿನಲ್ಲೇ ಇರುವ ಮಲಯಾಳಂ ಭಾಷೆಯ ಜಾಹೀರಾತು ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇತ್ತೀಚೆಗಷ್ಟೇ ಕೆಲಸ ಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

English summary
A man who was giving sexual harassment to Mount Carmel school students was caught by the students' team, beaten up and surrendered him to the police in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X