ವಂಚನೆ ಮಾಡುತ್ತಿದ್ದ ನಕಲಿ ಗನ್ ಮ್ಯಾನ್ ಬಂಧನ
ಬೆಂಗಳೂರು, ಫೆಬ್ರವರಿ 04: ಶಾಸಕರೊಬ್ಬರ ಗನ್ ಮ್ಯಾನ್ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದ ವ್ಯಕ್ತಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ನಾರಾಯಣ್ ಬಂಧಿತ ಆರೋಪಿ.ಮೂಲತಃ ಧಾರವಾಡ ಮೂಲದ ಈತ ಬೆಂಗಳೂರು ಶಸಸ್ತ್ರ ಮೀಸಲು ಪಡೆಯ ಪೇದೆಯಾಗಿ ಪೋಟೋ ತೆಗೆಸಿಕೊಂಡಿದ್ದ. ಅಲ್ಲದೇ ಧಾರವಾಡದ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಬಳಿ ನಿಂತು ಪೋಟೋ ತೆಗಿಸಿಕೊಂಡಿದ್ದ. ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರಿಗೆ ಶಾಸಕರಿಗೆ ಹೇಳಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದ. ಮೋಸ ಹೋಗಿದ್ದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದ.

ಕಳೆದ ದಿನ ಹಣ ನೀಡುವುದಾಗಿ ಎಲ್ಲಿ ಸಿಕ್ಕುತ್ತೀರಿ ಎಂದು ಕೇಳಿದಾಗ ಧಾರವಾಡದ ಡಿಆರ್ ಸಮೀಪ ಬರುವಂತೆ ಹೇಳಿದ್ದಾರೆ. ಹೀಗೆ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿದ್ದಾರೆ. ಆನಂತರ ಮನೆಗೂ ಕರೆದುಕೊಂಡು ಹೋಗಿದ್ದಾರೆ. ಹೀಗೆ ತಾನೊಬ್ಬ ಗನ್ ಮ್ಯಾನ್ ಎಂದು ನಂಬಿಸಿ ಜನರಿಗೆ ಮೋಸ ಮಾಡುತ್ತಿದ್ದ ನಾರಾಯಣ್ ಸದ್ಯ ಉಪ್ಪಾರಪೇಟೆ ಪೊಲೀಸರ ಅತಿಥಿಯಾಗಿದ್ದಾನೆ. ಈತ ಗನ್ ಮ್ಯಾನ್ ಮಾದರಿಯಲ್ಲಿ ಸಫಾರಿ ಬಟ್ಟೆ ಧರಿಸಿ ನಕಲಿ ಗನ್ ಇಟ್ಟುಕೊಂಡಿದ್ದ. ಇದನ್ನು ನೋಡಿ ಜನರು ಕೂಡ ನಂಬಿದ್ದರು. ನಕಲಿ ಗನ್ ಮ್ಯಾನ್ ಸದ್ಯ ಜೈಲು ಸೇರಿದ್ದು, ಈತನಿಂದ ಮೋಸ ಹೋಗಿದ್ದರೆ ಕೂಡಲೇ ದೂರು ನೀಡುವಂತೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ.ಪಾಟೀಲ್ ಅವರು ಮನವಿ ಮಾಡಿದ್ದಾರೆ.
Recommended Video













Click it and Unblock the Notifications