ಕನಕಪುರದ 23 ವರ್ಷದ ವಿದ್ಯಾರ್ಥಿ 24 ದಿನಗಳಿಂದ ನಾಪತ್ತೆ!

ಬೆಂಗಳೂರು, ಜೂ. 12: ಕಳೆದ 24 ದಿನಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿರುವ 23 ವರ್ಷದ ವಿದ್ಯಾರ್ಥಿಗಾಗಿ ಕನಕಪುರ ಪೊಲೀಸರು ಶೋಧ ನಡೆಸಿದರೂ ಆತನ ಸುಳಿವು ಪತ್ತೆಯಾಗಿಲ್ಲ. ಇನ್ನು ಕಾಣೆಯಾಗಿರುವ ಬಾಲಕನನ್ನು ಸಲಿಂಗ ಕಾಮಕ್ಕೆ ಬಳಿಸಿಕೊಂಡಿರುವ ವಕೀಲ ಶಂಕರಪ್ಪ ಮತ್ತು ಆತನ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 24 ದಿನವಾದರೂ ಪತ್ತೆಯಾಗದ ಬಾಲಕ ಜೀವಂತವಾಗಿ ಉಳಿದಿರುವುದು ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಕೀಲರ ಕಚೇರಿ ಸ್ಥಳಾಂತರಕ್ಕೆಂದು ಎಂ.ಜಿ. ರಸ್ತೆಯ ತಾಯಪ್ಪಗಲ್ಲಿ ನಿವಾಸಿ ಪಿಯುಸಿ ವಿದ್ಯಾರ್ಥಿ ಮೇ. 19 ರಂದು ತೆರಳಿದ್ದ. ಹಳೇ ಗಬ್ಬಾಡಿಯ ವಾಸಿ ವಕೀಲ ಶಂಕರೇಗೌಡ ಎಂಬುವರು ಕಚೇರಿ ಸ್ಥಳಾಂತರಕ್ಕೆ ಕರೆದಿದ್ದಾರೆ ಎಂದು ಹೇಳಿ ಹೋಗಿದ್ದ ಯುವಕ ಇಂದಿಗೂ ಮರಳಿ ಬಂದಿಲ್ಲ. ಸಂಬಂಧೀಕರ ಮನೆಯಲ್ಲಿ ಹುಡುಕಾಡಿದ್ದ ಪೋಷಕರು, ಮೇ. 23 ರಂದೇ ಕನಕಪುರ ನಗರ ಪೊಲೀಸ್ ಠಾಣೆಗೆ ಮಿಸ್ಸಿಂಗ್ ದೂರು ದಾಖಲಿಸಿದ್ದರು. ದೂರು ದಾಖಲಾದ ಬಳಿಕ ಪೊಲೀಸರು ವಕೀಲ ಶಂಕರೇಗೌಡ ಆತನ ಗೆಳೆಯ ಮೈಸೂರಿನ ಅರುಣ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇಬ್ಬರ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಕೇಸು ದಾಖಲಿಸಿ ವಶಕ್ಕೆ ಪಡೆಯಲಾಗಿದೆ.

ಸಲಿಂಗ ಕಾಮಕ್ಕೆ ಬಳಕೆ: ವಿದ್ಯಾರ್ಥಿಯನ್ನು ಕಚೇರಿಯ ಸ್ಥಳಾಂತರಕ್ಕೆ ಬಳಸಿಕೊಂಡಿಲ್ಲ. ಬದಲಿಗೆ ಲೈಂಗಿಕ ತೃಷೆ ತೀರಿಸಿಕೊಳ್ಳಲು ಮನೆಗೆ ಕರೆದಿದ್ದಾರೆ. ಶಂಕರೇಗೌಡ ಉಳಿಯುತ್ತಿದ್ದ ಮನೆ ಜಾಗ, ಹಳೇ ಮನೆಯ ಜಾಗ ಮತ್ತು ಲಾಡ್ಜ್ ತಪಾಸಣೆ ನಡೆಸಿದ್ದಾರೆ. ಶಂಕರೇಗೌಡ ಬಳಸಿದ್ದಾನೆ ಎನ್ನಲಾದ ತಲೆದಿಂಬನ್ನು ಕೆರೆಯಲ್ಲಿ ಬಿಸಾಡಿದ್ದು, ಪೊಲೀಸ್ ಶ್ವಾನಗಳು ಪತ್ತೆ ಮಾಡಿವೆ. ಕೆಲವು ಮಹತ್ವದ ದಾಖೆಲಗಳು ಮತ್ತು ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಆದರೆ ವಿದ್ಯಾರ್ಥಿಯ ಸುಳಿವು ಮಾತ್ರ ಪೊಲೀಸರಿಗೆ ಸಿಕ್ಕಿಲ್ಲ.

Bengaluru Missing Case: 24 Days Over Still the Missing Student Not Found Says Police

ವಿದ್ಯಾರ್ಥಿಯನ್ನು ಶಂಕರೇಗೌಡ ಕರೆದುಕೊಂಡು ಹೋಗಿದ್ದಾನೆ ಎಂಬದಕ್ಕೆ ಪೊಲೀಸರು ಮಹತ್ವದ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಆದ್ರೆ, ಬಾಲಕ ಮಾತ್ರ ಪತ್ತೆಯಾಗಿಲ್ಲ. ಶಂಕರೇಗೌಡ ತೀವ್ರ ವಿಚಾರಣೆ ಬಳಿಕ ಬಾಲಕ ಕಾಣೆಯಾಗಿರುವ ಅಸಲಿ ಸಂಗತಿ ಗೊತ್ತಾಗಲಿದೆ. ಅಂತೂ ಬಾಲಕನಿಗಾಗಿ ಕನಕಪುರ ಟೌನ್ ಪೊಲೀಸರು ನಿರಂತರ ಶೋಧ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+