ಇಳಿಯುವ ಮೆಟ್ರೋ ನಿಲ್ದಾಣ ಬಿಟ್ಟು ಬೇರೆಡೆ ಇಳಿದ್ರೂ 50ರೂ ದಂಡ ಕಟ್ಬೇಕು
ಬೆಂಗಳೂರು, ಏ.3: ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಹೊಂದಿರುವವರು ಕನಿಷ್ಠ 50 ರೂ ಹೊಂದಿರಲೇಬೇಕು ಎನ್ನುವ ನಿಯಮ ಜಾರಿಗೆ ತಂದಿರುವ ಹಿನ್ನೆಲೆಯಲ್ಲೇ ಮತ್ತೊಂದು ನಿಯಮ ಜಾರಿಗೊಳಿಸಿದೆ.
ಅದೇನೆಂದರೆ ಒಂದೊಮ್ಮೆ ನೀವು ಯಾವುದೋ ಒಂದು ನಿರ್ದಿಷ್ಟ ಮೆಟ್ರೋ ನಿಲ್ದಾಣಕ್ಕೆ ಟೋಕನ್ ತೆಗೆದುಕೊಂಡಿದ್ದರೆ, ನಿಮಗೆ ಮರೆತು ಅದಕ್ಕೂ ಮುಂದಿನ ನಿಲ್ದಾಣದಲ್ಲಿ ಇಳಿದರೆ 50ರೂ ದಂಡ ಕಟ್ಟಬೇಕಾಗುತ್ತದೆ.
ಹಳ್ಳಿಯಿಂದ ಬಂದವರು, ಅಥವಾ ಬೇರೆ ರಾಜ್ಯದವರು ಎಷ್ಟೋ ನಿಲ್ದಾಣಗಳ ಉಚ್ಛಾರಣೆ ಅರ್ಥವಾಗದೆ ಬೇರೆ ಎಲ್ಲಾದರೂ ಇಳಿದರೆ ದಂಡ ಕಟ್ಟಲೇಬೇಕು ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಹೆಚ್ಚಿನ ಮೆಟ್ರೋ ಕಾರ್ಡ್ ಬಳಕೆದಾರರು ಕನಿಷ್ಠ ಬ್ಯಾಲೆನ್ಸ್ ನಿಯಮದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಕಾರ್ಡ್‌ನಲ್ಲಿ 35 ರೂ. ಬಾಕಿಯಿದ್ದು ಮೊದಲ ಸ್ಟಾಪ್‌ನಲ್ಲೇ ಇಳಿಯಬೇಕು ಎಂದರೂ ಪ್ರಯಾಣದ ಶುಲ್ಕ ಸೇರಿ ಹೆಚ್ಚುವರಿ 15 ರೂ. ರೀಚಾರ್ಚ್ ಮಾಡಿಸಬೇಕು ಎಂದು ಕೆಲವು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ. ಅದರೊಂದಿಗೆ ಇದೀಗ ಇದೊಂದು ತಲೆಬಿಸಿಯೊಂದನ್ನು ಬಿಎಂಆರ್‌ಸಿಎಲ್ ನೀಡಿದೆ.












Click it and Unblock the Notifications