• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇನ್ಮುಂದೆ ನಗರದಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಒಂದೇ ಗಂಟೆ ಸಾಕು

|

ಬೆಂಗಳೂರು, ಜುಲೈ 28: ಇನ್ನುಮುಂದೆ ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಂದೇ ಗಂಟೆಯಲ್ಲಿ ತೆರಳಬಹುದಾಗಿದೆ.

ಹೌದು ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ನೈಋತ್ಯ ರೈಲ್ವೆಯು ರೈಲ್ವೆ ನಿಲ್ದಾಣವನ್ನು ನಿರ್ಮಿಸುತ್ತಿದ್ದು, ಬಹುತೇಕ ಕಾರ್ಯ ಮೂರ್ಣಗೊಂಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣವು ಕೇವಲ ಐದು ಕಿ.ಮೀ ದೂರದಲ್ಲಿದ್ದು, ಅಲ್ಲಿಂದ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್(ಬಿಐಎಎಲ್) ಬಸ್‌ ವ್ಯವಸ್ಥೆ ಕಲ್ಪಿಸುತ್ತಿದೆ.

ಅತಿ ಕಡಿಮೆ ಖರ್ಚಿನಲ್ಲಿ ಕೆಂಪೇಗೌಡ ಏರ್‌ಪೋರ್ಟ್ ತಲುಪುವುದು ಹೇಗೆ?

ನೈಋತ್ಯ ರೈಲ್ವೆ ಜೆನರಲ್ ಮ್ಯಾನೇಜರ್ ಎಕೆ ಸಿಂಗ್ ಮಾತನಾಡಿ, ' ಆಗಸ್ಟ್ ಅಂತ್ಯದೊಳಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ, ಒಮ್ಮೆ ಸಚಿವಾಲಯ ಒಪ್ಪಿಗೆ ನೀಡಿದರೆ ತಕ್ಷಣವೇ ರೈಲು ಸಂಚಾರ ಆರಂಭಿಸುತ್ತೇವೆ' ಎಂದು ಹೇಳಿದರು.

2019ರ ಅಂತ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು ಆದರೆ, ವಿನ್ಯಾಸವನ್ನು ಬದಲಿಸಲಾಗಿತ್ತು, ಬಳಿಕ ಕೊರೊನಾ ಸೋಂಕಿನಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ನೂರಾರು ಉದ್ಯೋಗಿಗಳಿಗೆ ಇದರಿಂದ ಸಹಾಯವಾಗಲಿದೆ. 30 ರೂ.ಗಿಂತಲೂ ಕಡಿಮೆ ಪಾವತಿಸಿ ಏರ್‌ಪೋರ್ಟ್‌ಗೆ ಬರಬಹುದಾಗಿದೆ.

ಸರ್ಕಾರಿ ಬಸ್‌ಗಳಲ್ಲಿ ಹೆಬ್ಬಾಳಕ್ಕೆ 150 ರೂ., ಚಂದಾಪುರಕ್ಕೆ 320 ರೂ ನೀಡಬೇಕು, ಏರ್‌ಪೋರ್ಟ್ ಟ್ಯಾಕ್ಸಿ ಅಥವಾ ಕ್ಯಾಬ್‌ಗಳಿಗೆ 950 ರೂ.ಗಿಂತಲೂ ಹೆಚ್ಚು ಹಣ ನೀಡಬೇಕಾಗುತ್ತದೆ.

ರೈಲ್ವೆ ಇಲಾಖೆ ಅನುಮತಿ ನೀಡುತ್ತಿದ್ದಂತೆ ಸಂಚಾರ

ರೈಲ್ವೆ ಇಲಾಖೆ ಅನುಮತಿ ನೀಡುತ್ತಿದ್ದಂತೆ ಸಂಚಾರ

2019ರ ವರ್ಷಾಂತ್ಯದ ವೇಳೆಗೆ ಈ ಕಾಮಗಾರಿಯು ಪೂರ್ಣಗೊಳ್ಳಬೇಕಿತ್ತು. ಆದರೆ ರೈಲ್ವೆ ನಿಲ್ದಾಣದ ವಿನ್ಯಾಸ ಮತ್ತು ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ಸೋಂಕಿನ ಹಿನ್ನೆಲೆ ಕಾಮಗಾರಿಯು ವಿಳಂಬವಾಯಿತು. ಇದೀಗ ಆಗಸ್ಟ್ ತಿಂಗಳಾಂತ್ಯದ ವೇಳೆಗೆ ರೈಲ್ವೆ ನಿಲ್ದಾಣ ಮತ್ತು ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ ತಿಳಿಸಿದ್ದಾರೆ. ರೈಲ್ವೆ ಇಲಾಖೆಯು ಅನುಮೋದನೆ ನೀಡಿದ ಮರುದಿನದಿಂದಲೇ ರೈಲ್ವೆ ಸಂಚಾರವನ್ನು ಆರಂಭಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಟ್ರಾಫಿಕ್ ಕಿರಿಕಿರಿಯಿಲ್ಲದೇ ಏರ್ ಪೋರ್ಟ್ ತಲುಪಿ

ಟ್ರಾಫಿಕ್ ಕಿರಿಕಿರಿಯಿಲ್ಲದೇ ಏರ್ ಪೋರ್ಟ್ ತಲುಪಿ

ರೈಲ್ವೆ ಕಾಮಗಾರಿ ಪೂರ್ಣಗೊಂಡ ನಂತರ ಕೇವಲ 30 ರೂಪಾಯಿಗಳಲ್ಲೇ ಮೆಜೆಸ್ಟಿಕ್ ನಿಂದ ಬೆಂಗಳೂರು ಏರ್ ಪೋರ್ಟ್ ತಲುಪಬಹುದು. ಸದ್ಯದ ಮಟ್ಟಿಗೆ ಹೆಬ್ಬಾಳದಿಂದ ಏರ್ ಪೋರ್ಟ್ ಗೆ ಬಿಎಂಟಿಸಿ ಬಸ್ ಗಳಲ್ಲಿ ತೆರಳಲು 150 ರೂಪಾಯಿ ಟಿಕೆಟ್ ದರ ನಿಗದಿಗೊಳಿಸಲಾಗಿದೆ. ಚಂದಾಪುರ ಮತ್ತು ಎಲೆಕ್ಟ್ರಾನಿಕ್ ಸಿಟಿಯಿಂದ ಏರ್ ಪೋರ್ಟ್ ಗೆ 320 ರೂಪಾಯಿ ಟಿಕೆಟ್ ದರ ನಿಗದಿಗೊಳಿಸಲಾಗಿದೆ. ಇನ್ನು, ಖಾಸಗಿ ಕ್ಯಾಬ್ ಗಳಲ್ಲಿ ಏರ್ ಪೋರ್ಟ್ ಗೆ ತೆರಳುವುದಕ್ಕೆ 900 ರೂಪಾಯಿಗಿಂತಲೂ ಹೆಚ್ಚಾಗುತ್ತದೆ.

ಪ್ರತಿನಿತ್ಯ ಮೂರು ರೈಲುಗಳ ಸಂಚಾರ

ಪ್ರತಿನಿತ್ಯ ಮೂರು ರೈಲುಗಳ ಸಂಚಾರ

ಕೊರೊನಾವೈರಸ್ ಸೋಂಕು ಹರಡುವಿಕೆ ಹೆಚ್ಚಾದ ಹಿನ್ನೆಲೆ ಮಾರ್ಚ್ ತಿಂಗಳಿನಲ್ಲಿ ದೇವನಹಳ್ಳಿ-ಯಲಹಂಕ ಮಾರ್ಗದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಪ್ರತಿನಿತ್ಯ ಈ ಮಾರ್ಗದಲ್ಲಿ ಮೂರು ರೈಲುಗಳು ಸಂಚರಿಸುತ್ತಿದ್ದು, ಸಿಂಗಲ್ ಲೈನ್ ನಲ್ಲಿ ರೈಲುಗಳ ಸಂಚಾರದ ಸಂಖ್ಯೆ ಹೆಚ್ಚಿಸುವುದು ಸವಾಲಿನ ಕೆಲಸವಾಗಿತ್ತು. ಏಕೆಂದರೆ ಒಂದು ಮಾರ್ಗದಲ್ಲಿ ರೈಲ್ವೆ ಒಮ್ಮೆ ನಿರ್ದಿಷ್ಟ ಗುರಿ ತಲುಪಲು ಕನಿಷ್ಠ 30 ನಿಮಿಷ ತೆಗೆದುಕೊಳ್ಳುತ್ತಿತ್ತು.

ಕ್ಯಾಬ್ ಮತ್ತು ಟ್ಯಾಕ್ಸಿಗಳನ್ನೇ ನೆಚ್ಚಿಕೊಂಡಿರುವ ಪ್ರಯಾಣಿಕರು

ಕ್ಯಾಬ್ ಮತ್ತು ಟ್ಯಾಕ್ಸಿಗಳನ್ನೇ ನೆಚ್ಚಿಕೊಂಡಿರುವ ಪ್ರಯಾಣಿಕರು

ಈಗಿರುವ ಸಾಕಷ್ಟು ಏರ್‌ಪೋರ್ಟ್ ಸಿಬ್ಬಂದಿ ಕಡಿಮೆ ಆದಾಯಹೊಂದಿದ್ದಾರೆ. ಬಿಎಂಟಿಸಿ ವಾಯು, ವಜ್ರ ಸೇವೆ, ಕ್ಯಾಬ್‌ಗಳು, ಟ್ಯಾಕ್ಸಿ ಶೇರ್ ಮೂಲಕ ಓಡಾಡುತ್ತಿದ್ದಾರೆ. ಸೆಕ್ಯುರಿಟಿ, ಕಾರ್ಗೋ, ರೀಟೇಲ್, ಹೌಸ್‌ಕೀಪಿಂಗ್‌ನವರು ರಾತ್ರಿಪಾಳಿಯಲ್ಲೂ ಕೆಲಸ ನಿರ್ವಹಿಸುತ್ತಾರೆ. ಟರ್ಮಿನಲ್-2 ಪ್ರಾರಂಭವಾದಾಗಿನಿಂದ ಸಿಬ್ಬಂದಿಯ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

English summary
Bengalureans may soon be able to travel from the city centre to Kempegowda International Airport within an hour, sans the traffic jams. The railway station coming up near the Kempegowda International Airport is almost in the final stages of completion, authorities confirmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more