ಬೆಂಗಳೂರಿಗರೇ ಗಮನಿಸಿ: ಫೆ.5 ಮತ್ತು 6ರಂದು ನಗರದ ಈ ಪ್ರದೇಶಗಳಲ್ಲಿ ನೀರು ಸರಬರಾಜು ವ್ಯತ್ಯಯ

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಜಲಮಂಡಳಿ / BWSSB) ಮಹತ್ವದ ಮಾಹಿತಿಯೊಂದನ್ನು ನೀಡಿದೆ. ನಗರದ ಪ್ರಮುಖ ಬಡಾವಣೆಗಳಲ್ಲಿ ಫೆಬ್ರವರಿ 5 ಮತ್ತು 6ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದರಿಂದ ನೀರು ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹ‌ರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮಂಡಳಿಯ ವತಿಯಿಂದ ಸಾರಕ್ಕಿ ಮಾರ್ಗವಾಗಿ ಹಾದುಹೋಗುವ ನೀರಿನ ಪೈಪ್‌ಲೈನ್‌ಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆಯಡಿ 1,200 ಮಿ.ಮೀ. ಮತ್ತು 700 ಮಿ.ಮೀ. ವ್ಯಾಸದ ಬೃಹತ್ ಕೊಳವೆ ಮಾರ್ಗಗಳನ್ನು ಜೋಡಣೆ ಮಾಡುವ ಕಾರ್ಯ ನಡೆಯಲಿದೆ.

Bengaluru

ಈ ತಾಂತ್ರಿಕ ಕಾಮಗಾರಿಯ ಕಾರಣದಿಂದ ಕಾವೇರಿ ನೀರು ಸರಬರಾಜು ಯೋಜನೆಯ ಮೊದಲನೇ ಮತ್ತು ಎರಡನೇ ಹಂತಗಳ ನೀರು ಸರಬರಾಜು ಮಾಡುವ ಯಂತ್ರಾಗಾರಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ. ಆದ್ದರಿಂದ, ಫೆಬ್ರವರಿ 5ರ ಗುರುವಾರ ಬೆಳಿಗ್ಗೆ 6 ಗಂಟೆಯಿಂದ, ಫೆಬ್ರವರಿ 6ರ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ (ಒಟ್ಟು 24 ಗಂಟೆಗಳ ಕಾಲ) ನೀರು ಸರಬರಾಜು ಇರುವುದಿಲ್ಲ.

ನೀರು ಪೂರೈಕೆ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು

ದುರಸ್ತಿ ಕಾರ್ಯದಿಂದಾಗಿ ದಕ್ಷಿಣ, ಪಶ್ಚಿಮ ಮತ್ತು ಕೇಂದ್ರ ಬೆಂಗಳೂರಿನ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ. ಪಟ್ಟಿಯಲ್ಲಿರುವ ಪ್ರಮುಖ ಪ್ರದೇಶಗಳು ಇಂತಿವೆ:

1. ದಕ್ಷಿಣ ಬೆಂಗಳೂರು ಭಾಗ: ಬನಶಂಕರಿ 5ನೇ ಹಂತ, ಕುಮಾರಸ್ವಾಮಿ ಬಡಾವಣೆ (1 ಮತ್ತು 2ನೇ ಹಂತ), ಪದ್ಮನಾಭನಗರ, ಉತ್ತರಹಳ್ಳಿ, ಚಿಕ್ಕಲ್ಲಸಂದ್ರ, ಇಸ್ರೋ ಲೇಔಟ್, ಯಲಚೇನಹಳ್ಳಿ, ಜಯನಗರ (4, 5, 6, 7, 8, 9ನೇ ಬ್ಲಾಕ್ ಮತ್ತು ಟಿ ಬ್ಲಾಕ್), ಜೆ.ಪಿ.ನಗರ (1, 2, 3ನೇ ಹಂತ), ಬಸವನಗುಡಿ, ಹನುಮಗಿರಿ ನಗರ, ಕದಿರೇನಹಳ್ಳಿ.

2. ಕೇಂದ್ರ ಮತ್ತು ಪೂರ್ವ ಭಾಗ: ಎಂ.ಜಿ ರಸ್ತೆ, ಶಾಂತಿನಗರ, ಕೋರಮಂಗಲ (2 ರಿಂದ 8ನೇ ಬ್ಲಾಕ್), ವಿಲ್ಸನ್ ಗಾರ್ಡನ್, ರಿಚ್‌ಮಂಡ್ ಟೌನ್, ದೊಮ್ಮಲೂರು, ಆಡುಗೋಡಿ, ನೀಲಸಂದ್ರ, ಅಶೋಕ ನಗರ, ವಿವೇಕ್ ನಗರ, ಈಜೀಪುರ, ನಿಮಾನ್ಸ್ ಆಸ್ಪತ್ರೆ ಸುತ್ತಮುತ್ತ.

3. ಇತರೆ ಪ್ರದೇಶಗಳು: ಮಾಗಡಿ ರಸ್ತೆ, ಚಾಮರಾಜಪೇಟೆ, ಹೊಸಕೆರೆಹಳ್ಳಿ, ಶ್ರೀನಗರ, ಮಡಿವಾಳ, ಸೆಂಟ್ ಜಾನ್ಸ್ ಆಸ್ಪತ್ರೆ, ಸುದ್ದಗುಂಟೆ ಪಾಳ್ಯ, ಟೀಚರ್ಸ್ ಕಾಲೊನಿ, ಕನಕಪುರ ಮುಖ್ಯರಸ್ತೆ.

ಈ ಮೇಲೆ ತಿಳಿಸಿದ ಪ್ರದೇಶಗಳಲ್ಲದೆ, ಇವುಗಳಿಗೆ ಹೊಂದಿಕೊಂಡಿರುವ ಸುತ್ತಮುತ್ತಲಿನ ಬಡಾವಣೆಗಳಲ್ಲೂ ನೀರಿನ ಒತ್ತಡ ಕಡಿಮೆ ಇರುವ ಸಾಧ್ಯತೆಯಿದೆ.

ಒಂದು ದಿನ ಪೂರ್ತಿ ನೀರು ಸರಬರಾಜು ಸ್ಥಗಿತಗೊಳ್ಳಲಿರುವ ಕಾರಣ, ಸಾರ್ವಜನಿಕರು ತಮಗೆ ಅಗತ್ಯವಿರುವ ನೀರನ್ನು ಮುಂಚಿತವಾಗಿಯೇ ಸಂಗ್ರಹಿಸಿಟ್ಟುಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ. ಕಾಮಗಾರಿ ಪೂರ್ಣಗೊಂಡ ನಂತರ ಶುಕ್ರವಾರ ಬೆಳಿಗ್ಗೆಯಿಂದ ಎಂದಿನಂತೆ ನೀರು ಸರಬರಾಜು ಆಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+