ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈ ವಾಕ್ ಬಳಕೆಗೆ ಮುಕ್ತ
ಬೆಂಗಳೂರು, ಜುಲೈ, 14: ಕೊನೆಗೂ ಮಾನ್ಯತಾ ಟೆಕ್ ಪಾರ್ಕ್ ಬಳಿ ನಿರ್ಮಾಣಮಾಡಲಾಗಿದ್ದ ಸ್ಕೈ ವಾಕ್ ಜನರ ಸೇವೆಗೆ ಮುಕ್ತವಾಗಿದೆ.
ಟೆಕ್ಕಿಗಳಿಗೆ ಇದು ಅನುಕೂಲವಾಗಲಿದ್ದು ಸದಾ ಸಂಚಾರ ದಟ್ಟಣೆ ಎದುರಿಸುತ್ತಿದ್ದ ಪಾದಚಾರಿಗಳಿಗೆ ಕೊಂಚ ಮಟ್ಟಿನ ಸಮಾಧಾನ ತಂದಿದೆ. ಅಪಘಾತ ವಲಯ ಎಂದು ಕುಖ್ಯಾತಿ ಪಡೆದುಕೊಂಡಿದ್ದ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈವಾಕ್ ನಿರ್ಮಾಣವಾಗಿದ್ದು ಜನರು ಸದುಪಯೋಗ ಪಡೆದುಕೊಳ್ಳಬೇಕಿದೆ.[ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈ ವಾಕ್ ಸಿದ್ಧ]

ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಕೈ ವಾಗ್ ಬಳಕೆಗೆ ಸಿದ್ಧವಾಗಿರುವ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ.


ಈ ಭಾಗದಲ್ಲಿ ನಡೆದ ಅಪಘಾತಗಳು ಜೀವಗಳನ್ನು ಬಲಿ ತೆಗೆದುಕೊಂಡಿದ್ದವು. ಮಾಧ್ಯಮಗಳಲ್ಲಿಯೂ ದೊಡ್ಡ ಸುದ್ದಿಯಾಗಿತ್ತು. ಕಳೆದ ನವೆಂಬರ್ ನಲ್ಲೇ ಸ್ಕೈ ವಾಕ್ ನಿರ್ಮಾಣಕ್ಕೆ ಸಕಲ ಸಿದ್ಧತೆ ಆರಂಭವಾಗಿತ್ತು.












Click it and Unblock the Notifications