Bengaluru-Mangaluru Highway: ರಾಜ್ಯದಲ್ಲಿ ಮತ್ತೊಂದು ಟೋಲ್ ಸಂಗ್ರಹ ಪ್ರಾರಂಭ: ವಾಹನ ಸವಾರರಿಗೆ ಶಾಕ್‌!

ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ವಾಹನ ಸವಾರರಿಂದ ಟೋಲ್ ಸಂಗ್ರಹ ಮಾಡುವ ವಿಚಾರವಾಗಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇದರ ನಡುವೆ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮತ್ತೊಂದು ಶಾಕ್‌ ನೀಡಿದ್ದು, ಇಂದಿನಿಂದ ಡಿಸೆಂಬರ್‌ 16ರಿಂದ ಬೆಂಗಳೂರು ಹಾಗೂ ಕರಾವಳಿ ಮಾರ್ಗವಾಗಿ ಸಂಚಾರ ಮಾಡುವವರಿಗೆ ಹೊಸ ಟೋಲ್ ಶುಲ್ಕ ಬರೆ ಎಳೆಯಲಾಗಿದೆ.

ಆದರೆ, ಈ ಹೊಸ ಟೋಲ್ ಮಾರ್ಗದಲ್ಲಿ ಕಾಮಗಾರಿಯೇ ಪೂರ್ಣವಾಗಿಲ್ಲ. ಈ ರೀತಿ ಇರುವಾಗಲೇ ಕಾಮಗಾರಿ ಆರಂಭಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇಂದಿನಿಂದ ಟೋಲ್ ಶುಲ್ಕ ಸಂಗ್ರಹ ಪ್ರಾರಂಭವಾಗಿದ್ದು, ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆಯೂ ಟೋಲ್‌ ಸಂಗ್ರಹ ಮುಂದುವರಿದಿದೆ.

Bengaluru-Mangaluru Highway Another toll collection begins in the state despite public opposition

ಎನ್‌ಹೆಚ್‌ಎಐ ಇದೀಗ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಚೌಳಗೆರೆ ಎನ್ನುವ ಪ್ರದೇಶದಲ್ಲಿ ಇಂದಿನಿಂದ (ಡಿಸೆಂಬರ್ 16 ಸೋಮವಾರ) ಟೋಲ್ ಸಂಗ್ರಹ ಮಾಡುತ್ತಿದೆ. ಈ ಟೋಲ್ ಸಂಗ್ರಹಕ್ಕೆ ಈಗಾಗಲೇ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈ ಭಾಗದಲ್ಲಿ ರಸ್ತೆಗಳನ್ನೇ ಅಭಿವೃದ್ಧಿ ಮಾಡಿಲ್ಲ. ರಸ್ತೆಗಳ ಕಾಮಗಾರಿಯು ಅಪೂರ್ಣವಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಮತ್ತೊಂದು ಟೋಲ್‌ ಕಟ್ಟುವಂತೆ ಆಗಿದೆ.

ಈ ಭಾಗದಲ್ಲಿ ಟೋಲ್ ಸಂಗ್ರಹ ಮಾಡುವುದಕ್ಕೆ ವಾಹನ ಸವಾರರು, ಸ್ಥಳೀಯರು ಹಾಗೂ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಭಾಗದಲ್ಲಿ ರಸ್ತೆಯನ್ನೇ ದುರಸ್ತಿ ಮಾಡಿಲ್ಲ. ಈ ರೀತಿ ಕಳಪೆ ರಸ್ತೆ ಇರುವಾಗ ಯಾವ ರೀತಿ ಶುಲ್ಕ ಸಂಗ್ರಹ ಮಾಡುತ್ತಿರಿ ಎಂದು ದೂರಿದ್ದರು. ಈ ಭಾಗದಲ್ಲಿ ಸರಣಿ ಪ್ರತಿಭಟನೆಗಳು ಸಹ ನಡೆದಿವೆ. ಇದರ ಹೊರತಾಗಿಯೂ ಸೋಮವಾರದಿಂದ ಶುಲ್ಕ ಸಂಗ್ರಹ ಪ್ರಾರಂಭವಾಗಿದೆ. ಇಲ್ಲಿನ ಜನರ ಪ್ರತಿಭಟನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕ್ಯಾರೇ ಎಂದಿಲ್ಲ.

ಹಾಸನದಲ್ಲಿ ಟೋಲ್‌ ಸಂಗ್ರಹಕ್ಕೆ ವಿರೋಧವೇಕೆ: ಇನ್ನು ಈ ಭಾಗದಲ್ಲಿ ಟೋಲ್ ಸಂಗ್ರಹ ಮಾಡಬಾರದು ಎಂದು ಎರಡು ಕಾರಣಗಳಿಗಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೊದಲನೆಯದಾಗಿ ಹಾಸನ ಜಿಲ್ಲೆಯ ಶಾಂತಿಗ್ರಾಮ ಭಾಗದಲ್ಲಿ ಒಂದು ಟೋಲ್ ಈಗಾಗಲೇ ಇದೆ. ಇದೀಗ ಇದರಿಂದ ಅಂದಾಜು 35 ಕಿ. ಮೀ. ದೂರದಲ್ಲೇ ಮತ್ತೊಂದು ಟೋಲ್ ಪ್ಲಾಜಾ ನಿರ್ಮಾಣ ಮಾಡಲಾಗಿದೆ. ಇದನ್ನು ಸೋಮವಾರ ಉದ್ಘಾಟಿಸಲಾಗಿದೆ. ಆದರೆ ಇದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಈಗಾಗಲೇ ಇಲ್ಲಿನ ಜನ ಟೋಲ್ ಸಂಗ್ರಹ ಮಾಡಬಾರದು ಎಂದು ಅಧಿಕಾರಿಗಳಿಗೆ ಮನವಿ ಸಹ ಸಲ್ಲಿಸಲಾಗಿದ್ದರು. ಇಷ್ಟಾದರೂ ಜನರ ಮನವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಆಲೂರು ತಾಲ್ಲೂಕಿನ ಚೌಲಗೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟೋಲ್ ಸಂಗ್ರಹವನ್ನು ಶುರುಮಾಡಲಾಗಿದೆ. ಸೋಮವಾರ ಸಹ ಇದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ಕರ್ನಾಟಕ ರಕ್ಷಣಾ ವೇದಿಕೆ ಸಹ ಇದಕ್ಕೆ ತನ್ನ ವಿರೋಧವನ್ನು ದಾಖಲಿಸಿದೆ.

ರಾಜ್ಯದಲ್ಲಿ ಈಗಾಗಲೇ ಟೋಲ್ ಸಂಗ್ರಹ ಮಾಡುವುದಕ್ಕೆ ಹಾಗೂ ಅದರ ಶುಲ್ಕದ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗುತ್ತಲ್ಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+