ಮದುವೆ ಮುರಿಯಲು ಈತ ಮಾಡಿದ್ದು ಎಂಥ ಮನೆಹಾಳು ಐಡಿಯಾ!
ತಾನು ಇಷ್ಟಪಟ್ಟ ಹುಡುಗಿಗೆ ಬೇರೆ ವ್ಯಕ್ತಿ ಜತೆ ಮದುವೆ ನಿಶ್ಚಯವಾಗಿದೆ ಎಂದು ಗೊತ್ತಾದ ಬೆಂಗಳೂರಿನ ಪ್ರವೀಣ ಮಾಡಿದ್ದೇನು ಗೊತ್ತಾ? ಆ ಮದುವೆ ಮುರಿಯಲು ಯತ್ನಿಸಿ ಈಗ ಹೆಬ್ಬಾಳ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರು, ಫೆಬ್ರವರಿ 25: ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು, ಮಹಿಳೆಯೊಬ್ಬರ ಮದುವೆ ಮುರಿಯಲು ಯತ್ನಿಸಿದ ವ್ಯಕ್ತಿಯನ್ನು ಹೆಬ್ಬಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಪ್ರಕಟವಾಗಿದೆ. ಟಿ.ಪ್ರವೀಣ್ ಬಂಧಿತ. ನೇಹಾ ಎಂಬ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು, ಮದುವೆ ಮುರಿಯಲು ಯತ್ನಿಸಿದ್ದಾನೆ.
ಮಹಿಳೆ ಹಾಗೂ ಆಕೆ ಜತೆಗೆ ನಿಶ್ಚಿತಾರ್ಥವಾದ ವ್ಯಕ್ತಿಗೆ ಪ್ರವೀಣ್ ಸಂದೇಶಗಳನ್ನು ಕಳುಹಿಸಿದ್ದಾನೆ. ಹೆಬ್ಬಾಳ ಪೊಲೀಸರಿಗೆ ದೂರು ನೀಡಿರುವ ಮಹಿಳೆ, ಪ್ರವೀಣ್ ಹಾಗೂ ನಾನು ಎಂಜಿನಿಯರಿಂಗ್ ಓದುವಾಗ ಸಹಪಾಠಿಗಳಾಗಿದ್ದೀವಿ. 2014ರಲ್ಲಿ ಅವನನ್ನು ಕೊನೆಯದಾಗಿ ಭೇಟಿ ಮಾಡಿದ್ದೆ. ಆತ ಮದುವೆ ಪ್ರಸ್ತಾವ ಇಟ್ಟಿದ್ದ. ನಮ್ಮಿಬ್ಬರದೂ ಬೇರೆ ಜಾತಿಯಾದ್ದರಿಂದ ಎರಡೂ ಕುಟುಂಬದವರೂ ಒಪ್ಪಿರಲಿಲ್ಲ ಎಂದು ತಿಳಿಸಿದ್ದಾರೆ.[ವಾಟ್ಸಪ್ ಕಿರಿಕಿರಿ, ಎಲ್ಲರ 'ಸ್ಟೇಟಸ್' ಕಳಚಿದ ಫೇಸ್ಬುಕ್!]

ಯಾವಾಗ ಮನೆಯಲ್ಲಿ ಒಪ್ಪಲಿಲ್ಲವೋ ಅಗ ಆಕೆ ಪ್ರವೀಣ್ ಜತೆಗೆ ಸಂಪರ್ಕ ಕಡಿತಗೊಳಿಸಿದ್ದಾರೆ. ಆದರೂ ಪ್ರವೀಣ್ ಪದೇಪದೇ ಕರೆಗಳನ್ನು ಮಾಡಿದ್ದಾನೆ. ಕೊನೆಗೆ 2016ರ ಫೆಬ್ರವರಿಯಿಂದ ಈಚೆಗೆ ಇಬ್ಬರ ಮಧ್ಯೆ ಮಾತುಕತೆ ನಿಂತುಹೋಗಿದೆ. ಆದರೆ ಡಿಸೆಂಬರ್ 2016ರಲ್ಲಿ ಆಕೆಗೆ ಅಮೆರಿಕದಲ್ಲಿರುವ ವ್ಯಕ್ತಿ ಜೊತೆಗೆ ನಿಶ್ಚಿತಾರ್ಥವಾಗಿದೆ ಎಂದು ಫೇಸ್ ಬುಕ್ ಮೂಲಕ ಪ್ರವೀಣ್ ಗೆ ಗೊತ್ತಾಗಿದೆ.[ಸಾಮಾಜಿಕ ಜಾಲ ತಾಣ ಬಳಕೆ: ಪೊಲೀಸ್ ಇಲಾಖೆ ನೀಡಿದ ಎಚ್ಚರಿಕೆ]
ಆಗಿನಿಂದ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದ ಪ್ರವೀಣ್, ಆ ಮಹಿಳೆಗೆ ಹಾಗೂ ಆಕೆಗೆ ನಿಶ್ಚಿತಾರ್ಥವಾಗಿದ್ದವರಿಗೆ ಸಂದೇಶ ಕಳುಹಿಸಿದ್ದಾನೆ. ಆಕೆಗೆ ಬೇರೆ ವ್ಯಕ್ತಿ ಜೊತೆಗೆ ಸಂಬಂಧ ಇದೆ ಎಂದು ಹೇಳಿದ್ದಾನೆ. ಆದರೆ ಪ್ರವೀಣ್ ಮೇಲೆ ಅನುಮಾನದಿಂದ ಆಕೆ ದೂರು ಕೊಟ್ಟ ಮೇಲೆ, ವಿಚಾರಣೆ ನಂತರ ಆತ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ.












Click it and Unblock the Notifications