Breaking News: ಬೆಂಗಳೂರು ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣ: ಶಂಕಿತ ಆರೋಪಿ ಆತ್ಮಹತ್ಯೆ, ಏನಿದು ಟ್ವಿಸ್ಟ್!
ಬೆಂಗಳೂರು, ಸೆಪ್ಟಂಬರ್ 25: ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯವನ್ನೆ ಬೆಚ್ಚಿಬೀಳಿಸಿದ್ದ ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಈತನೇ ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದ್ದ ಆರೋಪಿಯು ಒಡಿಶಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ರಾಷ್ಟ್ರ ರಾಜಧಾನಿ ನವದೆಹಲಿಯ ಶ್ರದ್ಧಾ ಮಾದರಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಾಲಕ್ಷ್ಮೀಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಆಕೆಯ ಮೃತದೇವನ್ನು ಸುಮಾರು 50ಕ್ಕೂ ಭಾಗಗಳಾಗಿ ಕತ್ತರಿಸಿದ್ದ ಆರೋಪಿ ಮನೆಯ ಫ್ರಿಡ್ಜ್‌ನಲ್ಲಿಟ್ಟು, ಸಾಕ್ಷ್ಯ ನಾಶ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದರು. ಮೊದಲು ಪತಿ ಮೇಲೆ, ನಂತರ ಆಕೆಯ ಸಹದ್ಯೋಗಿ ಆಶ್ರಪ್ ಮೇಲೆ ಸಂದೇಹ ಬಂದಿತ್ತು. ವಿಚಾರಣೆ ನಡೆಸಲಾಗಿತ್ತು. ಪ್ರಕರಣದಲ್ಲಿ ಮುಕ್ತಿರಂಜನ್ ರಾಯ್ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ಬಂದಿತ್ತು. ಈತನೇ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದರು.
ಈಗ ನೋಡಿದರೆ ಈ ಶಂಕಿತ ಕೊಲೆ ಆರೋಪಿ ಮುಕ್ತಿರಂಜನ್ ರಾಯ್ ಒಡಿಶಾರದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಆರೋಪ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಮೂಲಕ ಮಹಾಲಕ್ಷ್ಮೀ ಸಾವಿನ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮುಕ್ತಿರಂಜನ್ ರಾಯ್ ಹತ್ಯೆಗೀಡಾದ ಮಹಾಲಕ್ಷ್ಮೀಯ ಸಂಪರ್ಕ ಬಂದಿದ್ದ. ಮೃತ ಮಹಾಲಕ್ಷ್ಮೀ ಕುಟುಂಬಸ್ಥರು ಹಾಗೂ ಪತಿ ಅಶ್ರಫ್ ಸೇರಿ ನಾಲ್ವರು ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು. ಅದರಲ್ಲಿ ಈ ಆತ್ಮಹತ್ಯೆ ಮಾಡಿಕೊಂಡ ಮುಕ್ತಿರಂಜನ್ ರಾಯ್ ಸಹ ಒಬ್ಬರಾಗಿದ್ದಾರೆ.
ಸೆಪ್ಟಂಬರ್ ಮೊದಲ ವಾರವೇ ಮಹಾಲಕ್ಷ್ಮೀಯ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಮೃತ ಮಹಿಳೆ ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕ ಸಹ ಸೆಪ್ಟಂಬರ್ ಮೊದಲ ವಾರದಿಂದ ಕೆಲಸಕ್ಕೆ ಬಾರದೇ ಒಡಿಶಾಗೆ ತೆರಳಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಲಭ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಪೊಲೀಸರು ಕೆಲವರನ್ನು ವಿಚಾರಣೆಗೆ ಒಳಪಡಿಸಿದಾಗ, ಆರೋಪಿಗಳ ಒಡಿಶಾದಲ್ಲಿ ಇರುವ ಮಾಹಿತಿ ಲಭ್ಯವಾಗಿದೆ. ಅದರ ಆಧಾರದಲ್ಲಿ ಪೊಲೀಸರ ತಂಡ ಒಡಿಶಾಗೆ ತೆರಳಿತ್ತು. ಈ ವೇಳೆ ಶಂಕಿತ ಆರೋಪಿಗೆ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.












Click it and Unblock the Notifications