ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ನಂತರ ಹೆಚ್ಚಾದ ಬಾಡಿಗೆದಾರರ ಸಂಕಷ್ಟ: 45% ರಷ್ಟು ಬಾಡಿಗೆ ಹೆಚ್ಚಳ

|
Google Oneindia Kannada News

ಬೆಂಗಳೂರು, ನ. 20: ಕೊರೊನಾ ಸಾಂಕ್ರಾಮಿಕ ಮುಗಿದು ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಆದರೆ, ಇದು ಬಾಡಿಗೆದಾರರಿಗೆ ಸಂಕಷ್ಟವಾಗಿ ಪರಿಣಮಿಸಿದೆ. ಬೆಂಗಳೂರಿನ ಮಧ್ಯೆ ಭಾಗದಲ್ಲಿ ಬಿಡಿ, ಉಪನಗರಗಳಲ್ಲೂ ಬಾಡಿಗೆ 45% ರಷ್ಟು ಹೆಚ್ಚಳ ಕಂಡಿದೆ.

ಹೌದು, ಕೊರೊನಾ ಕಾಲದಲ್ಲಿ ಬಾಡಿಗೆ ಮನೆಗಳು, ಅಂಗಡಿಗಳು ಖಾಲಿ ಬಿದ್ದಿದ್ದವು. ಕೆಲವೆಡೆ ಮನೆ ಮಾಲೀಕರು ಬಾಡಿಗೆ ಹೆಚ್ಚಿಸಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಈಗ ಏಕಾಏಕಿ ಮನೆ ಬಾಡಿಗೆ ಹೆಚ್ಚಳ ಮಾಡಲಾಗುತ್ತಿದೆ. ಅದು ಪ್ರತಿವರ್ಷದಂತೆ ಶೇಕಡಾ 5 ರಷ್ಟು ಅಲ್ಲದೆ, 45% ಬಾಡಿಗೆ ಹೆಚ್ಚಳವಾಗಿರುವುದು ಬಾಡಿಗೆದಾರರನ್ನು ಭಾರೀ ಸಂಕಷ್ಟಕ್ಕೆ ನೂಕಿದೆ.

ಭಯದಲ್ಲಿ ದೀಪಾವಳಿ: ಭಾರತದಲ್ಲಿ ಕೊರೊನಾ ಹೊಸ ಅಲೆಗೆ ಕಾರಣವಾಗುತ್ತಾ ಬಿಎಫ್.7 ತಳಿ? ಭಯದಲ್ಲಿ ದೀಪಾವಳಿ: ಭಾರತದಲ್ಲಿ ಕೊರೊನಾ ಹೊಸ ಅಲೆಗೆ ಕಾರಣವಾಗುತ್ತಾ ಬಿಎಫ್.7 ತಳಿ?

ಹಲವು ಮಂದಿ ಕಳೆದ ಅರ್ಧ ವರ್ಷದಲ್ಲಿ 45% ಬಾಡಿಗೆ ಹೆಚ್ಚಳವನ್ನು ಕಂಡಿದ್ದಾರೆ. ಡಿಸೆಂಬರ್ 2021 ರಲ್ಲಿ 11,000 ರೂಪಾಯಿ ಬಾಡಿಗೆ ನೀಡುತ್ತಿದ್ದವರು ಕಳೆದ ಆರು ತಿಂಗಳ ಒಳಗೆ 16,000 ಬಾಡಿಗೆ ಕಟ್ಟುವಂತಾಗಿದೆ. ಅದು ಬೆಂಗಳೂರಿನಿಂದ ಸ್ವಲ್ಪ ದೂರದಲ್ಲಿರುವ, ಉಪನಗರಗಳೆಂದು ಕರೆಸಿಕೊಳ್ಳುವ ಪ್ರದೇಶಗಳಲ್ಲಿಯೂ ಬಾಡಿಗೆ ದರ ಗಗನ್ನಕ್ಕೇರಿದೆ.

ಅರ್ಧ ವರ್ಷದಲ್ಲೇ ಐದು ಸಾವಿರ ಬಾಡಿಗೆ ಏರಿಕೆ

ಅರ್ಧ ವರ್ಷದಲ್ಲೇ ಐದು ಸಾವಿರ ಬಾಡಿಗೆ ಏರಿಕೆ

ಬೆಂಗಳೂರಿನ ಉತ್ತರಕ್ಕಿರುವ ಮುನ್ನೆಕೊಳಲು ಗ್ರಾಮದಲ್ಲಿರುವ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸಿಸುತ್ತಿರುವ ಐಟಿ ಉದ್ಯೋಗಿ ಅನ್ವೇಶಾ ರೇ ಡಿಸೆಂಬರ್ 2021 ರಲ್ಲಿ ತಿಂಗಳಿಗೆ 11,000 ರೂ ಬಾಡಿಗೆಗೆ ಒಪ್ಪಿಕೊಂಡಿದ್ದರು. ಆದರೆ, ಬಾಡಿಗೆಯನ್ನು ಮಾರ್ಚ್‌ನಲ್ಲಿ ರೂ 13,000 ಕ್ಕೆ ಮತ್ತು ಅಕ್ಟೋಬರ್ 2022 ರಲ್ಲಿ 16,000 ರೂಪಾಯಿಗೆ ಹೆಚ್ಚಿಸಲಾಗಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಶೇಕಡಾ 45 ರಷ್ಟು ಹೆಚ್ಚಳವಾಗಿದೆ.

ಈ ಬಗ್ಗೆ ಅಪಾರ್ಟ್‌ಮೆಂಟ್‌ ಮಾಲೀಕರನ್ನು ಪ್ರಶ್ನಿಸಿರುವ ಅವರಿಗೆ ಮನೆ ಖಾಲಿ ಮಾಡುವ ಆಯ್ಕೆ ನೀಡಲಾಗಿದೆ. ಹೇಳಿದ ಬಾಡಿಗೆ ನೀಡಿ ಇಲ್ಲ ಮನೆ ಖಾಲಿ ಮಾಡಿ ಎಂಬ ಮಾರುಗಳು ಬಂದಿವೆ. ಏಕಾಏಕಿ ಮಾನೆ ಖಾಲಿ ಮಾಡಲು ಆಗದೆ ಹೆಚ್ಚಿನ ಮೊತ್ತ ಪಾವತಿಸುತ್ತಿದ್ದಾರೆ.

ಬೆಂಗಳೂರಿನತ್ತ ಮತ್ತೆ ಜನರ ವಲಸೆ, ಬಾಡಿಗೆ ಹೆಚ್ಚಳ

ಬೆಂಗಳೂರಿನತ್ತ ಮತ್ತೆ ಜನರ ವಲಸೆ, ಬಾಡಿಗೆ ಹೆಚ್ಚಳ

ಕೊರೊನಾ ಎರಡು ಅಲೆಗಳ ನಂತರ ಸಿಲಿಕಾನ್ ಸಿಟಿ ಸಹಜ ಜೀವನಕ್ಕೆ ಮರಳುತ್ತಿದೆ. ಜನರು ಮತ್ತೆ ತಮ್ಮ ಊರುಗಳಿಂದ ಹಿಂತಿರುಗುತ್ತಿದ್ದಾರೆ. ವಕ್‌ ಫ್ರಂ ಹೋಂ ಮುಗಿದ ಕಾರಣ ಹಲವು ಜನರು ಮತ್ತೆ ಬಾಡಿಗೆ ಮನೆಗಳಿಗೆ ಹಿಂತಿರುಗುತ್ತಿದ್ದಾರೆ. ಜನರ ವಲಸೆ ಮತ್ತೆ ಬೆಂಗಳೂರಿನತ್ತ ಬರುತ್ತಿರುವುದು ಕೂಡ ಬಾಡಿಗೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಲ್ಲಿ ಇತರ ಸ್ಥಳಗಳಲ್ಲಿ ಇರುವ ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ಮುಖ್ಯಸ್ಥರು ಹೇಳುವಂತೆ, ಕೋರಮಂಗಲ ಬ್ಲಾಕ್ 3, ಬ್ಲಾಕ್ 4 ನಂತಹ ಪ್ರಮುಖ ಸ್ಥಳಗಳಲ್ಲಿ ಬಾಡಿಗೆಗಳು ಶೇಕಡಾ 20 ರಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಕೋರಮಂಗಲದಲ್ಲಿ 20% ರಿಂದ 30% ಹೆಚ್ಚಾದ ಬಾಡಿಗೆ

ಕೋರಮಂಗಲದಲ್ಲಿ 20% ರಿಂದ 30% ಹೆಚ್ಚಾದ ಬಾಡಿಗೆ

ಕೋರಮಂಗಲದಲ್ಲಿ ಹಿಂದೆ ಸುಮಾರು 25,000 ರೂಪಾಯಿಗಳಿದ್ದ 2BHK ಅಪಾರ್ಟ್‌ಮೆಂಟ್‌ಗೆ ಈಗ 30,000 ರೂಪಾಯಿಯಿಂದ 40,000 ರೂಪಾಯಿ ವೆಚ್ಚವಾಗಲಿದೆ .

ಅಮೆರಿಕದ ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ಸ್ ಕೋಲ್ಡ್‌ವೆಲ್ ಬ್ಯಾಂಕರ್‌ನ ಸ್ಥಳೀಯ ಕಚೇರಿಯ ವ್ಯವಸ್ಥಾಪಕ ಪಾಲುದಾರ ಬಾಲಾಜಿ ಬದರಿನಾಥ್, ಕೋರಮಂಗಲದ ಪ್ರಮುಖ ಸ್ಥಳಗಳಲ್ಲಿನ ಬಾಡಿಗೆಗಳು ಶೇಕಡಾ 20 ರಿಂದ ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ''ಸುಸಜ್ಜಿತ 2BHK ಖಂಡಿತವಾಗಿಯೂ 30,000 ರಿಂದ 40,000 ರೂಪಾಯಿಗೆ ಏರಿಕೆಯಾಗಿದೆ. ಇಂದಿರಾನಗರದಂತಹ ಇತರ ಸ್ಥಳಗಳಲ್ಲಿ ಕೋರಮಂಗಲಕ್ಕಿಂತ ಬಾಡಿಗೆ ಶೇಕಡಾ 10 ರಷ್ಟು ಹೆಚ್ಚಿರುತ್ತದೆ'' ಎಂದು ಹೇಳಿದ್ದಾರೆ.

ಹೊಸ ರಿಯಲ್ ಎಸ್ಟೇಟ್ ಕೇಂದ್ರಗಳಾಗುತ್ತಿವೆ ಹೊರವಲಯಗಳು

ಹೊಸ ರಿಯಲ್ ಎಸ್ಟೇಟ್ ಕೇಂದ್ರಗಳಾಗುತ್ತಿವೆ ಹೊರವಲಯಗಳು

''ಬಿಟಿಎಂ ಹಂತ 4, ಎಚ್‌ಎಸ್‌ಆರ್ ಲೇಔಟ್, ಬೆಳ್ಳಂದೂರು ಮತ್ತು ಸರ್ಜಾಪುರದಂತಹ ಹೊರವಲಯಗಳಲ್ಲಿ ಹಲವಾರು ಸೂಕ್ಷ್ಮ ಮಾರುಕಟ್ಟೆಗಳು ರಿಯಲ್ ಎಸ್ಟೇಟ್ ಪಾಕೆಟ್‌ಗಳಾಗಿ ಹೊರಹೊಮ್ಮುತ್ತಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಿಯಲ್ ಎಸ್ಟೇಟ್ ಉದ್ಯಮ 100% ದರದಲ್ಲಿ ಬೆಳೆಯುತ್ತಿದೆ" ಎಂದು ಉದ್ಯಮಿಗಳು ಹೇಳುತ್ತಾರೆ.

ಜಯನಗರ, ಜೆಪಿ ನಗರ ಮತ್ತು ಬನಶಂಕರಿಯಂತಹ ಪ್ರದೇಶಗಳಲ್ಲಿಯೂ ಬಾಡಿಗೆಗಳು ಹೆಚ್ಚಿವೆ. ಜಯನಗರದಲ್ಲಿ 2BHK ಫ್ಲಾಟ್‌ಗಳಿಗೆ ಬಾಡಿಗೆ 20,000 ರಿಂದ 25,000 ರೂಪಾಯಿಗಳಿವೆ. ಇನ್ನು, ರೀಟೆಲರ್ಸ್ ಹೇಳುವಂತೆ ಹೆಚ್ಚುತ್ತಿರುವ ಬೇಡಿಕೆಯೇ ಬಾಡಿಗೆ ದರವನ್ನು ಹೆಚ್ಚಿಸುತ್ತಿದೆ ಎಂದಿದ್ದಾರೆ.

ನೀರು ತುಂಬದ ಪ್ರದೇಶಗಳಲ್ಲಿ ವಾಸಿಸಲು ಜನರ ಆಸಕ್ತಿ

ನೀರು ತುಂಬದ ಪ್ರದೇಶಗಳಲ್ಲಿ ವಾಸಿಸಲು ಜನರ ಆಸಕ್ತಿ

ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಪ್ರವಾಹ ಸೃಷ್ಟಿಸಿತ್ತು. ಇದು ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ತಕ್ಷಣದ ಪರಿಣಾಮವನ್ನು ಬೀರಲಿಲ್ಲ. ಆದರೆ, ಒಂದು ತಿಂಗಳ ನಂತರ ಮನೆ ಖರೀದಿದಾರರು, ಬಾಡಿಗೆದಾರರು ಹೆಚ್ಚು ಜಾಗೃತೆ ವಹಿಸಲಸಲು ಪ್ರಾರಂಭಿಸಿದ್ದಾರೆ ಎಂದು ರೀಲರ್‌ಗಳು ಹೇಳುತ್ತಾರೆ.

ಇನ್ನು, ಕಳೆದ ತಿಂಗಳವರೆಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಕನಿಷ್ಠ 10% ಜನರು ಜಲಾವೃತವಾಗುವ ಸಾಧ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿ ಹೊಸ ಆಸ್ತಿಗಳನ್ನು ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ಆಸಕ್ತಿ ವಹಿಸಿದ್ದಾರೆ ಎಂದು ಅನೇಕರು ಹೇಳಿದ್ದಾರೆ.

ಪ್ರವಾಹವು ನಗರದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಭಾರೀ ಹೊಡೆತ ನೀಡದಿದ್ದರೂ ಕೂಡ ಹಲವಾರು ಅಪಾರ್ಟ್‌ಮೆಂಟ್‌ಗಳಲ್ಲಿ, ವಿಶೇಷವಾಗಿ ಐಷಾರಾಮಿ ವಿಲ್ಲಾಗಳಲ್ಲಿ ಬಾಡಿಗೆ ಕಡಿಮೆಯಾಗಿದೆ.

*ಒಟ್ಟಿಗೆ ವಾಸಿಸುವವವರು ಸಂಖ್ಯೆ ಹೆಚ್ಚಳ*

ಹೆಚ್ಚಿನ ಬಾಡಿಗೆ ನೀಡಲು ಆಗದ ಜನರು ಅನೇಕರು ಕೋ-ಲೀವಿಂಗ್ (ಒಟ್ಟಿಗೆ ವಾಸಿಸುವ) ಸ್ಥಳಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಇಲ್ಲಿ ವೈ-ಫೈ, ಕ್ಲೀನಿಂಗ್ ಸೇವೆಗಳು ಮತ್ತು ವಾರದ ಈವೆಂಟ್‌ಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳ ಸೌಕರ್ಯಗಳೊಂದಿಗೆ ಸುಸಜ್ಜಿತ ಅಪಾರ್ಟ್ಮೆಂಟ್‌ಗಳನ್ನು ಒದಗಿಸುತ್ತದೆ.

(ಮಾಹಿತಿ ಕೃಪೆ- ಮನಿ ಕಂಟ್ರೋಲ್)

English summary
Bengaluru landlord increased the rent up to 45% in less than a year. even in areas considered dormitory suburbs. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X