Lalbagh: ಲಾಲ್‌ಬಾಗ್‌ಗೆ ಹೋಗುವ ಮುನ್ನ ತಿಳಿಯಿರಿ, ಪ್ರವೇಶ ಶುಲ್ಕ ಏರಿಕೆ
ಬೆಂಗಳೂರು, ನವೆಂಬರ್ 04: ಉದ್ಯಾನ ನಗರಿ ಬೆಂಗಳೂರಿನ ಲಾಲ್‌ಬಾಗ್‌ಗೆ ಹೋಗುವ ಮುನ್ನ ಇದನ್ನು ಓದಿ. ತೋಟಗಾರಿಕಾ ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಿರುವ ಲಾಲ್‌ಬಾಗ್‌ನ ಪ್ರವೇಶ ಶುಲ್ಕವನ್ನು ಭಾರೀ ಏರಿಕೆ ಮಾಡಲಾಗಿದೆ. ದಿನನಿತ್ಯ ಸಾವಿರಾರು ಜನರು ನಗರದ ಜಂಟಾಟದಿಂದ ತಪ್ಪಿಸಿಕೊಳ್ಳಲು ಲಾಲ್‌ಬಾಗ್‌ಗೆ ಭೇಟಿ ನೀಡುತ್ತಾರೆ. ಈಗ ಅವರು ಹೊಸ ದರವನ್ನು ಕಟ್ಟಿ ಪವೇಶ ಪಡೆಯಬೇಕಿದೆ.
ತೋಟಗಾರಿಕಾ ಇಲಾಖೆ ಲಾಲ್‌ಬಾಗ್ ಪ್ರವೇಶ ಶುಲ್ಕವನ್ನು ಏರಿಕೆ ಮಾಡುವ ಮೂಲಕ ಪ್ರವಾಸಗರ ಜೇಬಿಗೆ ಕತ್ತರಿ ಹಾಕಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ ನೂರಾರು ಜನರು, ವಾರಾಂತ್ಯ ಮತ್ತು ಸರ್ಕಾರಿ ರಜೆ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಜನರು ಲಾಲ್‌ಬಾಗ್‌ಗೆ ಭೇಟಿ ನೀಡುತ್ತಾರೆ.

ಪ್ರವೇಶ ಶುಲ್ಕ ಏರಿಕೆ: ಲಾಲ್‌ಬಾಗ್ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ ಎಷ್ಟು ಎಂದು ಪ್ರವೇಶ ದ್ವಾರದ ಮುಂದೆಯೇ ಬೋರ್ಡ್ ಹಾಕಲಾಗಿದೆ. ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುವಾಗ ದಿನಕ್ಕೆ ಲಕ್ಷಾಂತರ ಜನರು ಭೇಟಿ ನೀಡಲಿದ್ದು, ಹೊಸ ಶುಲ್ಕದಿಂದ ಹೊರೆಯಾಗಿದೆ ಎಂದು ದೂರಲಾಗುತ್ತಿದೆ.
ಲಾಲ್‌ಬಾಗ್ ಪ್ರವೇಶಕ್ಕೆ 12 ವರ್ಷ ಮೇಲ್ಪಟ್ಟವರಿಗೆ ಮೊದಲು 30 ರೂ. ಶುಲ್ಕವಿತ್ತು. ಅದನ್ನು ಈಗ 50 ರೂ.ಗೆ ಏರಿಕೆ ಮಾಡಲಾಗಿದೆ. 6-12 ವರ್ಷದ ಮಕ್ಕಳಿಗೆ ಮೊದಲು 10 ರೂ. ಶುಲ್ಕವಿತ್ತು. ಅದನ್ನು ಈಗ 20 ರೂ.ಗಳಿಗೆ ಏರಿಕೆ ಮಾಡಲಾಗಿದೆ.
12 ವರ್ಷ ಮೇಲ್ಪಟ್ಟವರಿಗೆ 2020ರ ತನಕ 25 ರೂ. ಶುಲ್ಕವಿತ್ತು. 2021ರ ಫೆಬ್ರವರಿಯಲ್ಲಿ ಪ್ರವೇಶ ಶುಲ್ಕವನ್ನು 5 ರೂ. ಏರಿಕೆ ಮಾಡಿ, 30 ರೂ. ಮಾಡಲಾಗಿತ್ತು. ಆದರೆ ಈಗ ಅದನ್ನು ಏಕಾಏಕಿ 50 ರೂ. ಮಾಡಲಾಗಿದೆ.
ವಾಹನ ನಿಲುಗಡೆ ಶುಲ್ಕದ ವಿವರ. ದ್ವಿಚಕ್ರವಾಹನಕ್ಕೆ 30 ರೂ. ನಾಲ್ಕು ಚಕ್ರದ ವಾಹನಕ್ಕೆ 60 ರೂ., ಟೆಂಪೋ ಟ್ರಾಲೆರ್ಸ್‌ಗೆ 100 ರೂ. ಮತ್ತು ಬಸ್‌ಗಳಿಗೆ 200 ರೂ. ಶುಲ್ಕವಿದೆ. ಲಾಲ್‌ಬಾಗ್ ಪ್ರವೇಶ ದ್ವಾರದ ಮುಂದೆ ಹೊಸ ಶುಲ್ಕದ ಬೋರ್ಡ್ ಹಾಕಲಾಗಿದ್ದು, ಪರಿಷ್ಕೃತ ಶುಲ್ಕ ಈಗಾಗಲೇ ಜಾರಿಗೆ ಬಂದಿದೆ.
ಲಾಲ್‌ಬಾಗ್ ಬೆಂಗಳೂರು ನಗರದ ಪ್ರಮುಖ ಪ್ರವಾಸಿ ತಾಣ. ಇದರ ನಿರ್ವಹಣೆಯನ್ನು ತೋಟಗಾರಿಕಾ ಇಲಾಖೆ ನೋಡಿಕೊಳ್ಳುತ್ತದೆ. ಲಾಲ್‌ಬಾಗ್ ಸಸ್ಯತೋಟದಲ್ಲಿ ವಿಶ್ವದ ಹಲವಾರು ರಾಷ್ಟ್ರಗಳ ನೂರಾರು ಸಸ್ಯಗಳನ್ನು ಉಳಿಸಿ, ಬೆಳೆಸಿ, ಪೋಷಿಸಿಕೊಂಡು ಬರಲಾಗುತ್ತಿದೆ.
1760ರಿಂದಲೂ ದೇಶಿ ಮತ್ತು ವಿದೇಶಿ ಪುಷ್ಪ, ವೃಕ್ಷ, ಪೊದೆಗಳನ್ನು ಬೆಳೆಸಿ ಜೈವಿಕ ವೈವಿಧ್ಯಗಳನ್ನು ಕಾಪಾಡಲಾಗುತ್ತಿದೆ. ದಕ್ಷಿಣ ಬೆಂಗಳೂರಿನ ಪ್ರದೇಶದಲ್ಲಿರುವ ಲಾಲ್‌ಬಾಗ್ ಸುಮಾರು 240 ಎಕರೆಗಳಷ್ಟು ವಿಸ್ತಾರವನ್ನು ಹೊಂದಿದೆ. 1854ಕ್ಕೂ ಹೆಚ್ಚು ವಿಧದ ಸಸ್ಯಗಳು ಮತ್ತು ಮರಗಳಿಗೆ ಇದು ನೆಲೆಯಾಗಿದೆ.
1856ರಲ್ಲಿ ಇದನ್ನು ಸಸ್ಯೋದ್ಯಾನ ಎಂದು ಘೋಷಣೆ ಮಾಡಲಾಯಿತು. ಆರಂಭದಲ್ಲಿ ಉದ್ಯಾನಕ್ಕೆ ಮೊಘಲ್ ಸ್ಪರ್ಶವಿತ್ತು ಕಾಲಾನಂತರದಲ್ಲಿ ಉದ್ಯಾನದ ವಿನ್ಯಾಸವನ್ನು ತೋಟಗಾರಿಕೆ ಇಲಾಖೆ ಬದಲಾವಣೆ ಮಾಡಿದೆ. ಪ್ರತಿದಿನ ಹಲವಾರು ಪ್ರವಾಸಿಗರು ಲಾಲ್‌ಬಾಗ್‌ಗೆ ಭೇಟಿ ನೀಡುತ್ತಾರೆ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications