ಸೆಪ್ಟೆಂಬರ್ 15ರಿಂದ ಬೆಂಗ್ಳೂರು ಸಂಗೀತ ಹಬ್ಬದ ಕಾರ್ಯಕ್ರಮ ವಿವರ

ಸೆಪ್ಟೆಂಬರ್ 6ರಿಂದ 25ರವರೆಗೆ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಕಲಾ ಹಬ್ಬ 2017 ಆಯೋಜಿಸಲಾಗಿದೆ. ಇದು ಹತ್ತನೇ ವರ್ಷದ ಸಂಭ್ರಮವಾಗಿದ್ದು, 'ಕಲೆಯ ಮೂಲಕ ಸೌಹಾರ್ದ ಆಚರಣೆ' ಎಂಬುದು ಈ ಕಲಾ ಹಬ್ಬದ ಶೀರ್ಷಿಕೆಯಾಗಿದೆ. ಸೆಪ್ಟೆಂಬರ್ 6 ಹಾಗೂ 22ನೇ ತಾರೀಕು ಹೊರತುಪಡಿಸಿ ಉಳಿದೆಲ್ಲ ದಿನವೂ ಪ್ರವೇಶ ಉಚಿತವಾಗಿರುತ್ತದೆ.

ಈ ಸಂಭ್ರಮದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಈ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿದೆ. ಪ್ರತಿ ವರ್ಷವೂ ಕನಿಷ್ಠ ಎಂಟು ಸ್ಥಳಗಳಲ್ಲಿ ಒಂಬತ್ತು ದಿನದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು.

ಈ ವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಕಲಾ ಹಬ್ಬದಲ್ಲಿ ಸಾವಿರದ ಐನೂರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದಾರೆ. ಗುರುವಾರ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾ.ಸುಮಾ ಸುಧೀಂದ್ರ ಹಾಗೂ ಡಾ.ವೀಣಾ ಮೂರ್ತಿ ವಿಜಯ್ ಇಡೀ ಕಲಾ ಹಬ್ಬದ ವಿವರಣೆ ಹಾಗೂ ಮಾಹಿತಿ ನೀಡಿದರು.

ಎಲ್ಲ ಕಲಾಸಕ್ತರನ್ನು ತಲುಪುವ ಉದ್ದೇಶದಿಂದ ಈ ಹತ್ತನೇ ವರ್ಷದ ಕಲಾ ಹಬ್ಬವನ್ನು ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಹನ್ನೊಂದು ದಿನಗಳ ಈ ಕಾರ್ಯಕ್ರಮವನ್ನು ಹತ್ತು ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಉದ್ಯಾನದಂಥ ಸ್ಥಳಗಳಲ್ಲೂ ಕಲಾ ಹಬ್ಬವನ್ನು ನಿಗದಿ ಮಾಡಲಾಗಿದೆ.

ಮೆಕ್ಸಿಕೋ, ಇಸ್ರೇಲ್, ಸೆರ್ಬಿಯಾ, ಯುನೈಟೆಡ್ ಕಿಂಗ್ ಡಮ್, ಆಸ್ಟ್ರಿಯಾ, ನೆದರ್ ಲ್ಯಾಂಡ್, ಶ್ರೀಲಂಕಾ, ಬಾಂಗ್ಲಾದೇಶ್, ಬೆಲ್ಜಿಯಂ, ಮಲೇಷಿಯಾ ದೇಶಗಳ ಸಂಗೀತ ಹಾಗೂ ನೃತ್ಯ ತಂಡಗಳು ಭಾಗವಹಿಸಲಿವೆ. ದೈಹಿಕ ಸದೃಢತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಬೆಳಗ್ಗಿನ ಒಂದು ಅವಧಿಯನ್ನು ಯೋಗಕ್ಕಾಗಿ ಮೀಸಲಿಡಲಾಗಿದೆ.

ಉದ್ಘಾಟನೆ ಚಿತ್ರಕಲಾ ಪರಿಷತ್ ನಲ್ಲಿ

ಉದ್ಘಾಟನೆ ಚಿತ್ರಕಲಾ ಪರಿಷತ್ ನಲ್ಲಿ

ಮೊದಲ ದಿನ ಅಂದರೆ ಸೆಪ್ಟೆಂಬರ್ ಆರರಂದು ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರ ಕಲಾ ಪರಿಷತ್ ನ ಬಯಲು ರಂಗಮಂದಿರದಲ್ಲಿ ಅಧಿಕೃತವಾದ ಉದ್ಘಾಟನೆ ನಡೆಯಲಿದೆ. ಬೆಳದಿಂಗಳಲ್ಲಿ ಸೂಫಿ ಹಾಗೂ ಗಜಲ್ ಸಂಗೀತ ಕಾರ್ಯಕ್ರಮವಿದ್ದು, ಆ ನಂತರ ರಾಜಸ್ತಾನದ ಜನಪದ ಸಂಗೀತ ಕಾರ್ಯಕ್ರಮವಿದೆ.

ಈ ಕಾರ್ಯಕ್ರಮಗಳಿಗೆ ದಾನಿಗಳ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಇರುತ್ತದೆ. ಇದರ ಜತೆಗೆ ಸ್ಥಳದಲ್ಲಿ ಆಹಾರ ಪದಾರ್ಥಗಳ ಮಳಿಗೆ ಹಾಕಲಾಗಿರುತ್ತದೆ. ಅದೂ ಸಾವಯವ ಪದಾರ್ಥಗಳನ್ನು ಬಳಸಿ ತಯಾರಿಸಲಾಗಿರುತ್ತದೆ.

ಮಲ್ಲಕಂಬ ನೋಡಿ

ಮಲ್ಲಕಂಬ ನೋಡಿ

ಸೆಪ್ಟೆಂಬರ್ 8, ಸಂಜೆ 6.30ಕ್ಕೆ ಸ್ಥಳ: ಫೀನಿಕ್ಸ್ ಮಾರ್ಕೆಟ್ ಸಿಟಿ, ವೈಟ್ ಫೀಲ್ಡ್ ಮುಖ್ಯರಸ್ತೆ, ಮಹದೇವಪುರ

ಮಲ್ಲಕಂಬ- ಏರೋಬಿಕ್ ಶೋ: ಜೈ ಕರ್ನಾಟಕ ಮಲ್ಲಕಂಬ ಅಕಾಡೆಮಿ

ಸಂಗೀತ ಕಾರ್ಯಕ್ರಮ: ಮಾನಸಿ ಪ್ರಸಾದ್ ಮತ್ತು ತಂಡದಿಂದ

ಜಾನಪದ ರಾಕ್ ಬ್ಯಾಂಡ್: ಸ್ವರಾತ್ಮ

ಸಂಗೀತ

ಸಂಗೀತ

ಸೆಪ್ಟೆಂಬರ್ 9, ಸಂಜೆ 6.30ಕ್ಕೆ ಸ್ಥಳ: ಫೀನಿಕ್ಸ್ ಮಾರ್ಕೆಟ್ ಸಿಟಿ, ವೈಟ್ ಫೀಲ್ಡ್ ಮುಖ್ಯರಸ್ತೆ, ಮಹದೇವಪುರ

ಆಲ್ಟರ್ನೇಟಿವ್ ಪಾಪ್ ಮ್ಯೂಸಿಕ್ ಬ್ಯಾಂಡ್

ಮೋಹಿನಿಯಾಟ್ಟಂ

ಮೋಹಿನಿಯಾಟ್ಟಂ

ಸೆಪ್ಟೆಂಬರ್ 10, ಸಂಜೆ 6.30ಕ್ಕೆ ಸ್ಥಳ: ಫೀನಿಕ್ಸ್ ಮಾರ್ಕೆಟ್ ಸಿಟಿ, ವೈಟ್ ಫೀಲ್ಡ್ ಮುಖ್ಯರಸ್ತೆ, ಮಹದೇವಪುರ

ಮೋಹಿನಿಯಾಟ್ಟಂ- ಗೋಪಿಕಾ ವರ್ಮಾ

ಒಡಿಸ್ಸಿ- ಶರ್ಮಿಳಾ ಮುಖರ್ಜಿ ಮತ್ತು ತಂಡ

ಅರ್ಧನಾರೀಶ್ವರ ಕೂಚಿಪುಡಿ- ಡಾ.ವೆಂಕಟ್

ಕಥಕ್

ಕಥಕ್

ಸೆಪ್ಟೆಂಬರ್ 15, ಸಂಜೆ 6.30ಕ್ಕೆ ಸ್ಥಳ: ಭಾರತೀಯ ವಿದ್ಯಾ ಭವನ, ರೇಸ್ ಕೋರ್ಸ್ ರಸ್ತೆ

ಕಥಕ್- ನಳಿನಿ ಮತ್ತು ಕಮಲಿನಿ

ಕೂಚಿಪುಡಿ ಪ್ರದರ್ಶನ- ಸಮನ್ವಯ ನೃತ್ಯ್ ತಂಡದಿಂದ

ಎರಡು ಕಡೆ ಕಾರ್ಯಕ್ರಮ

ಎರಡು ಕಡೆ ಕಾರ್ಯಕ್ರಮ

ಸೆಪ್ಟೆಂಬರ್ 16, ಸಂಜೆ 6.30ಕ್ಕೆ ಸ್ಥಳ: ಅಲ್ಲಮ ಕಲಾ ಶಾಲೆ, ಮಾಗಡಿ ರಸ್ತೆ

ಜನಪದ ಹಬ್ಬ- ಬಾಂಗ್ಲಾದೇಶ್, ಮಣಿಪುರಿ, ಸತ್ತಾರಿಯಾ, ಸರಾಯ್ ಕೆಲ್ಲ, ಶ್ರೀಲಂಕಾ ತಂಡ, ಚಿಂದು ಯಕ್ಷಗಾನ.

ಸೆಪ್ಟೆಂಬರ್ 16, ಸಂಜೆ 6.30ಕ್ಕೆ ಸ್ಥಳ: ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರ ನಗರ

ಭರತನಾಟ್ಯ- ಪದ್ಮಿನಿ ರವಿ ಮತ್ತು ದೀಪ್ತಿ ಸುಧೀಂದ್ರ

ಕೂಚಿಪುಡಿ- ವೈಜಯಂತಿ ಕಾಶಿ ಮತ್ತು ತಂಡ

ಮೂರು ವಿವಿಧ ಕಾರ್ಯಕ್ರಮ

ಮೂರು ವಿವಿಧ ಕಾರ್ಯಕ್ರಮ

ಸೆಪ್ಟೆಂಬರ್ 17 , ಬೆಳಗ್ಗೆ 11ಕ್ಕೆ ಸ್ಥಳ: ಸುಕೃಷಿ ಆರ್ಗಾನಿಕ್ ಫಾರ್ಮ್, ನೆಲಮಂಗಲ

ಗಿಡ ನೆಡುವ ಕಾರ್ಯಕ್ರಮ

ಸೆಪ್ಟೆಂಬರ್ 17 , ಸಂಜೆ 6.30ಕ್ಕೆ ಸ್ಥಳ: ಫ್ರೀಡಂ ಪಾರ್ಕ್

ಜನಪದ ಹಬ್ಬ- ಬಾಂಗ್ಲಾದೇಶ್, ಮಣಿಪುರಿ, ಸತ್ತಾರಿಯಾ, ಸರಾಯ್ ಕೆಲ್ಲ, ಶ್ರೀಲಂಕಾ ತಂಡ

ಮತ್ತು ಯಕ್ಷಗಾನ- ಶ್ಸ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಲಿ, ಕೆರೆಮನೆ

ಸೆಪ್ಟೆಂಬರ್ 17 , ಸಂಜೆ 6.30ಕ್ಕೆ ಸ್ಥಳ: ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರ ನಗರ

ಒಡಿಸ್ಸಿ- ಸುಹಾಗ್ ನಳಿನಿ ದಾಸ್

ರಾಮಾಯಣ- ಕಲ್ಪನಾ ಡ್ಯಾನ್ಸ್ ಥಿಯೇಟರ್, ಮಲೇಷಿಯಾ

ಸಂಗೀತ ನಾಟಕ

ಸಂಗೀತ ನಾಟಕ

ಸೆಪ್ಟೆಂಬರ್ 22, ರಾತ್ರಿ 7.30ಕ್ಕೆ ಸ್ಥಳ: ಚೌಡಯ್ಯ ಸ್ಮಾರಕ ಭವನ

ಮಹೇಶ್ ದತ್ತಾನಿ ಅವರ 'ಗೌಹಾರ್' ಸಂಗೀತ ಒಳಗೊಂಡ ನಾಟಕ, ಹಿಂದೂಸ್ತಾನಿ ಸಂಗೀತ.

ಸಂಗೀತ ಕಾರ್ಯಕ್ರಮ

ಸಂಗೀತ ಕಾರ್ಯಕ್ರಮ

ಸೆಪ್ಟೆಂಬರ್ 23, ಸಂಜೆ 6.30ಕ್ಕೆ ಸ್ಥಳ: ಚೌಡಯ್ಯ ಸ್ಮಾರಕ ಭವನ

ಕರ್ನಾಟಿಕ್ ಕ್ರಾಸ್ ಓವರ್ ಫ್ಯೂಷನ್ ಸಂಗೀತ ಕಾರ್ಯಕ್ರಮ

ಶೋಭನಾ ಅವರಿಂದ ನೃತ್ಯ

ಶೋಭನಾ ಅವರಿಂದ ನೃತ್ಯ

ಸೆಪ್ಟೆಂಬರ್ 24, ಮಧ್ಯಾಹ್ನ 8ಕ್ಕೆ ಸ್ಥಳ: ಕಬ್ಬನ್ ಪಾರ್ಕ್

ಯೋಗಾಭ್ಯಾಸ- ನಮ್ರತಾ ಸುಧೀಂದ್ರರಿಂದ

ಸೆಪ್ಟೆಂಬರ್ 24, ಮಧ್ಯಾಹ್ನ 12ಕ್ಕೆ ಸ್ಥಳ: ಸೆಂಟರ್ ಫಾರ್ ಇಂಡಿಯನ್ ಮ್ಯೂಸಿಕ್ ಎಕ್ಸ್ ಪೀರಿಯೆನ್ಸ್, ಬ್ರಿಗೇಡ್ ಮಿಲೇನಿಯಮ್, ಜೆ.ಪಿ.ನಗರ

ಸಂಗೀತ ಕಾರ್ಯಕ್ರಮ- ಆನೂರು ಅನಂತ ಕೃಷ್ಣ ಶರ್ಮ, ಅರುಣ್ ಕುಮಾರ್, ಪ್ರಮಥ್ ಕಿರಣ್

ಚೌ ನೃತ್ಯ್ ಮುಖವಾಡ ಮಾಡುವ ಪ್ರಾತ್ಯಕ್ಷಿಕೆ- ಸುಮಿತ್ ಕುಮಾರ್ ಮಹಾಪಾತ್ರ, ಜಾರ್ಖಂಡ್

ಸೆಪ್ಟೆಂಬರ್ 24, ಸಂಜೆ 6.30ಕ್ಕೆ ಸ್ಥಳ: ಚೌಡಯ್ಯ ಸ್ಮಾರಕ ಭವನ

ಭರತನಾಟ್ಯ- ಶೋಭನಾ

ಮೆಕ್ಸಿಕನ್ ಜಾಝ್ ಬ್ಯಾಂಡ್

ಮೆಕ್ಸಿಕನ್ ಜಾಝ್ ಬ್ಯಾಂಡ್

ಸೆಪ್ಟೆಂಬರ್ 25, ಸಂಜೆ 6.30ಕ್ಕೆ ಸ್ಥಳ: ಸೆಂಟರ್ ಫಾರ್ ಇಂಡಿಯನ್ ಮ್ಯೂಸಿಕ್ ಎಕ್ಸ್ ಪೀರಿಯೆನ್ಸ್, ಬ್ರಿಗೇಡ್ ಮಿಲೇನಿಯಮ್, ಜೆ.ಪಿ.ನಗರ

ಸೆರೈಕೆಲ್ಲ್ ಚೌ ನೃತ್ಯ್: ಸುಮಿತ್ ಕುಮಾರ್ ಮಹಾಪಾತ್ರ, ಜಾರ್ಖಂಡ್

ಮೆಕ್ಸಿಕನ್ ಜಾಝ್ ಬ್ಯಾಂಡ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+