• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುರೋಪ್ ರಾಷ್ಟ್ರಗಳಿಗೆ ನೇರ ಬಾಗಿಲು ತೆರೆದ ಬೆಂಗಳೂರು ಏರ್‌ಪೋರ್ಟ್

|

ಬೆಂಗಳೂರು, ನವೆಂಬರ್ 14: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯುರೋಪ್ ರಾಷ್ಟ್ರಗಳಿಗೆ ನೇರವಾಗಿ ಬಾಗಿಲು ತೆರೆಯುವ ಮೂಲಕ ಹೊಸ ದಾಖಲೆಗೆ ನಾಂದಿ ಹಾಡಿದೆ. ಲಂಡನ್-ಬೆಂಗಳೂರು ನಡುವೆ ಹಾರಾಟಕ್ಕೆ ಏರ್ ಇಂಡಿಯಾ, 256 ಸೀಟುಗಳ ಬೋಯಿಂಗ್ ಡ್ರೀಮ್‌ಲೈನರ್ ವಿಮಾನಗಳನ್ನು ಬಳಕೆ ಮಾಡುತ್ತಿದೆ.

ಬ್ರಿಟಿಷ್ ಏರ್‌ವೇಸ್ ಈಗಾಗಲೇ ಲಂಡನ್-ಬೆಂಗಳೂರು ನಡುವೆ ನೇರ ವಿಮಾನ ಸಂಪರ್ಕ ಕಲ್ಪಿಸಿದೆ. ಆದರೆ, ಈ ಮಾರ್ಗದಲ್ಲಿ ಬೆಂಗಳೂರಿನಿಂದ ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

ನ.16ರಿಂದ ಲಂಡನ್ ನಿಂದ ಬೆಂಗಳೂರು ಹಾಗೂ ನ.17ರಿಂದ ಬೆಂಗಳೂರಿನಿಂದ ಲಂಡನ್‌ಗೆ ವಾರಕ್ಕೆ ಮೂರು ಬಾರಿ ವಿಮಾನ ಹಾರಾಟ ಆರಂಭವಾಗಲಿದೆ. ಪ್ರಯಾಣದ ಅವಧಿ 9 ತಾಸು 30 ನಿಮಿಷಗಳದ್ದಾಗಿರುತ್ತದೆ.

ಈ ಬೋಯಿಂಗ್ 787 ವಿಮಾನವು ಸೋಮವಾರ, ಬುಧವಾರ ಮತ್ತು ಶುಕ್ರವಾರ ಲಂಡನ್ ನಿಂದ ಬೆಂಗಳೂರಿಗೆ ಬರಲಿದೆ. ಹಾಗೂ ಮಂಗಳವಾರ , ಗುರುವಾರ ಮತ್ತು ಶನಿವಾರ ಬೆಂಗಳೂರಿನಿಂದ ಲಂಡನ್ ಗೆ ತೆರಳಲಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ

ಇದರಿಂದ ಐಡಿ ಮತ್ತು ಆರೋಗ್ಯ ಪ್ರವಾಸಕ್ಕಾಗಿ ಲಂಡನ್ ಗೆ ತೆರಳುವ ಬೆಂಗಳೂರು ಪ್ರಯಾಣಿಕರ ಆಸೆ ಈಡೇರಿದಂತಾಗಿದೆ. ಇದಕ್ಕೆ ಏರ್ ಇಂಡಿಯಾ ವಿಶೇಷ ಆಫರ್ ನೀಡಿದ್ದು, ಬ್ಯುಸಿನೆಸ್ ಕ್ಲಾಸ್ ಪ್ರಯಾಣವು 1,29,500 ಮತ್ತು ಎಕನಾಮಿಕ್ ಕ್ಲಾಸ್ ಪ್ರಯಾಣ 35,220 ನಿಗದಿಪಿಸಲಾಗಿದೆ. ಬೆಂಗಳೂರಿನಿಂದ ವಿಮಾನ ಬೆಳಗ್ಗೆ 5.25ಕ್ಕೆ ಹೊರಡಲಿದೆ.

English summary
Air India service will resume from November 16 between Bengaluru to London as Kempegowda international airport has becoming international transit hub.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X