ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮತ್ತೆ ಮೂರು ವಾರ್ಡ್ ಕಂಟೈನ್‌ಮೆಂಟ್‌ ಜೋನ್‌

|
Google Oneindia Kannada News

ಬೆಂಗಳೂರು, ಮೇ 6: ಬೆಂಗಳೂರಿನಲ್ಲಿ ಹೊಸ ಕೊರೊನಾ ಸೋಂಕಿತರ ಸಂಖ್ಯೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ನಿಧಾನವಾಗಿ ವಾಣಿಜ್ಯ ಚಟುವಟಿಕೆಗಳು ಆರಂಭವಾಗುತ್ತಿದೆ. ಸಾರ್ವಜನಿಕರು ಹಳೆಯ ಬೆಂಗಳೂರು ಎಂಬ ಭಾವನೆಗೆ ಮರಳುತ್ತಿದ್ದಾರೆ.

Recommended Video

BSY 1610 ಕೋಟಿ ಪ್ಯಾಕೇಜ್ ಘೋಷಣೆ , ಕೊರೊನ ಪರಿಹಾರದಲ್ಲಿ ರಾಜ್ಯವೇ ನಂಬರ್ ಒನ್ | Yediyurappa | Karnataka

ಮತ್ತೊಂದೆಡೆ ಬೆಂಗಳೂರಿನಲ್ಲಿ ಕೊರೊನಾ ವೈರಸ್‌ ಕಂಟೈನ್‌ಮೆಂಟ್‌ ಜೋನ್‌ಗಳ ಸಂಖ್ಯೆ ಮತ್ತೆ ಏರಿಕೆಯಾಗಿದೆ. ನಗರದಲ್ಲಿ ಹೊಸ ಸೋಂಕಿತರು ಪತ್ತೆಯಾದ ಮೂರು ವಾರ್ಡ್‌ಗಳನ್ನು ರೆಡ್‌ಜೋನ್‌ ಪ್ರದೇಶ ಎಂದು ನಿರ್ಧರಿಸಿ ಸೀಲ್‌ಡೌನ್‌ ಮಾಡಲು ಮುಂದಾಗಿದ್ದಾರೆ.

ಅಂತರ ಜಿಲ್ಲಾ ಪ್ರಯಾಣಕ್ಕೆ ಪಾಸು; ಪೊಲೀಸರ ಮಹತ್ವದ ಆದೇಶ ಅಂತರ ಜಿಲ್ಲಾ ಪ್ರಯಾಣಕ್ಕೆ ಪಾಸು; ಪೊಲೀಸರ ಮಹತ್ವದ ಆದೇಶ

ಹೊಸದಾಗಿ ಸೋಂಕಿತರು ವರದಿಯಾದ ಬಿಟಿಎಂ ಲೇಔಟ್ ವಾರ್ಡ್,​ ಬೇಗೂರು ಪಾರ್ಡ್ ಹಾಗೂ​ ಶಿವಾಜಿನಗರ ವಾರ್ಡ್​ಗಳನ್ನು ಕಂಟೈನ್‌ಮೆಂಟ್‌ ಜೋನ್ ಎಂದು ತೀರ್ಮಾನಿಸಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಕಂಟೈನ್‌ಮೆಂಟ್‌ ಜೋನ್ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಮುಂದೆ ಓದಿ.....

ಗರ್ಭಿಣಿಯಿಂದ ಬಿಟಿಎಂ ಸೀಲ್‌ಡೌನ್

ಗರ್ಭಿಣಿಯಿಂದ ಬಿಟಿಎಂ ಸೀಲ್‌ಡೌನ್

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಂಟೈನ್​ಮೆಂಟ್ ಜೋನ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಿಟಿಎಂ ಲೇಔಟ್ ವಾರ್ಡ್‌ನಲ್ಲಿ ತುಂಬು ಗರ್ಭಿಣಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಜಯನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಡಿಲವರಿಗೆ ವೈದ್ಯರು ಡೇಟ್ ನೀಡಿದ್ದು, ಹುಟ್ಟುವ ಮಗುವಿಗೆ ಸೋಂಕು ತಗುಲಿದ್ಯಾ ಎಂಬ ಅನುಮಾನ ಕಾಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗರ್ಭಿಣಿ ವಾಸವಿದ್ದು ಮನೆ ಸುತ್ತಮುತ್ತ ಪ್ರದೇಶ ಸೀಲ್‌ಡೌನ್‌ ಮಾಡಲಾಗಿದೆ.

ಪೇದೆಯಿಂದ ಬೇಗೂರು ಪಾರ್ಡ್​ ಸೀಲ್

ಪೇದೆಯಿಂದ ಬೇಗೂರು ಪಾರ್ಡ್​ ಸೀಲ್

ಬೇಗೂರು ಪೊಲೀಸ್ ಠಾಣೆಯಲ್ಲಿ ಪೇದೆಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ಬೇಗೂರು ವಾರ್ಡ್ ಕಂಟೈನ್‌ಮೆಂಟ್ ಜೋನ್‌ಗೆ ಸೇರ್ಪಡೆಯಾಗಿದ್ದು, ಪೇದೆ ಸಂಚರಿಸಿದ್ದ ಸುತ್ತಮುತ್ತ ಪ್ರದೇಶ ಸೀಲ್‌ಡೌನ್ ಮಾಡಲಾಗಿದೆ.

ವಲಸೆ ಕಾರ್ಮಿಕರಿಗೆ ನಗರ ಬಿಟ್ಟು ಹೋಗದಂತೆ ಯಡಿಯೂರಪ್ಪ ಮನವಿವಲಸೆ ಕಾರ್ಮಿಕರಿಗೆ ನಗರ ಬಿಟ್ಟು ಹೋಗದಂತೆ ಯಡಿಯೂರಪ್ಪ ಮನವಿ

ಶಿವಾಜಿನಗರದಲ್ಲಿ ಹೌಸ್​ ಕೀಪಿಂಗ್ ವ್ಯಕ್ತಿ

ಶಿವಾಜಿನಗರದಲ್ಲಿ ಹೌಸ್​ ಕೀಪಿಂಗ್ ವ್ಯಕ್ತಿ

ಶಿವಾಜಿನಗರ ವಾರ್ಡ್‌ನಲ್ಲಿ ಹೌಸ್‌ ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಹಾಗಾಗಿ, ಶಿವಾಜಿನಗರ ವಾರ್ಡ್‌ನ್ನು ಕಂಟೈನ್‌ಮೆಂಟ್‌ ಜೋನ್‌ಗೆ ಸೇರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆ ವ್ಯಕ್ತಿ ವಾಸವಿರುವ ಸುತ್ತ ಪ್ರದೇಶ ಸೀಲ್‌ಡೌನ್ ಮಾಡಲಾಗಿದೆ.

ಉಳಿದ ಕಂಟೈನ್‌ಮೆಂಟ್‌ ಜೋನ್ ಗಳ ಪಟ್ಟಿ

ಉಳಿದ ಕಂಟೈನ್‌ಮೆಂಟ್‌ ಜೋನ್ ಗಳ ಪಟ್ಟಿ

ವಾರ್ಡ್​ ನಂಬರ್ 188 ಬಿಳೆಕಳ್ಳಿ, 189 ಹೊಂಗಸಂದ್ರ, 84 ಹಗಡೂರು, 18 ರಾಧಾಕೃಷ್ಣ ಟೆಂಪಲ್, 59 ಮಾರುತಿ ಸೇವಾನಗರ, 62 ರಾಮಸೇವಾ ಪಾಳ್ಯ, 78 ಪುಲಕೇಶಿನಗರ, 93 ವಸಂತ ನಗರ, 118 ಸುಧಾಮನಗರ, 124 ಹೊಸಹಳ್ಳಿ, 133 ಹಂಪಿನಗರ, 134 ಬಾಪೂಜಿ ನಗರ, 158 ದೀಪಾಂಜಲಿ ನಗರ, 166 ಕರೆಸಂದ್ರ, 169 ಬೈಯ್ಯಸಂದ್ರ, 135 ಪದ್ಮರಾಯನಪುರ, 136 ಜಗಜೀವನ್​​ರಾಮ್ ನಗರ, 138 ಚಲವಾದಿ ಪಾಳ್ಯ, 139 ಕೆಆರ್ ಮಾರ್ಕೆಟ್, 37 ಯಶವಂತಪುರ, 160 ರಾಜರಾಜೇಶ್ವರಿ ನಗರ ಕಂಟೈನ್​ಮೆಂಟ್​​​ ಝೋನ್​​ ಪಟ್ಟಿಯಲ್ಲಿದೆ.

English summary
Begur, Shivajinagar and BTM layout ward declared as Containment zone in Bengaluru urban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X