ಲೀಲಾ ಪ್ಯಾಲೇಸ್ ನಲ್ಲಿ ಬೆಂಗಳೂರು ಕಾವ್ಯ ಉತ್ಸವ
ಬೆಂಗಳೂರು, ಜುಲೈ 14: ಆಟಾ ಗಲಾಟಾ, ಬೆಂಗಳೂರು ಕಾವ್ಯ ಉತ್ಸವವನ್ನು ಆಯೋಜಿಸುತ್ತಿದೆ. ಆಗಸ್ಟ್ 6 ಮತ್ತು 7ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್ ನಲ್ಲಿ ಉತ್ಸವ ನಡೆಯಲಿದೆ. ಬೆಂಗಳೂರು ಕಾವ್ಯ ಉತ್ಸವ (ಬಿಪಿಎಫ್) ಕವಿತೆಗಾಗಿನ ನಗರದ ಮೊದಲ ಉತ್ಸವವಾಗಿದೆ.
ಭಾರತೀಯ ಕವಿತೆಗಳು ಮತ್ತು ಕವಿಗಳು ವಿಶ್ವದಾದ್ಯಂತ ಖ್ಯಾತಿ ಹೊಂದಿದ್ದರೂ, ಪ್ರಸ್ತುತ ಇರುವ ಸಾಹಿತ್ಯಕ ವೇದಿಕೆಗಳಲ್ಲಿ ಅವರಿಗಿರುವ ಅವಕಾಶಗಳು ಕಡಿಮೆ ಎಂದು ಮನಗಂಡ ಆಟಾ ಗಲಾಟ(Atta Galatta)ದ ಸ್ಥಾಪಕರಾದ ಸುಬೋಧ್ ಮತ್ತು ಲಕ್ಷ್ಮಿ ಹಾಗೂ ಉಳಿದ ಕಾವ್ಯಪ್ರೇಮಿಗಳು ಉತ್ಸವಕ್ಕೆ ಮುಂದಾಗಿದ್ದಾರೆ. ಉತ್ಸವವು ಕವಿತೆ, ಭಾಷಣಗಳು, ಕಾರ್ಯಾಗಾರಗಳನ್ನು ಒಳಗೊಂಡಿದೆ.[ನಮ್ಮ ಕಾವ್ಯಗಳು ಜನರಿಗೆ ಅನುಕೂಲವಾಗುವಂತಿರಲಿ: ಕಂಬಾರ]
ಕವಿಪುಂಗವರ ಉಪಸ್ಥಿತಿ: ಜಾವೇದ್ ಅಖ್ತರ್, ಜಯಂತ್ ಕಾಯ್ಕಿಣಿ, ವರುಣ್ ಗಾಂಧಿ, ಪಿಯೂಷ್ ಮಿಶ್ರಾ, ಸಂಪೂರ್ಣ ಚಟರ್ಜಿ, ಮಮತಾ ಸಾಗರ, ಮನೋಹರ್ ಶೆಟ್ಟಿ ಹಾಗೂ ಸಿಪಿ ಸುರೇಂದ್ರನ್.

ವಿವಿಧ ಭಾಷೆಗಳ ಕವನ ಪ್ರಸ್ತುತಿ: ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು, ಬಂಗಾಳಿ, ಒಡಿಶಾ, ಮೈಥಿಲಿ ಸೇರಿದಂತೆ ವಿವಿಧ ಭಾಷೆಗಳ ಕವಿತೆಗಳನ್ನು ಪ್ರಸ್ತುತಪಡಿಸಲು ಇದು ಪ್ರಮುಖ ವೇದಿಕೆಯಾಗಲಿದೆ.
ಭಾಗವಹಿಸುವುದು ಹೇಗೆ?: ಆಸಕ್ತ ಯುವ ಕವಿ, ಕವಯಿತ್ರಿಯರು www.bengalurupoetryfestival.org ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಅಥವಾ ಕೃತಿ : 96325 10126 ಕರೆ ಮಾಡಿ. ಪ್ರವೇಶ ಉಚಿತ.

ಬಿಪಿಎಫ್ 2016- ಕಮ್ಯೂನಿಟಿ ಎಂಗೇಜ್‍ಮೆಂಟ್
ಬೆಂಗಳೂರು ಮೂಲದ ಕವಿತಾ ತಂಡಗಳಾದ ಇಂಕ್ ವೀವರ್, ಏರ್‍ಪ್ಲೇನ್ ಪೋಯೆಟ್ರಿ ಮೂವ್‍ಮೆಂಟ್, ಓಪನ್ ಸ್ಕೈ ಸ್ಲ್ಯಾಮ್, ಪೋಯೆಟ್ರಿ ಅಟ್ ದಿ ಪಾರ್ಕ್, ಲೆಟ್ ಪೋಯೆಟ್ರಿ ಬಿ, ಅಂಜುಮಾನ್ ಮುಂತಾದ ತಂಡದ ಸಹಯೋಗದೊಂದಿಗೆ ಈ ಉತ್ಸವವು ಸ್ಥಳೀಯ ಕವಿಗಳಿಗೆ ಹಾಗೂ ಆಮಂತ್ರಿತರಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಡಲಿದೆ.[ಅಮೂಲ್ಯ ಆತ್ಮಗಳ ಬಂಧ ಸಾರುವ 'ಪ್ರೀಶಿಯಸ್ ಸೋಲ್ಸ್']
ಇದಕ್ಕೆ ಹೊರತಾಗಿ ಬಿಪಿಎಫ್‍ನ ಪಬ್ಲಿಷಿಂಗ್ ಪಾರ್ಟ್‍ನರ್ ಆದ ರೇನ್‍ಡ್ರಾಪ್ಸ್ ಕಂಪೆನಿ ಕಾವ್ಯ ಸ್ಪರ್ಧೆಯನ್ನೂ ಆಯೋಜಿಸಿದ್ದು ಆಯ್ಕೆಯಾದ ಕವಿತೆಗಳನ್ನು ಬೆಂಗಳೂರು ಪೋಯೆಟ್ರಿ ಫೆಸ್ಟಿವಲ್ 2016 ಆಂಥಾಲಜಿಯಲ್ಲಿ ಪ್ರ್ರಕಟಿಸಲಾಗುವುದಲ್ಲದೆ ಅದನ್ನು ಉತ್ಸವದ ವೇಳೆ ಬಿಡುಗಡೆಗೊಳಿಸಲಾಗುವುದು.
ಫೇಸ್ ಬುಕ್: BengaluruPoetryFestival
ಟ್ವಿಟ್ಟರ್: #BPF2016
Instagram: BengaluruPoetryFestival
ಶೈನಿ ಆಂಟನಿ- ಉತ್ಸವದ ನಿರ್ದೇಶಕರು
ಶೈನಿ ಆಂಟನಿ ಸಣ್ಣ ಕಥೆಗಳ ಸಂಕಲನವಾದ ದಿ ಆರ್ಫನೇಜ್ ಫಾರ್ ವುಡ್ಸ್, ಬೇರ್‍ಫೂಟ್ ಆಂಡ್ ಪ್ರೆಗ್ನೆಂಟ್ ಹಾಗೂ ವೆನ್ ಮೀರಾ ವಎಂಟ್ ಫೋರ್ತ್ ಆಂಡ್ ಮಲ್ಟಿಪ್ಲೈಡ್ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಇವರು 2001ರಲ್ಲಿ ಕಾಮನ್‍ವೆಲ್ತ್ ಶಾರ್ಟ್ ಸ್ಟೋರಿ ಏಷ್ಯಾ ರೀಜನ್ ಪ್ರಶಸ್ತಿ ಪಡೆದಿದ್ದಾರೆ. ಬೆಂಗಳೂರು ಲಿಟರೇಚರ್ ಫೆಸ್ಟಿವಲ್(ಬಿಎಲ್ ಎಫ್) ನ ಆಯೋಜಕರಲ್ಲಿ ಒಬ್ಬರು.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ












Click it and Unblock the Notifications