ಬೆಂಗಳೂರಿಗರೇ ಗಮನಿಸಿ; 'ಸಹಾಯ 2.0'ದಿಂದ ನಾಗರಿಕ ಸಮಸ್ಯೆಗಳ ವಿಲೇವಾರಿ, ಏಕೀಕೃತ ವ್ಯವಸ್ಥೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಾಗರಿಕರ ಅಹವಾಲುಗಳು, ಕುಂದು ಕೊರತೆ ಕೇಳಲು, ಸಮಸ್ಯೆ ಪರಿಹರಿಸಲು ನಿರಂತರವಾಗಿ ಫೋನ್‌ ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರಲ್ಲಿ ಆಲಿಸುವ ನಾಗರಿಕ ಸಮಸ್ಯೆಗಳ ವಿಲೇವಾರಿಯನ್ನು 'ಸಹಾಯ 2.0' ಮೂಲಕ ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಏಕೀಕೃತ ವ್ಯವಸ್ಥೆಯನ್ನೂ ಜಾರಿಗೆ ತರಲಾಗುತ್ತಿದೆ.

ನಾಗರಿಕರಿಂದ ಸ್ವೀಕರಿಸಲಾಗುವ ಅಹವಾಲುಗಳನ್ನು ತ್ವರಿತವಾಗಿ ದಾಖಲಿಸಿ, ಸಂಬಂಧಪಟ್ಟ ಇಲಾಖೆಗಳು ಹಾಗೂ ಅಧಿಕಾರಿಗಳಿಗೆ ವಹಿಸುವುದರ ಜೊತೆಗೆ, ಅವುಗಳ ವಿಲೇವಾರಿ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯು 'ಸಹಾಯ 2.0' ತಂತ್ರಾಂಶ ಮತ್ತು ಆಯುಕ್ತರ ಫೋನ್-ಇನ್ ಕಾರ್ಯಕ್ರಮವನ್ನು ಸಮನ್ವಯಗೊಳಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Bengaluru GBA Sahaya 2 0

ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಮಾಧ್ಯಮಗಳು ಹಾಗೂ ವೇದಿಕೆಗಳ ಮೂಲಕ ಸ್ವೀಕರಿಸಲಾಗುವ ಅಹವಾಲುಗಳನ್ನು 'ಸಹಾಯ 2.0'ನಲ್ಲಿ ದಾಖಲಿಸಲಾಗುತ್ತಿವೆ. ಪ್ರತಿಯೊಂದು ಅಹವಾಲಿನ ಪ್ರಗತಿ ಮತ್ತು ಇತ್ಯರ್ಥದ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಬಾಕಿ ಇರುವ ಅಹವಾಲುಗಳಿಗೆ ಆದ್ಯತೆ ನೀಡಿ, ಕಾಲಮಿತಿಯೊಳಗೆ ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಅಹವಾಲುಗಳ ನಿರ್ವಹಣೆಗೆ ಏಕೀಕೃತ ವ್ಯವಸ್ಥೆ

2023ರ ಜನವರಿ 1ರಿಂದ 2025ರ ಆಗಸ್ಟ್ 31ರವರೆಗೆ ಜಿಬಿಎ ರಚನೆಗೆ ಮುನ್ನ 1,17,175 ಅಹವಾಲುಗಳು ಸ್ವೀಕೃತವಾಗಿದ್ದು, ಈ ಪೈಕಿ 2,193 ಅಹವಾಲುಗಳು ಬಾಕಿ ಉಳಿದಿದ್ದವು. 2025ರ ಸೆಪ್ಟೆಂಬರ್ 1ರಿಂದ 2026ರ ಅಕ್ಟೋಬರ್ 1ರವರೆಗೆ ಜಿಬಿಎ ಅವಧಿಯಲ್ಲಿ 82,006 ಅಹವಾಲುಗಳು ಸ್ವೀಕೃತವಾಗಿದ್ದು, 1,770 ಅಹವಾಲುಗಳು ಬಾಕಿ ಉಳಿದಿವೆ.

ಇನ್ನೂ 02.10.2026ರ 'ಸಹಾಯ 2.0' ವರದಿಯಂತೆ, ಒಟ್ಟಾರೆ 1,99,179 ಅಹವಾಲುಗಳು ದಾಖಲಾಗಿದ್ದು, 1,97,408 ಅಹವಾಲುಗಳು ಇತ್ಯರ್ಥಗೊಂಡಿವೆ ಹಾಗೂ 1,830 ಅಹವಾಲುಗಳು ಬಾಕಿ ಉಳಿದಿವೆ ಎಂದು ಪಾಲಿಕೆ ಅಂಕಿ ಸಂಖ್ಯೆ ನೀಡಿದೆ.

ಬಾಕಿ ಅಹವಾಲುಗಳ ಪ್ರಗತಿ ಪರಿಶೀಲನೆ

ಬಾಕಿ ಇರುವ ಅಹವಾಲುಗಳ ಕುರಿತು ನಿಯಮಿತವಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಅಹವಾಲು ಬಾಕಿ ಉಳಿಯಲು ಕಾರಣ, ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡ ಕ್ರಮ ಹಾಗೂ ಪರಿಹಾರದ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ.

ಅಹವಾಲುಗಳನ್ನು ಕೇವಲ ತಾಂತ್ರಿಕವಾಗಿ ಮುಕ್ತಾಯಗೊಳಿಸುವ ಬದಲು, ಅಗತ್ಯವಿರುವಲ್ಲಿ ಸ್ಥಳ ಪರಿಶೀಲನೆ ನಡೆಸಿ ನಾಗರಿಕರಿಗೆ ವಾಸ್ತವಿಕ ಪರಿಹಾರ ದೊರೆತಿರುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬಾಕಿ ಅಹವಾಲುಗಳ ವಿವರ

'ಸಹಾಯ 2.0' ವರದಿಯಂತೆ, 01.10.2026ರ ವೇಳೆಗೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 1,770 ಅಹವಾಲುಗಳು ಬಾಕಿ ಇದ್ದು, ಅವುಗಳ ವಿಲೇವಾರಿ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಈ ಪೈಕಿ 17 ಅಹವಾಲುಗಳು ಪ್ರಗತಿಯಲ್ಲಿದ್ದು, 4 ಅಹವಾಲುಗಳು ದೀರ್ಘಾವಧಿ ಪರಿಹಾರಕ್ಕೆ ಸಂಬಂಧಿಸಿದ್ದು, 14 ಅಹವಾಲುಗಳು ದೀರ್ಘಾವಧಿ ಬಾಕಿ ವರ್ಗದಲ್ಲಿವೆ. 1,523 ಅಹವಾಲುಗಳು ನೋಂದಾಯಿತವಾಗಿದ್ದು, 212 ಅಹವಾಲುಗಳು ಮರುತೆರೆಯಲ್ಪಟ್ಟಿವೆ.

ವಿಭಾಗವಾರು ಬಾಕಿ ಅಹವಾಲುಗಳ ವಿವರ

* ಜಾಹೀರಾತು - 19
* ಚುನಾವಣಾ ವಿಭಾಗ - 2
* ಇ-ಖಾತಾ / ಖಾತಾ ಸೇವೆಗಳು - 21
* ಶಿಕ್ಷಣ - 2
* ವಿದ್ಯುತ್ - 116
* ಅರಣ್ಯ - 233
* ಆರೋಗ್ಯ - 21
* ಆಪ್ಟಿಕಲ್ ಫೈಬರ್ ಕೇಬಲ್ಸ್ (OFC) - 2
* ಉದ್ಯಾನವನಗಳು ಮತ್ತು ಆಟದ ಮೈದಾನಗಳು - 10
* ಪ್ಲಾಸ್ಟಿಕ್ - 1
* ಯೋಜನೆಗಳ ಕೇಂದ್ರ ವಿಭಾಗ - 22
* ಕಂದಾಯ - 4
* ರಸ್ತೆ ನಿರ್ವಹಣೆ (ಇಂಜಿನಿಯರಿಂಗ್) - 825
* ನೈರ್ಮಲ್ಯ - 15
* ಘನ ತ್ಯಾಜ್ಯ ನಿರ್ವಹಣೆ - 402
* ನಗರ ಯೋಜನೆ - 14
* ಟ್ರಾಫಿಕ್ ಎಂಜಿನಿಯರ್ ಸೆಲ್ (TEC) - 38
* ಪಶುವೈದ್ಯಕೀಯ - 23
ಒಟ್ಟು - 1,770 ಅಹವಾಲುಗಳು.

ರಸ್ತೆ, ಘನತ್ಯಾಜ್ಯ ಸಮಸ್ಯೆ ವಿಲೇವಾರಿಗೆ ಆದ್ಯತೆ

ಬಾಕಿ ಅಹವಾಲುಗಳ ಪೈಕಿ ರಸ್ತೆ ನಿರ್ವಹಣೆ (ಇಂಜಿನಿಯರಿಂಗ್) ವಿಭಾಗದಲ್ಲಿ 825 ಹಾಗೂ ಘನ ತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ 402 ಅಹವಾಲುಗಳು ದಾಖಲಾಗಿವೆ. ಇವುಗಳ ವಿಲೇವಾರಿಗೆ ವಿಶೇಷ ಗಮನ ನೀಡಲಾಗುತ್ತಿದೆ.

ರಸ್ತೆ ನಿರ್ವಹಣೆ ವಿಭಾಗಕ್ಕೆ ಸಂಬಂಧಿಸಿದ ಅಹವಾಲುಗಳಲ್ಲಿ ರಸ್ತೆ, ಪಾದಚಾರಿ ಮಾರ್ಗ, ರಸ್ತೆ ನಿರ್ವಹಣೆ ಹಾಗೂ ಚರಂಡಿಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳು ಒಳಗೊಂಡಿವೆ. ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಕಸ ಸಂಗ್ರಹಣೆ, ಕಸ ವಿಲೇವಾರಿ ಹಾಗೂ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಅಹವಾಲುಗಳು ದಾಖಲಾಗಿವೆ..

54ನೇ ಆಯುಕ್ತರ ಫೋನ್-ಇನ್ ಕಾರ್ಯಕ್ರಮ

ನಾಗರಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಪ್ರತಿ ಶುಕ್ರವಾರ ನಡೆಯುತ್ತಿರುವ ಆಯುಕ್ತರ ಫೋನ್-ಇನ್ ಕಾರ್ಯಕ್ರಮದ 54ನೇ ಕಾರ್ಯಕ್ರಮ ಅಕ್ಟೋಬರ್ 2ರಂದು ನಡೆಯಿತು . ಇಂದು 52 ಕರೆಗಳ ಮೂಲಕ 60 ಅಹವಾಲುಗಳು ಸ್ವೀಕೃತವಾಗಿವೆ. ಈ ಪೈಕಿ 3 ಅಹವಾಲುಗಳು ಇತ್ಯರ್ಥಗೊಂಡಿದ್ದು, 57 ಅಹವಾಲುಗಳು ನೋಂದಣಿಯಾಗಿವೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಫೋನ್-ಇನ್ ಮೂಲಕ 3,211 ಅಹವಾಲುಗಳು ಸ್ವೀಕೃತ

ಪ್ರತಿಯೊಂದು ಅಹವಾಲಿಗೂ ಜವಾಬ್ದಾರಿ ನಿಗದಿಪಡಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುತ್ತಿದೆ. ಅಗತ್ಯವಿರುವಲ್ಲಿ ಸ್ಥಳ ಪರಿಶೀಲನೆ ನಡೆಸಿ, ಪರಿಣಾಮಕಾರಿ ಕ್ರಮ ಕೈಗೊಂಡು, ನಾಗರಿಕರಿಗೆ ವಾಸ್ತವಿಕ ಪರಿಹಾರ ದೊರೆತಿರುವುದನ್ನು ಖಚಿತಪಡಿಸಿಕೊಂಡ ನಂತರ ಅಹವಾಲುಗಳನ್ನು ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಪಾಲಿಕೆ ಅನುಸರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+