ಬೆಂಗಳೂರಲ್ಲಿ ಗಣೇಶ ವಿಸರ್ಜನೆಗೆ ಡೇಟ್ ಫಿಕ್ಸ್: ಹಲಸೂರು ಕೆರೆಯಲ್ಲಿ ಈ ದಿನ ಮಾತ್ರವೇ ಅವಕಾಶ!
ಬೆಂಗಳೂರು: ಬೆಂಗಳೂರು ನಾಗರಿಕರು ಗಣೇಶೋತ್ಸವಕ್ಕೆ ಸಜ್ಜಾಗಿದ್ದಾರೆ. ಸೋಮವಾರ ಸೆಪ್ಟೆಂಬರ್ 14ರಂದು ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅಂದು ಸೆ.14 ರಿಂದ 29 ರವರೆಗೆ 15 ದಿನಗಳು ಮಾತ್ರ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಲಾಗಿದೆ. ಯಾವ ದಿನಾಂಕದಂದು ಯಾವ ವಿಸರ್ಜನಾ ಸ್ಥಳಗಳಲ್ಲಿ ವಿಸರ್ಜನೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಲುವಾಗಿ ಕೇಂದ್ರ ನಗರ ಪಾಲಿಕೆಯ ಆಯುಕ್ತರು ಅಧಿಕಾರಿಗಳಿಗೆ ಗಣೇಶ ಮೂರ್ತಿಗಳ ವಿಸರ್ಜನೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುತ್ತೋಲೆ ಮೂಲಕ ಮಾರ್ಗಸೂಚಿ ಹೊರಡಿಸಿದ್ದಾರೆ.

ಈ ಮಾರ್ಗಸೂಚಿಗಳ ಅನ್ವಯ ಇಂದು ಕಂದಾಯ ಅಪರ ಆಯುಕ್ತ ಲಕ್ಷ್ಮಮ್ಮ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಇಲಾಖಾವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲು ಕ್ರಮ ವಹಿಸಲಾಗಿದೆ ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಗದೀಶ್ ಜಿ ತಿಳಿಸಿದ್ದಾರೆ.
ಕಲ್ಯಾಣಿಗಳಲ್ಲಿ ಮೂರ್ತಿ ವಿಸರ್ಜನಗೆ ದಿನಾಂಕ ನಿಗದಿ
* ಹಲಸೂರು ಕೆರೆ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಕಲ್ಪಿಸಿದ 15 ದಿನಾಂಕಗಳು/ ದಿನಗಳು ಹೀಗಿವೆ.
ದಿನಾಂಕ: 14-09-2026, 16-09-2026, 18-09-2026, 20-09-2026, 22-09-2026, 24-09-2026, 26-09-2026, 27-09-2026 ಮತ್ತು 28-09-2026 ರಂದು ಮಾತ್ರವೇ ಮೂರ್ತಿ ವಿಸರ್ಜಿಸಬೇಕು.
ವಿಸರ್ಜನೆಗೆ ಅವಕಾಶ ಇಲ್ಲದ ದಿನಾಂಕ
* ಹಲಸೂರು ಕೆರೆ ಕಲ್ಯಾಣಿಯ ಸ್ವಚ್ಛತಾ ದೃಷ್ಟಿಯಿಂದ ಈ ಕೆಳಕಂಡ ದಿನಾಂಕಗಳಂದು ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಇರುವುದಿಲ್ಲ
ದಿನಾಂಕ: 15-09-2026, 17-09-2026, 19-09-2026, 21-09-2026, 23-09-2026 ಮತ್ತು 25-09-2026 ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣೇಶ ಮೂರ್ತಿಗಳ ವಿಸರ್ಜನೆ: ಆಯುಕ್ತರ ಸೂಚನೆಗಳು
ಗಣೇಶ ಮೂರ್ತಿಗಳ ಪ್ರತಿಷ್ಠಾಪನೆನೆಗೆ ಏಕಗವಾಕ್ಷಿ ಸಮಿತಿಯಿಂದ ಅನುಮತಿ ಪಡೆಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆನೆಗೆ ಉಪ ವಿಭಾಗ ಮಟ್ಟದಲ್ಲಿ ನಗರ ಪಾಲಿಕೆ, ಪೊಲೀಸ್, ಬೆಸ್ಕಾಮ, ಅಗ್ನಿಶಾಮಕ ಹಾಗೂ ಇತರೆ ಸಂಬಂದಪಟ್ಟ ಅಧಿಕಾರಿಗಳನ್ನೊಳಗೊಂಡಂತೆ ಏಕಗವಾಕ್ಷಿ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಅರ್ಜಿ ಸಲ್ಲಿಸಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಅಡಿ ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸಬೇಕು ಎಂದು ಸೂಚಿಸಿದ್ದಾರೆ.
ಪಿ.ಓ.ಪಿ. ಗಣೇಶ ನಿಷೇಧ:
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಪಿ.ಓ.ಪಿ. ಗಣೇಶ ಮೂರ್ತಿಗಳ ಸಂಪೂರ್ಣವಾಗಿ ಮಾರಾಟ ಹಾಗೂ ಪ್ರತಿಷ್ಠಾಪನೆ ನಿಷೇಧಿಸಲಾಗಿದ್ದು, ಸಾರ್ವಜನಿಕರು ಪಿ.ಓ.ಪಿ. ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ವಿನಂತಿಸಲಾಗಿದೆ. ಒಂದು ವೇಳೆ ಮಾರಾಟ ಕಂಡು ಬಂದಲ್ಲಿ ನಿಯಮಾನುಸಾರ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಹಲಸೂರು ಕೆರೆಯಲ್ಲಿ ಕೈಗೊಂಡ ಸಿದ್ಧತೆಗಳು
* ನಾಗರೀಕರ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳ ಅಳವಡಿಕೆ
* 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಕ್ರೇನ್ ಗಳ ವ್ಯವಸ್ಥೆ
* ಅಂಬ್ಯುಲೆನ್ಸ್ ವ್ಯವಸ್ಥೆ
* ಕೆರೆ ಸುತ್ತಲೂ ಹಾಗೂ ಆವರಣದಲ್ಲಿ ಬೆಳಕಿನ ವ್ಯವಸ್ಥೆ
* ಮರದ ರೆಂಬೆ ಕೊಂಬೆ ತೆರವುಗೊಳಿಸುವುದು.
* ಸೂಕ್ತ ಕಾನೂನು ಸುವ್ಯವಸ್ಥೆಗೆ ಕ್ರಮ
* ಸಂಚಾರ ದಟ್ಟಣೆ ನಿರ್ವಹಣೆಗೆ ಕ್ರಮ
* ಮೊಬೈಲ್ ಶೌಚಾಲಯಗಳ ವ್ಯವಸ್ಥೆ
* ಕುಡಿಯುವ ನೀರಿನ ವ್ಯವಸ್ಥೆ
* ಶಾಂತಿಯುತವಾಗಿ ಗಣೇಶ ವಿಸರ್ಜನೆಗೆ


Click it and Unblock the Notifications
