Bengaluru Weather: ನಗರದಲ್ಲಿ ದಟ್ಟ ಮಂಜು-ಬಿಸಿಲು-ಮಳೆ ಒಟ್ಟೊಟ್ಟಿಗೆ: 5 ದಿನದ ಹವಾಮಾನ ಮುನ್ಸೂಚನೆ
ಬೆಂಗಳೂರು, ನವೆಂಬರ್ 10: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಮಂಜು ಕವಿದ ವಾತಾವರಣ ಹೇರಳ ಪ್ರಮಾಣದಲ್ಲಿ ಸೃಷ್ಟಿಯಾಗಿರುವುದು ಕಂಡು ಬಂತ. ಕಳೆದ ವಾರಕ್ಕಿಂತಲೂ ನವೆಂಬರ್ 10ರಂದು ದಟ್ಟ ಮಂಜು ಕವಿದಿದ್ದು ಕಂಡು ಬಂತು. ಸಾಮಾಜಿಕ ಜಾಲತಾಣದಲ್ಲಿ ಈ ಮಂಜು ಕವಿದ ಬೆಂಗಳೂರು ವಾತಾವರಣ ಟ್ರೆಂಡ್ ಆಯಿತು. ಐಎಂಡಿ ಸಹ ದೇವನಹಳ್ಳಿಯಲ್ಲಿ ಏರ್‌ಪೋರ್ಟ್ ಕಾಣದಷ್ಟು ಮಂಜು ಕವಿದ ಫೋಟೋಗಳನ್ನು ಹಂಚಿಕೊಂಡಿದೆ.
ನಗರದಲ್ಲಿ ಹಿಂಗಾರು ಮಳೆ ಅಬ್ಬರದ ಮಧ್ಯೆ ಆಗಾಗ ಬಿಸಿಲು, ಮಬ್ಬು ವಾತಾವರಣ ಸೃಷ್ಟಿಯಾಗುತ್ತಿದೆ. ನೀಲಿ ಆಕಾಶ ವಿದ್ದು, ಮಳೆಯ ವಾತಾವರಣ ಕಾಣದಿದ್ದಾಗ ಬೆಳಗ್ಗೆ ನಗರದೆಲ್ಲಡೆ ಮಂಜು ಕವಿದ ವಾತಾವರಣ ಕಂಡು ಬರುತ್ತಿದೆ.

ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ನೆಟ್ಟಿಗರೊಬ್ಬರು ಪೋಸ್ಟ್ ಹಾಕಿದ್ದಾರೆ. ಬೆಂಗಳೂರು ಇತ್ತೀಚೆಗೆ ಬೆಳಗಿನ ಚಳಿಗೆ ಸಾಕ್ಷಿಯಾಗುತ್ತಿದೆ. ತಡರಾತ್ರಿ ಹಾಗೂ ನಸುಕಿನ ಜಾವ ಚುಮು ಚುಮು ಚಳಿ ಹೆಚ್ಚಾಗಲು ಪ್ರಾರಂಭಿಸಿದೆ. ಇದು ಖಚಿತ ಚಳಿಗಾಲ ಮುನ್ಸೂಚನೆಯಾಗಿದೆ. ಆದರೆ ಬೆಂಗಳೂರಿನ ಹವಾಮಾನದ ನಿಖರತೆ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ನಗರದಲ್ಲಿ ಯಾವಾಗ ಹೆಚ್ಚು ಬಿಸಿಲಿ, ಚಳಿ, ಮಳೆ ಬರುತ್ತದೋ ತಿಳಿಯುವುದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನವೆಂಬರ್ 15 ರವರೆಗೆ ವ್ಯಾಪಕ ಬಿಸಿಲು
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಬೆಂಗಳೂರಿನಲ್ಲಿ ನವೆಂಬರ್ 15 ರವರೆಗೆ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಗರಿಷ್ಠ ತಾಪಮಾನವು 28 ರಿಂದ 29 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆಗಾಗ ಬೆಳಗ್ಗೆ ವ್ಯಾಪಕ ಮಂಜಿನ ವಾತಾವರಣ ಸಹ ಇರಲಿದೆ. ಕನಿಷ್ಠ ತಾಪಮಾನವು 19-20ರ ನಡುವೆ ಇರಲಿದೆ ಎಂದು ವರದಿ ಮಾಹಿತಿ ನೀಡಿದೆ.
ಹವಾಮಾನ ಇಲಾಖೆಯು ಹಂಚಿಕೊಂಡು ಭಾನುವಾರ ಹಂಚಿಕೊಂಡ ಫೋಟೋಗಳಲ್ಲಿ ದಟ್ಟ ಮಂಜು ಕವಿದಿದ್ದು, ಇನ್ನಿಲ್ಲದಂತೆ ಚಳಿ ನಗರದ ನಿವಾಸಿಗಳನ್ನು ಬಾಧಿಸಲಿದೆ ಎನ್ನುಷ್ಟರ ಮಟ್ಟಿಗೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಣದಂತೆ ಆವರಿಸಿದೆ.

ನಗರದಲ್ಲಿ ರಾತ್ರಿ ಮಳೆ, ಬೆಳಗ್ಗೆ ಅತೀವ ಮಂಜು ಸೃಷ್ಟಿ
ನಗರದ ಬಿಟಿಎಂ ಲೇಔಟ್, ಎಚ್‌ಬಿಆರ್ ಬಡಾವಣೆ ಮತ್ತು ಬಾಣಸವಾಡಿ ಸೇರಿದಂತೆ ಪ್ರದೇಶಗಳಲ್ಲಿ ಶನಿವಾರ ತಡರಾತ್ರಿ ಬೆಳಗಿನ ಜಾವ 1.30ರವರೆಗೆ ಹಗರು ಮಳೆ ದಾಖಲಾಗಿದೆ. ನೋಡಿದರೆ ಮರು ದಿನವೇ ಬೆಳಗ್ಗೆ ಮಂಜು ಕವಿದಿದೆ. ನವೆಂಬರ್ 15ರವರೆಗೆ ಮಬ್ಬು ಕವಿದ ಹಾಗೂ ಮಂಜಿನ ವಾತಾವರಣ, ಹಗರು ಮಳೆಯು ಬರಬಹುದೆಂದು ಐಎಂಡಿ ಭಾನುವಾರದ ವರದಿಯಲ್ಲಿ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಹವಾಮಾನ ಬಗ್ಗೆ ಚರ್ಚೆ ಆಗುತ್ತಿದೆ. ಇಲ್ಲಿನ ನಿವಾಸಿಗಳು ಭಾರೀ ಮಳೆ ನಡುವೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಕೋರಿದ್ದಾರೆ. ಮತ್ತೊಬ್ಬರು ಭಾನುವಾರ ಬೆಂಗಳೂರು ಉತ್ತರ ಭಾಗದಲ್ಲಿ, ಜಕ್ಕೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಹೆಚ್ಚು ಪ್ಯಾಚ್ ವರ್ಕ್ ನಡೆಯುತ್ತಿದೆ. ಈ ಮಂಜಿನ ಮಧ್ಯೆ ಅದ್ಯಾವು ಕಾಣುತ್ತಿಲ್ಲ. ಎಂದು ಹೇಳಿಕೊಂಡಿದ್ದಾರೆ.
ನವೆಂಬರ್ 15ರವರೆಗೆ ಅಧಿಕ ಬಿಸಿಲು
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಪ್ರಕಾರ, ಇಂದು ಭಾನುವಾರ ದಟ್ಟ ಮಂಜಿನ ವಾತಾವರಣ ಕಂಬಂದರೆ, ಮುಂದಿನ ನವೆಂಬರ್ 15ರವರೆಗೆ ಅಧಿಕ ಬಿಸಿಲಿನ, ಶುಷ್ಕ ವಾತಾವರಣ ನಿರ್ಮಾಣವಾಗಲಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications