ವಿದ್ಯುತ್, ನೀರು ಇಲ್ಲ: ಬೆಂಗಳೂರು ಪ್ರವಾಹಕ್ಕೆ ಸಿಲುಕಿದ್ದ ಕುಟುಂಬಗಳು ಹೋಟೆಲ್‌ಗೆ ಶಿಫ್ಟ್

ಬೆಂಗಳೂರು ಸೆಪ್ಟೆಂಬರ್ 7: ನಗರದಲ್ಲಿ ಭಾರೀ ಮಳೆ ಸುರಿದಿದ್ದು, ಹಳೆ ವಿಮಾನ ನಿಲ್ದಾಣ ರಸ್ತೆಯ ಎಲ್‌ಬಿ ಶಾಸ್ತ್ರಿನಗರದಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಫರ್ನ್ ಸರೋಜ್ ಅಪಾರ್ಟ್‌ಮೆಂಟ್‌ಗಳಲ್ಲಿರುವ 132 ಕುಟುಂಬಗಳಲ್ಲಿ ಕೆಲವರು ತಮ್ಮ ಮನೆಗಳನ್ನು ತೊರೆದು ಹೋಟೆಲ್‌ಗಳಲ್ಲಿ ನೆಲಿಸಿದ್ದಾರೆ. ಅವರಲ್ಲಿ ಕೆಲವರು ತಮ್ಮ ಸಂಬಂಧಿಕರು ಅಥವಾ ಸ್ನೇಹಿತರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಭಾನುವಾರ ರಾತ್ರಿಯಿಂದ ಪಾರ್ಕಿಂಗ್ ಏರಿಯಾದಲ್ಲಿ 5 ಅಡಿ ನೀರು ನಿಂತಿದ್ದು. ಪ್ರವಾಹದ ಪರಿಣಾಮದಿಂದ ಬಸ್‌ಗಳು ಪ್ರವೇಶಿಸಲು ವಿಫಲವಾದ ಕಾರಣ ಹತ್ತಿರದ ಅಪಾರ್ಟ್‌ಮೆಂಟ್‌ಗಳ ಅನೇಕ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಸ್ಥಳೀಯರು 10,000 ರೂ.ಗೆ ಅಗ್ನಿಶಾಮಕ ಯಂತ್ರವನ್ನು ಬಾಡಿಗೆಗೆ ಪಡೆದಿವೆ. ಸೋಮವಾರ ತಮ್ಮ ನೆಲಮಾಳಿಗೆಯಿಂದ ನೀರನ್ನು ತೆಗೆದಿದೆ. ಫರ್ನ್ ಸರೋಜ್‌ ನಿವಾಸಿ ಪದ್ಮಜಾ ರಾಮಮೂರ್ತಿ ಮತ್ತು ಅವರ ಕುಟುಂಬ ಮಾತನಾಡಿ, "ನಮಗೆ ಇಬ್ಬರು ಪುಟ್ಟ ಅವಳಿ ಮಕ್ಕಳಿದ್ದಾರೆ. ಮೂಲಭೂತ ಸೌಕರ್ಯಗಳಿಲ್ಲದೆ ಅವರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ನಾವು ಹೋಟೆಲ್‌ಗೆ ಹೋಗುತ್ತಿದ್ದೇವೆ, "ಎಂದು ಅವರು ಹೇಳಿದರು.

Bengaluru floods: No electricity, No water: Families shift to hotels

ಶ್ರೀ ಕಾಸಾ ಗ್ರಾಂಡೆ (ಕಾಡುಬೀಸನಹಳ್ಳಿ)ಯಿಂದ ಪ್ರೆಸ್ಟೀಜ್ ಟೆಕ್ ಪಾರ್ಕ್ ಹಿಂಭಾಗದ ಗೇಟ್ ಸಂಪೂರ್ಣ ಜಲಾವೃತಗೊಂಡಿದ್ದು ವಿದ್ಯುತ್, ಕುಡಿಯುವ ನೀರು ಮತ್ತು ದಿನಸಿ ಸರಬರಾಜು ಆಗುತ್ತಿಲ್ಲ. ಬೆಳಿಗ್ಗೆಯಿಂದ ನೀರಿನ ಮಟ್ಟ ಹೆಚ್ಚಿದೆ ಎಂದು ವೈಭವ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಮಳೆ ಅವಾಂತರಗಳಿಂದಾಗಿ ಜನ ರಾಜ್ಯ ಸರ್ಕಾರವನ್ನು ದೂಷಿಸಲು ಪ್ರಾರಂಭಿಸಿದ್ದಾರೆ. ಜಲಾವೃತವಾದ ಪ್ರದೇಶಗಳ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಬೊಮ್ಮಾಯಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನೀವು ನಮ್ಮ ನಗರವನ್ನು ಯುರೋಪಿಯನ್ ಮಾನದಂಡಗಳಿಗೆ ಅಭಿವೃದ್ಧಿಪಡಿಸಿದ್ದೀರಿ. ಹೀಗಾಗಿ ಈಗ ಇಂದಿರಾನಗರ ವೆನಿಸ್ (Venice city) ನಂತೆ ಕಾಣಲಾರಂಭಿಸಿದೆ' ಎಂದು ಕುಟುಕಿದ್ದಾರೆ.

Bengaluru floods: No electricity, No water: Families shift to hotels

ಔಟರ್ ರಿಂಗ್ ರೋಡ್‌ನಲ್ಲಿ ರಸ್ತೆಗಳು ಜಲಾವೃತಗೊಂಡ ದೃಶ್ಯಗಳು ವೈರಲ್ ಆಗಿವೆ. ರಸ್ತೆಯಲ್ಲಿ ಮೊಣಕಾಲು ಮುಳುಗುವಷ್ಟು ನೀರು ನಿಂತಿದ್ದು ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ದೃಶ್ಯದಲ್ಲಿ ಕಾರೊಂದನ್ನು ತಳ್ಳುತ್ತಿರುವುದು ಕಾಣಬಹುದು. ಜೊತೆಗೆ ಟೋಲ್ ಬಳಿ ಬಸ್‌ ಇತರ ವಾಹನಗಳು ಮುಂದೆ ಸಾಗದೇ ನಿಂತಿರುವುದನ್ನು ಕಾಣಬಹುದು. ಸೆಪ್ಟೆಂಬರ್ 9ರ ತನಕ ನಗರದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಇನ್ನೂ ಬೆಂಗಳೂರಿನ ಮಾರತ್ತಹಳ್ಳಿ-ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆಯಲ್ಲಿ ತೀವ್ರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡ ದೃಶ್ಯಗಳು ಕಂಡು ಬಂದಿವೆ. ಮಾತ್ರವಲ್ಲದೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿರುವುದು ಕಂಡುಬಂದಿದೆ. ವಾಹನ ಸವಾರರು ನಿಗದಿತ ಸಮಯಕ್ಕೆ ಕಚೇರಿಗಳಿಗೆ ತೆರಳಲಾಗದೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+