ಮೀನು ದಿನಾಚರಣೆಯಲ್ಲಿ ಹರಿದು ಬಂದ ಮಾಹಿತಿ ಸಾಗರ
ಬೆಂಗಳೂರು, ಜುಲೈ, 13: ಕರ್ನಾಟಕ ಸರ್ಕಾರ ಮತ್ತು ಮೀನುಗಾರಿಕೆ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೀನುಗಾರರ ದಿನಾಚರಣೆಯನ್ನು ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ವೈಸ್ ಛಾನ್ಸಲರ್ ಡಾ. ಸಿ ವಸುದೇವಪ್ಪ ಉದ್ಘಾಟನೆ ಮಾಡಿದರು.
ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮೀನು ತಳಿ ಸಂರಕ್ಷಣೆ ಮತ್ತು ಬೆಳವಣಿಗೆ ಬಗ್ಗೆ ವಸುದೇವಪ್ಪ ಸಲಹೆ ನೀಡಿದರು. ಮೀನುಗಾರಿಕೆ ಇಲಾಖೆ ಸಹಾಯಕ ಸಂಶೋಧನಾ ನಿರ್ದೇಶಕ ಡಾ.ವೈ.ಬಸವರಾಜು ಹಾಜರಿದ್ದು ಅಮೂರ್ ಮೀನು ಸಾಕಣೆ ಕುರಿತು ಹೆಚ್ಚಿನ ಮಾಹಿತಿ ಒದಗಿಸಿಕೊಟ್ಟರು.[ಫಿಶ್ ಪ್ರಿಯರ ಹಸಿವು ನೀಗಿಸುವ ಮೀನಿಗೊಂದು ದಿನಾಚರಣೆ]

ಮನುಷ್ಯನಿಗಿಂತಲೂ ಹೆಚ್ಚಿನ ಇತಿಹಾಸ ಹೊಂದಿರುವ ಮತ್ಸ್ಯ ಸಂತತಿ ಉಳಿವು ಮತ್ತು ಸಂರಕ್ಷಣೆ ಜತೆಗೆ ಮೀನುಗಾರರಿಗೆ ವಂದನೆ ಸಲ್ಲಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.[ನೀವಿದ್ದಲ್ಲೆ ಬರಲಿದೆ ರುಚಿ ರುಚಿ ಮೀನು ಖಾದ್ಯ]

ವಿಶ್ವದಲ್ಲಿ ಚೀನಾ ನಂತರ ಮೀನುಗಾರಿಕಾ ಕ್ಷೇತ್ರದಲ್ಲಿ ಭಾರತ 2ನೇ ಸ್ಥಾನದಲ್ಲಿ ವಿರಾಜಮಾನವಾಗುವಂತೆ ಮಾಡುವಲ್ಲಿ ಮೀನು ತಳಿ ಸಂಶೋಧಕರು ಹಾಗೂ ಮೀನುಗಾರರ ಪಾತ್ರ ತುಂಬಾ ಮಹತ್ವದ್ದಾಗಿದೆ. 'ಮೀನಿಗೊಂದು ದಿನ' ಎಂಬ ಘೋಷವಾಕ್ಯದಲ್ಲಿ ಕಾರ್ಯಕ್ರಮ ಆಚರಿಸಲಾಯಿತು.












Click it and Unblock the Notifications