ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೋಲ್ವೋ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಆದರೂ ಆದಾಯದಲ್ಲಿ ಕುಸಿತ

|
Google Oneindia Kannada News

ಬೆಂಗಳೂರು, ಫೆಬ್ರವರಿ 27 : ಬಿಎಂಟಿಸಿ ವೋಲ್ವೋ ಬಸ್‌ಗಳ ಟಿಕೇಟ್ ದರ ಕಡಿಮೆಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಶೇ. 10 ರಷ್ಟು ಏರಿಕೆಯಾಗಿದೆ. ಆದರೂ ವೋಲ್ವೋ ಬಸ್ ಆದಾಯ ನಿತ್ಯ ಎರಡು ಲಕ್ಷ ಕುಸಿಯುತ್ತಿದೆ.

ಬಿಎಂಟಿಸಿಯು ಜನವರಿ 1 ರಿಂದ ಅನ್ವಯವಾಗುವಂತೆ ವೋಲ್ವೋ ಬಸ್ ಟಿಕೆಟ್ ದರವನ್ನು ಸ್ಟೇಜ್ ಗಳ ಆಧಾರದ ಮೇಲೆ ಶೇ.37 ರವರೆಗೂ ಕಡಿತಗೊಳಿಸಿತ್ತು. ಈ ಪರಿಷ್ಕೃತ ದರ ಪ್ರಾಯೋಗಿಕವಾಗಿ ಒಂದು ತಿಂಗಳು ಮಾತ್ರ ಜಾರಿಯಲ್ಲಿರುವುದಾಗಿ ತಿಳಿಸಿತ್ತು.

ವಾಹನ ದಟ್ಟಣೆ: ಬಿಎಂಟಿಸಿ ಸಂಚಾರದಲ್ಲಿ ದಿನಕ್ಕೆ 1.5 ಲಕ್ಷ ಕಿ.ಮೀ ಕತ್ತರಿವಾಹನ ದಟ್ಟಣೆ: ಬಿಎಂಟಿಸಿ ಸಂಚಾರದಲ್ಲಿ ದಿನಕ್ಕೆ 1.5 ಲಕ್ಷ ಕಿ.ಮೀ ಕತ್ತರಿ

ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಪರಿಷ್ಕೃತ ದರ ವಿಸ್ತರಿಸುವುದಾಗಿಯೂ ಹೇಳಿತ್ತು. ಅದರಂತೆ ಜನವರಿ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿದ್ದರೂ ತಕ್ಕಮಟ್ಟಗೆ ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ.

Bengaluru: Fare cu! Volvos getting 10 percent more riders

ಈ ಹಿನ್ನೆಲೆಯಲ್ಲಿ ಪರಿಷ್ಕೃತ ದರವನ್ನು ಫೆಬ್ರವರಿ ತಿಂಗಳಿಗೂ ವಿಸ್ತರಿಸಲಾಗಿದೆ. ನಗರದಲ್ಲಿ ಪ್ರತಿನಿತ್ಯ ಸುಮಾರು 60 ರಿಂದ 70 ಸಾವಿರ ಪ್ರಯಾಣಿಕರು ವೋಲ್ವೋ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಟಿಕೇಟ್ ದರ ಇಳಿಕೆ ಬಳಿಕ ಕಳೆದು ಒಂದು ತಿಂಗಳಲ್ಲಿ ದಿನಕ್ಕೆ ಸುಮಾರು 6 ಸಾವಿರಕ್ಕೂ ಹೆಚ್ಚಿನ ಪ್ರಯಾಣಿಕರು ವೋಲ್ವೋ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ.

ಬಿಎಂಟಿಸಿ ಬಸ್ ಟಿಕೆಟ್ ತಪಾಸಣಾ ಅಧಿಕಾರಿಗೂ ಕ್ಯಾಮೆರಾ!ಬಿಎಂಟಿಸಿ ಬಸ್ ಟಿಕೆಟ್ ತಪಾಸಣಾ ಅಧಿಕಾರಿಗೂ ಕ್ಯಾಮೆರಾ!

ವೆಚ್ಚ ಹೆಚ್ಚು, ಆದಾಯ ಕಡಿಮೆ: ವೋಲ್ವೋ ಬಸ್‌ಗಳ ಕಾರ್ಯಾಚರಣೆಗೆ ಪ್ರತಿ ಕಿ.ಮೀಗೆ 77ರು ವೆಚ್ಚವಾಗುತ್ತದೆ. ಆದಾಯ ಮಾತ್ರ ಪ್ರತಿ ಕಿ.ಮೀಗೆ 45 ರೂ ಬರುತ್ತಿದೆ. ಇದರಿಂದ ಬಿಎಂಟಿಸಿಗೆ ಪ್ರತಿ ಕಿ.ಮೀಗೆ 32 ರೂ ನಷ್ಟವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
The Dip in Volvo bus fares by 37 percent since the beginning of the new year is seeing a good response from commuters in East Bengaluru. AC buses going to Whitefield, Mahadevapura and surrounding areas. Volvos getting 10 percent more commuters
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X