ಬೆಂಗಳೂರಿನಲ್ಲಿ ಕಡಿಮೆ ದರದಲ್ಲಿ ರುಚಿಯಾದ ಬಿರಿಯಾನಿ ನೀಡುವ ಹೋಟೆಲ್‌ಗಳು: ದರ, ಸ್ಥಳಗಳ ಮಾಹಿತಿ ತಿಳಿಯಿರಿ
Bengaluru Famous Biryani Houses: ಈಗ ಬೆಂಗಳೂರಿನಲ್ಲಿ ಗಲ್ಲಿಗೊಂದು ಬಿರಿಯಾನಿ ಸೆಂಟರ್‌ಗಳಾಗಿವೆ. ಅದರಲ್ಲೂ, ಬಹುತೇಕ ಮಂದಿ ರುಚಿ ಹಾಗೂ ಕೈಗೆಟಕುವ ದರದಲ್ಲಿ ಬಿರಿಯಾನಿ ಕೊಡುವ ಹೋಟೆಲ್‌ಗಳನ್ನು ಹುಡುಕುತ್ತಿರುತ್ತಾರೆ. ಅಂತಹವರಿಗಾಗಿಯೇ ನಗರದಲ್ಲಿನ ಟಾಪ್ ಹೋಟೆಲ್‌ಗಳ ಪಟ್ಟಿಯನ್ನು ಬೆಲೆ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿನಲ್ಲಿ ಕಡಿಮೆ ದರದಲ್ಲಿ ಕ್ವಾಲಿಟಿ, ಕ್ವಾಂಟಿಟಿ ಬಿರಿಯಾನಿ ನೀಡುವ ಸೆಂಟರ್‌ಗಳಿವೆ. ಇವುಗಳು ತುಂಬಾ ಪ್ರಸಿದ್ಧಿ ಪಡಿರುವ ಹೋಟೆಲ್‌ಗಳು ಆಗಿದ್ದು, ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಜನ ಭೇಟಿ ನೀಡಿ ಬಿರಿಯಾನಿ ಸವಿದು ಹೋಗುತ್ತಲಿರುತ್ತಾರೆ. ಅವುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ ಗಮನಿಸಿ.

ಫೇಮಸ್ ಬಿರಿಯಾನಿ ಹೋಟೆಲ್‌ಗಳು
* ಶಿವಾಜಿ ಮಿಲಿಟರಿ ಹೋಟೆಲ್
* ಮಣಿಸ್ ದಮ್ ಬಿರಿಯಾನಿ
* ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೌಸ್
* ಮೇಘನಾ ಫುಡ್ಸ್
* ಎಸ್‌ಜಿ ರಾವ್ಸ್ ಮಿಲಿಟರಿ ಹೋಟೆಲ್
* ಹೈದರಾಬಾದ್ ಬಿರಿಯಾನಿ ಹೌಸ್
* ಪ್ಯಾರಡೈಸ್ ಬಿರಿಯಾನಿ
* ನಾಗಾರ್ಜುನ ರೆಸ್ಟೋರೆಂಟ್
* ಕೃತುಂಗ ರೆಸ್ಟೋರೆಂಟ್
* ರಾಗಿ ನಾಡು ರೆಸ್ಟೋರೆಂಟ್
* ಮಾಲ್ಗುಡಿ ಮೈಲಾರಿ ಮನೆ
ಶಿವಾಜಿ ಮಿಲಿಟರಿ ಹೋಟೆಲ್ ಬೆಂಗಳೂರಿನಲ್ಲಿ ಜಯನಗರ, ಬನಶಂಕರಿ, ಉಲ್ಸೂರ್, ಮಲ್ಲೇಶ್ವರಂ ನಾಲ್ಕು ಕಡೆ ಬ್ರಾಂಚ್‌ಗಳನ್ನು ಹೊಂದಿದೆ. ಇಲ್ಲಿ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ಸಿಗಲಿದೆ. ಅದರಲ್ಲೂ ಜಯನಗರದಲ್ಲಿ ಈ ಹೋಟೆಲ್ ಫೇಮಸ್ ಆಗಿದ್ದು, ಇಲ್ಲಿ ಚಿಕನ್ ದೊನ್ನೆ ಬಿರಿಯಾನಿ, ಮಟನ್ ದೊನ್ನೆ ಬಿರಿಯಾನಿ ರೈಸ್, ಫ್ರೈ/ಲೆಗ್/ಚಾಪ್ಸ್ ಸಿಗಲಿದೆ.
ಬಿರಿಯಾನಿ ದರಗಳು (ಒಂದು ಫ್ಲೇಟ್)
* ಚಿಕನ್ ದೊನ್ನೆ ಬಿರಿಯಾನಿ: ₹150-₹250
* ಮಟನ್ ದೊನ್ನೆ ಬಿರಿಯಾನಿ: ₹200-₹300
* ಬಿರಿಯಾನಿ ರೈಸ್: ₹100-₹150
* ಫ್ರೈ/ಲೆಗ್/ಚಾಪ್ಸ್ (ಒಂದಕ್ಕೆ): 100-₹200
ಮಣಿಸ್ ದಮ್ ಬಿರಿಯಾನಿ ಜೆ.ಪಿ. ನಗರ, ಕೋರಮಂಗಲ (1ನೇ ಬ್ಲಾಕ್), ಕಲ್ಯಾಣ್ ನಗರ, ಎಚ್‌ಎಸ್‌ಆರ್ ಲೇಔಟ್, ಕೆ.ಆರ್. ಪುರಂ ಸೇರಿದಂತೆ ನಗರದ ಹಲವೆಡೆ ಬ್ರಾಂಚ್‌ಗಳನ್ನು ಹೊಂದಿದೆ. ಇಲ್ಲಿ ಚಿಕನ್ ಬಿರಿಯಾನಿ, ಚಿಕನ್ 65 ಬಿರಿಯಾನಿ, ವೆಜ್ ದಮ್ ಬಿರಿಯಾನಿ ಸೇರಿದಂತೆ ಹಲವು ಬಿರಿಯಾನಿ ಐಟಂಗಳು ಸಿಗಲಿವೆ.
ಬಿರಿಯಾನಿ ದರಗಳು (ಒಂದು ಫ್ಲೇಟ್)
* ಚಿಕನ್ ಬಿರಿಯಾನಿ: ₹199-₹209
* ಚಿಕನ್ 65 ಬಿರಿಯಾನಿ: ₹199
* ವೆಜ್ ದಮ್ ಬಿರಿಯಾನಿ: ₹190-₹220
ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೌಸ್ ಕಮ್ಮನಹಳ್ಳಿ, ಸರ್ಜಾಪುರ ರಸ್ತೆ ಬೆಂಗಳೂರು ದಕ್ಷಿಣ, ಗರುಡಾಚಾರ್ ಪಾಳ್ಯ, ಮಾರತ್ತಹಳ್ಳಿ, ದೊಮ್ಮಸಂದ್ರಗಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಇಲ್ಲಿ ಚಿಕನ್ ದೊನ್ನೆ ಬೋನ್ ಲೆಸ್ ಬಿರಿಯಾನಿ, ಚಿಕನ್ ಲಾಲಿಪಾಪ್ ಬಿರಿಯಾನಿ, ಫಿಶ್ ಕಬಾಬ್ ಬಿರಿಯಾನಿ, ಮಶ್ರೂಮ್ ಬಿರಿಯಾನಿ, ಮಟನ್ ದೊನ್ನೆ ಬಿರಿಯಾನಿ, ವೆಜ್ ಬಿರಿಯಾನಿ ಸೇರಿದಂತೆ ಹಲವು ಬಿರಿಯಾನಿ ಐಟಂಗಳು ದೊರೆಯುತ್ತವೆ.
ದರಗಳು (ಒಂದು ಫ್ಲೇಟ್)
* ಚಿಕನ್ ದೊನ್ನೆ ಬಿರಿಯಾನಿ: ₹99-₹245
* ದೊನ್ನೆ ಬಿರಿಯಾನಿ ರೈಸ್: ₹175
* ದೊನ್ನೆ ಎಗ್ ಬಿರಿಯಾನಿ: ₹206
* ದೊನ್ನೆ ಬಿರಿಯಾನಿ ರೈಸ್ ಕಾಂಬೊ: ₹299
ಮೇಘನಾ ಫುಡ್ಸ್ ಜಯನಗರ 4Th ಬ್ಲಾಕ್, ಎಂ.ಜಿ. ರಸ್ತೆ, ಅಶೋಕ್ ನಗರ, ಕೋರಮಂಗಲ ಸೇರಿದಂತೆ ನಗರದ ಹಲವೆಡೆ ತನ್ನ ಬ್ರಾಂಚ್‌ಗಳನ್ನು ಒಳಗೊಂಡಿದೆ. ಇದು ಆಂಧ್ರ ಶೈಲಿಯ ಬಿರಿಯಾನಿ ಮತ್ತು ದಕ್ಷಿಣ ಭಾರತದ ಖಾದ್ಯಗಳಿಗೆ ಹೆಸರುವಾಸಿ ಆಗಿದ್ದು, ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ಸಿಗಲಿವೆ.
ದರಗಳು (ಒಂದು ಫ್ಲೇಟ್)
* ಚಿಕನ್ ಬೋನ್ ಲೆಸ್ ಬಿರಿಯಾನಿ: ₹360
* ಮೇಘನಾ ಸ್ಪೆಷಲ್ ಬಿರಿಯಾನಿ: ₹370
* ಪನ್ನೀರ್ ಬಿರಿಯಾನಿ: ₹365
* ಸ್ಪೆಷಲ್ ವೆಜ್ ಬಿರಿಯಾನಿ: ₹330
* ವೆಜ್ ಬಿರಿಯಾನಿ ರೈಸ್: ₹260
ಎಸ್‌ಜಿ ರಾವ್ಸ್ ಮಿಲಿಟರಿ ಹೋಟೆಲ್ ಕಾಟನ್‌ಪೇಟ್, ರಾಜಾಜಿನಗರ, ಮೆಜೆಸ್ಟಿಕ್‌ನಲ್ಲಿ ತನ್ನ ಬ್ರಾಂಚ್‌ಗಳನ್ನು ಹೊಂದಿದೆ. ಇಲ್ಲಿ ಮಟನ್ ಪುಲಾವ್, ಚಿಕನ್ ಕುರ್ಮಾ, ಸಾದಾ ಪುಲಾವ್ ಸೇರಿದಂತೆ ಇನ್ನಿತರೆ ಖಾದ್ಯಗಳು ದೊರೆಯಲಿವೆ.
ದರಗಳು (ಒಂದು ಫ್ಲೇಟ್)
* ಚಿಕನ್ ಕುರ್ಮಾ: ಸುಮಾರು ₹160
* ಸಾದಾ ಪುಲಾವ್: ₹130
ಹೈದರಾಬಾದ್ ಬಿರಿಯಾನಿ ಹೌಸ್ ಎಚ್‌ಎಸ್‌ಆರ್ ಲೇಔಟ್, ವಿಕ್ಟೋರಿಯಾ ಲೇಔಟ್, ಬನ್ನೇರುಘಟ್ಟ ರಸ್ತೆ, ಜೆ.ಪಿ. ನಗರ, ಹಳೆಯ ವಿಮಾನ ನಿಲ್ದಾಣ ರಸ್ತೆ, ಮುರ್ಗೇಶ್ ಪಾಳ್ಯ, ಅಶೋಕ್ ನಗರ, ಕಲ್ಯಾಣ್ ನಗರ ಸೇರಿದಂತೆ ಇತರೆಡೆ ಶಾಖೆಗಳನ್ನು ಒಳಗೊಂಡಿದೆ. ಇಲ್ಲಿ ಹೈದರಾಬಾದ್ ವೆಜ್ ಬಿರಿಯಾನಿ, ಹೈದರಾಬಾದ್ ಬಿರಿಯಾನಿ, ಹೈದರಾಬಾದ್ ಎಗ್ ಬಿರಿಯಾನಿ, ಹೈದರಾಬಾದ್ ಚಿಕನ್ ದಮ್ ಬಿರಿಯಾನಿ, ಕಬಾಬ್ ಬಿರಿಯಾನಿ ಸಿಗಲಿದೆ.
ದರಗಳು (ಒಂದು ಫ್ಲೇಟ್)
* ಹೈದರಾಬಾದ್ ವೆಜ್ ಬಿರಿಯಾನಿ: ₹130
* ಹೈದರಾಬಾದ್ ಬಿರಿಯಾನಿ ರೈಸ್: ₹140
* ಹೈದರಾಬಾದ್ ಎಗ್ ಬಿರಿಯಾನಿ: ₹170
* ಹೈದರಾಬಾದ್ ಚಿಕನ್ ದಮ್ ಬಿರಿಯಾನಿ: ₹230
* ಕಬಾಬ್ ಬಿರಿಯಾನಿ: ₹225
ಹೀಗೆ ಪ್ಯಾರಡೈಸ್ ಬಿರಿಯಾನಿ, ನಾಗಾರ್ಜುನ ರೆಸ್ಟೋರೆಂಟ್, ಕೃತುಂಗ ರೆಸ್ಟೋರೆಂಟ್, ರಾಗಿ ನಾಡು, ರೆಸ್ಟೋರೆಂಟ್, ಮಾಲ್ಗುಡಿ ಮೈಲಾರಿ ಹೌಸ್ ಹೋಟೆಲ್‌ಗಳಲ್ಲೂ ಸಹ ಬಿರಿಯಾನಿ ಖಾದ್ಯಗಳು ಕೈಗೆಟಕುವ ದರಲ್ಲಿ ಸಿಗಲಿವೆ.












Click it and Unblock the Notifications