Rain Alert: ರಾಜಧಾನಿಗೆ ಮುಂದಿನ 3 ಗಂಟೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ

ಬೆಂಗಳೂರು, ಏಪ್ರಿಲ್ 20: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆ ಸಕ್ರಿಯವಾಗಿದೆ. ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಆರಂಭದಿಂದಲೂ ಚುರುಕಾಗಿದ್ದು, ನಿತ್ಯ ವಿವಿಧೆಡೆ ಸುರಿಯುತ್ತಿದೆ. ನಗರದಲ್ಲಿ ಇಂದು ಏಪ್ರಿಲ್ 20ರಂದು ಭಾನುವಾರ ನೆಲಮಂಗಲ ಸೇರಿದಂತೆ ವಿವಿಧೆಡೆ ವ್ಯಾಪಕ ಮಳೆ ಆಗುತ್ತಿದೆ. ಹಗುರದಿಂದ ಸಾಧಾರಣ ಮಳೆ ಆಗುತ್ತಿದೆ. ಮುಂದಿನ ಮೂರು ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಲಿದೆ. ಇಂದು ತಡರಾತ್ರಿವರೆಗೆ ಮಳೆ ಮುಂದುವರಿಯಲೂ ಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNCMC)

ನಗರದಲ್ಲಿ ಗುಡುಗು ಸಹಿತ ಮಳೆ ಅಬ್ಬರ ಕಂಡು ಬಂದಿದೆ. ಎಲ್ಲೆಡೆ ಮೋಡ ಕವಿದ ಮಬ್ಬು ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆಯಿಂದ ಇದ್ದ ತಾಪಮಾನ ಕಡಿಮೆ ಆಗಿದ್ದು, ತಂಪು ವಾತಾವರಣ ನಿರ್ಮಾಣವಾಗಿದೆ. ಸಂಜೆ 05 ಗಂಟೆ ಹೊತ್ತಿಗೆ ನಗರದ 08 ವಾರ್ಡ್‌ಗಳ ಹಗುರದಿಂದ ಸಾಧಾರಣೆ ಮಳೆ ದಾಖಲಾಗಿದೆ.

Bengaluru Face Partily Cloudy Sky With Light Thunderstorm Raifall in Isolated Place in Next 3 hours

ಜಕ್ಕೂರು, ಹೂಡಿ, ಹೊರಮಾವು, ಮಹಾದೇವಪುರ, ವಿದ್ಯಾರಣ್ಯಪುರ, ನೆಲಮಂಗಳ, ಹೇರೋಹಳ್ಳಿ, ಕಾಡುಗೋಡಿ, ಕೋರಮಂಗಲ, ಮಡಿವಾಳ, ಕೆ.ಆರ್.ಪುರಂ ಗರುಡಾಚಾರ್ ಪಾಳ್ಯ, ವೈಟ್‌ಫಿಲ್ಡ್, ವರ್ತೂರು, ದೇವಸಂದ್ರ, ಬನ್ನೇರುಘಟ್ಟ ರಸ್ತೆ, ದೊಮ್ಮಲೂರು ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಚದುರಿದಂತೆ ಸಾಮಾನ್ಯ ಮಳೆ ಆಗಿದೆ. ಗುಡುಗು ಆರ್ಭಟ ಮುಂದುವರೆಸಿದೆ.

ಇದೇ ರೀತಿಯ ವಾತಾವರಣ ಮುಂದುವರಿಯು ನಿರೀಕ್ಷೆ ಇದೆ. ಹೀಗಾಗಿ ಇಂದು ತಡರಾತ್ರಿವರೆಗೆ ಈ ಪೂರ್ವ ಮುಂಗಾರು ಮಳೆ ಬೆಂಗಳೂರಿನ ಜನರಿಗೆ ಕಿರಿ ಕಿರಿ ನೀಡಲಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಬೆಂಗಳೂರಿನಲ್ಲಿ ಇಂದು ಮಾತ್ರವೇ ಜೋರು ಮಳೆ ಬರಲಿದೆ. ಮುಂದಿನ ಮೂರು ದಿನ ಮತ್ತೆ ಬಿಸಿಲು ಬರಲಿದ್ದು, ನಂತರ ಎರಡು ದಿನ ಮತ್ತೆ ಜೋರು ಮಳೆ ಆಗುವ ಸಾಧ್ಯತೆ ಇದೆ.

ಏಪ್ರಿಲ್ 25, 26 ರಂದು ಭಾರೀ ಮಳೆ

ಏಪ್ರಿಲ್ 25, 26 ರಂದು ಎರಡು ದಿನ ಬೆಂಗಳೂರಿನಾದ್ಯಂತ ಮತ್ತೆ ಮಳೆ ಅಬ್ಬರಿಸಲಿದೆ. ಮುಂದಿನ ಒಂದು ವಾರ ಕಾಲ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತದೆ. ನಿತ್ಯ ಬೆಳಗ್ಗೆ ಬಿಸಿಲು ಕಂಡು ಬಂದರೂ ಸಂಜೆ ಭಾರೀ ಮಳೆ ಆಗಬಹುದು.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯ ಕಾರಣದಿಂದಾಗಿ ಕರ್ನಾಟಕದಲ್ಲಿ ಮಳೆ ಅಬ್ಬರಿಸುತ್ತಿದೆ. ಇಂದು ಬೆಂಗಳೂರು ಮಾತ್ರವಲ್ಲದೇ ತುಮಕೂರು, ಸಕಲೇಶಪುರದಲ್ಲಿ ಮಳೆ ಚುರುಕಾಗಿದೆ. ಮುಂದಿನ ಐದು ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+