Bengaluru Rains: ನಗರದಲ್ಲಿಂದು ಮಧ್ಯಾಹ್ನವೇ ದಿಢೀರ್ ಮಳೆ, ಮುಂದಿನ 7ದಿನ ಹವಾಮಾನ ಮುನ್ಸೂಚನೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಗಾಗ ಸುರಿಯುತ್ತಿದ್ದ ಮಳೆ ಶನಿವಾರ ಮತ್ತು ಭಾನುವಾರ ಅನೇಕ ಕಡೆಗಳಲ್ಲಿ ಸುರಿದಿದೆ. ಇಂದು ಭಾನುವಾರ ಮಧ್ಯಾಹ್ನದಿಂದಲೇ ಸುಮಾರು 50ಕ್ಕೂ ಅಧಿಕ ಬಡಾವಣೆಗಳಲ್ಲಿ ಜೋರು ಮಳೆ ಸುರಿಯುತ್ತಿದೆ. ಮುಂದಿನ ಒಂದು ವಾರ ನಗರದಲ್ಲಿ ಇದೇ ರೀತಿ ಮಳೆ ಆಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSRNDMC)
ಬೆಂಗಳೂರಿನಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದೆ. ಇಂದು ನಗರದ ಹೆಬ್ಬಾಳ, ಆಡುಗೋಡಿ, ವಿವಿ ಪುರಂ, ಪದ್ಮನಾಭನಗರ, ನಾಯಂಡಹಳ್ಳಿ, ವಿಶ್ವನಾಥ್ ನಾಗೇನಹಳ್ಳಿ, ಮಹಾಲಕ್ಷ್ಮೀ ನಗರ, ಸುಬ್ರಹ್ಮಣ್ಯ ನಗರ, ಕೋರಮಂಗಲ, ಮಹಾದೇವಪುರ, ಮಾರತ್ತಹಳ್ಳಿ, ಬೆಳ್ಳಂದೂರು, ಇಬ್ಬಲೂರು, ದಯಾನಂದ ನಗರ ಸೇರಿದಂತೆ 50ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಇಂದು ದಿಢೀರ್ ಮಳೆ ಸುರಿಯಿತು. ಗಂಟೆಗಳ ಕಾಲ ನಿರಂತರವಾಗಿ ಮಳೆ ದಾಖಲಾಗಿದ್ದು, ಇದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಧಾನವಾಯಿತು.

ನಗರದಲ್ಲಿ ಕೆಲವು ದಿನಗಳಿಂದ ನಗರದಲ್ಲಿ ತಂಪು ವಾತಾವರಣ ನಿರ್ಮಾಣವಾಗಿದ್ದು, ಸಂಜೆ ಹೊತ್ತಿಗೆ ಹಲವಾರು ಬಡಾವಣೆಗಳಲ್ಲಿ ಸುರಿಯುತ್ತಿದ್ದು, ಇದೇ ಮಳೆ ಶನಿವಾರವು (ಆಗಸ್ಟ್ 22) ಮುಂದುವರಿಯಿತು. ನೆನ್ನೆ 180 ವಾರ್ಡ್‌ಗಳಲ್ಲಿ ಜೋರು ಮಳೆ ಆಗಿದ್ದು, ಅನೇಕ ಕಡೆಗಳಲ್ಲಿ ಸಂಚಾರ ಸಮಸ್ಯೆ, ಕೆಲವೆಡೆ ಪ್ರವಾಹ ವಾತಾವರಣ ನಿರ್ಮಿಸಿತ್ತು. ವಾಟಾರ್ ಲಾಗಿಂಗ್ ಸಮಸ್ಯೆಯಿಂದಾಗಿ ಪ್ರಮುಖ ಜಂಕ್ಷನ್‌ಗಳಲ್ಲಿ ನೀರು ನಿಂತಿದ್ದು ಕಂಡು ಬಂತು. ಈ ಮಳೆ ಇಂದು ತಡರಾತ್ರಿವರೆಗೂ ಮುಂದುವರಿಯುವ ಎಲ್ಲ ಸೂಚನೆಗಳು ಕಾಣಿಸುತ್ತಿವೆ. ಅಷ್ಟರ ಮಟ್ಟಿಗೆ ಬೆಂಗಳೂರಿನಲ್ಲಿ ಮಳೆ ಆಗುತ್ತಿದೆ.
ಇಂದಿನ ತಾಪಮಾನ ಎಷ್ಟಿತ್ತು?
ಇಂದು ಬೆಳಗ್ಗೆ ನಗರದಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ರೀತಿ ಬೆಂಗಳೂರು ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಗರಿಷ್ಠ 28 ಮತ್ತು ಕನಿಷ್ಠ 19.8 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಎಚ್‌ಎಎಲ್ ಏರ್‍ಪೋರ್ಟ್ ಗರಿಷ್ಠ 28 ಮತ್ತು 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರಿನ ಹವಾಮಾನ ವರದಿ
ಬೆಂಗಳೂರಿನಲ್ಲಿ ಆಗಸ್ಟ್ 30ರವರೆಗೆ ನಗರಾದ್ಯಂತ ಆಗಾಗ ಹಗುರದಿಂದ ಸಾಧಾರಣ, ಹಲವೆಡೆ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ಒಟ್ಟು ಒಂದು ವಾರ ಕನಿಷ್ಠ ತಾಪಮಾನ ಹಾಗೂ ಚಳಿ, ತಂಪು ವಾತಾವರಣ ಕಂಡು ಬರಲಿದೆ. ಗರಿಷ್ಠ 28 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಕರ್ನಾಟಕ ಹವಾಮಾನ ವಾತಾವರಣ
ಉತ್ತರ ಒಳನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಮುಂದಿನ ಮೂರು ದಿನ ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಯಾದಗಿರಿ, ವಿಜಯಪುರ, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ಐಎಂಡಿ 'ಯೆಲ್ಲೋ ಅಲರ್ಟ್' ಘೋಷಿಸಿದೆ.


Click it and Unblock the Notifications
