ಚಿತ್ರಗಳಲ್ಲಿ : 9 ಜನರ ಬಲಿ ಪಡೆದ ಆನೇಕಲ್ ರೈಲು ದುರಂತ

ಬೆಂಗಳೂರು, ಫೆ. 13 : ಬೆಂಗಳೂರು ಹೊರವಲಯದ ಆನೇಕಲ್ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ರೈಲು ಅಪಘಾತದಲ್ಲಿ 9 ಪ್ರಯಾಣಿಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸತತ ಏಳು ಗಂಟೆಗಳ ಕಾರ್ಯಾಚರಣೆ ಬಳಿಕ ರೈಲಿನ ಬೋಗಿಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ರೈಲಿನಿಂದ ಹೊರತೆಗೆಯಲಾಗಿದೆ.

ಆನೇಕಲ್ ರೈಲು ನಿಲ್ದಾಣದಿಂದ 3 ಕಿ.ಮೀ. ದೂರದ ಬಿದರಗೆರೆ ಬಳಿ ಬೆಳಗ್ಗೆ 7.30ರ ಸುಮಾರಿಗೆ ಬೆಂಗಳೂರು-ಎರ್ನಾಕುಲಂ ರೈಲು ಹಳಿ ತಪ್ಪಿ ಈ ಭೀಕರ ಅಪಘಾತ ಸಂಭವಿಸಿದೆ. ರೈಲಿನ ಎರಡು ಬೋಗಿಗಳು ಅಪಘಾತದಲ್ಲಿ ಸಂಪೂರ್ಣವಾಗಿ ಜಖಂಗೊಂಡಿವೆ. ಇಬ್ಬರು ವಿದೇಶಿ ಪ್ರಯಾಣಿಕರು ಸೇರಿ 50 ಜನರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೈಲ್ವೆ ಹಳಿಯ ಮೇಲೆ ಬಂಡೆ ಕುಸಿದು ಬಿದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರಿಗೆ 2 ಲಕ್ಷ ರೂ.ಗಳ ಪರಿಹಾರವನ್ನು ಅವರು ಘೋಷಣೆ ಮಾಡಿದ್ದಾರೆ. [ರೈಲು ಅಪಘಾತದ ಕ್ಷಣ-ಕ್ಷಣದ ಮಾಹಿತಿ]

ಕೇಂದ್ರ ಕಾನೂನು ಸಚಿವರ ಡಿ.ವಿ.ಸದಾನಂದ ಗೌಡ, ರಾಜ್ಯದ ಗೃಹ ಸಚಿವ ಕೆ.ಜೆ.ಜಾರ್ಜ್, ಆರೋಗ್ಯ ಸಚಿವ ಯ.ಟಿ.ಖಾದರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮುಂತಾದವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸತತ ಏಳು ಗಂಟೆಗಳ ಕಾರ್ಯಾಚರಣೆ ಬಳಿಕ ಬೋಗಿಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ರೈಲ್ವೈ ಅಪಘಾತದ ಚಿತ್ರಗಳು ಇಲ್ಲಿವೆ.

ಬೆಂಗಳೂರಿನಲ್ಲಿ ರೈಲು ದುರಂತ

ಬೆಂಗಳೂರಿನಲ್ಲಿ ರೈಲು ದುರಂತ

ಬೆಂಗಳೂರು ಹೊರವಲಯದ ಆನೇಕಲ್ ಬಳಿ ಶುಕ್ರವಾರ ಬೆಳಗ್ಗೆ ರೈಲು ಅಪಘಾತ ನಡೆದಿದ್ದು 9 ಪ್ರಯಾಣಿಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸತತ ಏಳು ಗಂಟೆಗಳ ಕಾರ್ಯಾಚರಣೆ ಬಳಿಕ ರೈಲಿನ ಬೋಗಿಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಹಳಿ ತಪ್ಪಿದ ಬೆಂಗಳೂರು-ಎರ್ನಾಕುಲಂ ರೈಲು

ಹಳಿ ತಪ್ಪಿದ ಬೆಂಗಳೂರು-ಎರ್ನಾಕುಲಂ ರೈಲು

ಬೆಂಗಳೂರು-ಎರ್ನಾಕುಲಂ ರೈಲು ಆನೇಕಲ್ ರೈಲು ನಿಲ್ದಾಣದಿಂದ 3 ಕಿ.ಮೀ. ದೂರದ ಬಿದರಗೆರೆ ಬಳಿ ಬೆಳಗ್ಗೆ 7.30ರ ಸುಮಾರಿಗೆ ಹಳಿ ತಪ್ಪಿದೆ. ಈ ಭೀಕರ ಅಪಘಾತದಲ್ಲಿ ರೈಲಿನ ಎರಡು ಬೋಗಿಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಇಬ್ಬರು ವಿದೇಶಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಹಳಿಯ ಮೇಲೆ ಬಂಡೆ ಬಿದ್ದಿದ್ದು ಕಾರಣ

ಹಳಿಯ ಮೇಲೆ ಬಂಡೆ ಬಿದ್ದಿದ್ದು ಕಾರಣ

ರೈಲ್ವೆ ಹಳಿಯ ಮೇಲೆ ಬಂಡೆ ಕುಸಿದು ಬಿದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ. ರೈಲಿನ 8 ಬೋಗಿಗಳು ಹಳಿ ತಪ್ಪಿದ್ದವು. 2 ಬೋಗಿಗಳು ಅಪಘಾತದಲ್ಲಿ ಸಂಪೂರ್ಣವಾಗಿ ಜಖಂಗೊಂಡಿವೆ.

ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ

ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ

ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ 2 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ಮತ್ತು ಸಣ್ಣ-ಪುಟ್ಟ ಗಾಯಗಳಾದವರಿಗೆ 25 ಸಾವಿರ ರೂ. ಪರಿಹಾರ ನೀಡಲಾಗುತ್ತದೆ ಎಂದು ರೈಲ್ವೆ ಇಲಾಖೆಯ ಪಿಆರ್‌ಓ ಅನಿಲ್ ಸಕ್ಸೆನಾ ಹೇಳಿದ್ದಾರೆ.

ಇಬ್ಬರು ವಿದೇಶಿ ಪ್ರಜೆಗಳಿಗೆ ಗಾಯ

ಇಬ್ಬರು ವಿದೇಶಿ ಪ್ರಜೆಗಳಿಗೆ ಗಾಯ

ರೈಲು ಅಪಘಾತದಲ್ಲಿ ಪೊಲೆಂಡ್ ನಿವಾಸಿ ಕ್ಯಾಮಿಲ್ ಅವರ ಕಾಲು ಮುರಿದು ಹೋಗಿದ್ದು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ಯಾಮಿಲ್ ಜೊತೆಗಿದ್ದ ಗೆಳತಿ ಅಲೆಕ್ಸಾಂಡ್ರಿಯಾ ಅವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಗೆಳತಿಯನ್ನು ಹುಡುಕಿ ಕೊಡುವಂತೆ ಕ್ಯಾಮಿಲ್ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆಗಳು

ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆಗಳು

ರೈಲು ದುರಂತದ ಬಗ್ಗೆ ಮಾಹಿತಿ ಪಡೆಯಲು ಕೇರಳ ರಾಜ್ಯದ ಸಹಾಯವಾಣಿ ಸಂಖ್ಯೆಗಳು : ತಿರುವನಂತಪುರಂ 0471 2321205, 2321237, 09746769960, ಎರ್ನಾಕುಲಂ -0484-2100317, 0813699773, 09539336040, ಎರ್ನಾಕುಲಂ ನಗರ 0484-2398200, ತಿರುಚೂರು - 04872424148, 2430060. ಬೆಂಗಳೂರು ರೈಲು ನಿಲ್ದಾಣದಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ಸಂಖ್ಯೆಗಳು 080 - 22371166, 22156553, 22156554.

9 ಪ್ರಯಾಣಿಕರ ಸಾವು

9 ಪ್ರಯಾಣಿಕರ ಸಾವು

ಬೆಂಗಳೂರು-ಎರ್ನಾಕುಲಂ ರೈಲು ದುರಂತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸತತ ಏಳು ಗಂಟೆಗಳ ಕಾರ್ಯಾಚರಣೆಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿ ನಡೆಸಿದ್ದಾರೆ.

ರೈಲ್ವೆ ಸಚಿವರ ಟ್ವಿಟ್

ರೈಲ್ವೆ ಹಳಿಯ ಮೇಲೆ ಬಂಡೆ ಕುಸಿದು ಬಿದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ

ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ಆರ್‌ಎಸ್ಎಸ್

ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ಆರ್‌ಎಸ್ಎಸ್

ರೈಲು ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರು ಪಾಲ್ಗೊಂಡಿದ್ದರು. ಫೇಸ್‌ಬುಕ್‌ನಲ್ಲಿ ಅವರು ಅಲ್ಲಿಯ ಚಿತ್ರಗಳನ್ನು ಹಾಕಿದ್ದಾರೆ.

ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ

ರಕ್ಷಣಾ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದೇನೆ ಎಂದು ಕೇಂದ್ರ ರೈಲ್ವೆ ಸಚಿವರು ಟ್ವಿಟ್ ಮಾಡಿದ್ದಾರೆ.

ಎರಡು ರಾಜ್ಯಗಳ ವೈದ್ಯಕೀಯ ಸಿಬ್ಬಂದಿ

ಎರಡು ರಾಜ್ಯಗಳ ವೈದ್ಯಕೀಯ ಸಿಬ್ಬಂದಿ

ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಲು ಕರ್ನಾಟಕ ಹಾಗೂ ತಮಿಳುನಾಡಿನ ವೈದ್ಯರ ತಂಡ ಕೆಲಸ ಮಾಡಿದೆ. ವೈದ್ಯರು ಹೇಳುವ ಪ್ರಕಾರ 50 ಜನರು ಗಾಯಗೊಂಡಿದ್ದಾರೆ.

ರೈಲ್ವೆ ಇಲಾಖೆಯಿಂದ ತನಿಖೆ

ರೈಲ್ವೆ ಇಲಾಖೆಯಿಂದ ತನಿಖೆ

ಬೆಂಗಳೂರು-ಎರ್ನಾಕುಲಂ ರೈಲು ಅಪಘಾತಕ್ಕೆ ರೈಲಿನ ವೇಗ ಹೆಚ್ಚಾಗಿರುವುದೇ ಕಾರಣವೇ? ಎಂಬ ಬಗ್ಗೆ ರೈಲ್ವೆ ಇಲಾಖೆ ತನಿಖೆ ನಡೆಸಲಿದೆ.

ಅನೇಕ ರೈಲುಗಳ ಸಂಚಾರ ವ್ಯತ್ಯಯ

ಅನೇಕ ರೈಲುಗಳ ಸಂಚಾರ ವ್ಯತ್ಯಯ

ಈ ರೈಲಿನ ಅಪಘಾತದಿಂದಾಗಿ ಬೈಯಪ್ಪನಹಳ್ಳಿ-ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ. ಹೊಸೂರು ಕಡೆಯಿಂದ ಬರಬೇಕಿದ್ದ ರೈಲುಗಳ ಸಂಚಾರವೂ ಸ್ಥಗಿತಗೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+