Get Updates
Get notified of breaking news, exclusive insights, and must-see stories!

Bengaluru Infra Issue: ನಾನು ಭಾರತ ತೊರೆಯಬೇಕೆ? ಬೆಂಗಳೂರು ಉದ್ಯಮಿ ಪೋಸ್ಟ್ ವೈರಲ್

ಬೆಂಗಳೂರು, ಮೇ 07: ಉದ್ಯಾನ ನಗರಿ ಎಂದು ಹೆಸರಾದ ಬೆಂಗಳೂರು ಒಂದು ಕಾಲದಲ್ಲಿ ಅತ್ಯುತ್ತಮ, ಆಹ್ಲಾದಕರ ವಾತಾವರಣಕ್ಕೆ ಹೆಸರಾಗಿತ್ತು. ಆದರೆ ಇಂದು ನೀರಿನ ಸಮಸ್ಯೆ, ತೀವ್ರ ಬೇಸಿಗೆ ಎದುರಿಸುತ್ತಿದೆ. ಈ ಪರಿಸ್ಥಿತಿ ಟೀಕಿಸಿ ನಗರದ ಉದ್ಯಮಿಯೊಬ್ಬರು ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗಿದೆ. ಚರ್ಚೆ ಹುಟ್ಟು ಹಾಕಿದೆ.

ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಕೆಟ್ಟ ಹವಾಮಾನ, ಮೂಲಸೌಕರ್ಯಗಳ ಸಮಸ್ಯೆ ಕುರಿತು ವಾಣಿಜ್ಯೋದ್ಯಮಿ ಅನಂತ್ ಶರ್ಮಾ (Anant Sharma) ಅವರು ಟ್ವೀಟ್ (X) ಪೋಸ್ಟ್ ಮಾಡಿದ್ದಾರೆ. ಇದು ಬೆಂಗಳೂರಿನ ಸಮಸ್ಯೆಗಳ ಚರ್ಚೆಗೂ ಕಾರಣವಾಗಿದೆ. ಕೆಲವರು ಇದನ್ನು ಸಾಮಾನ್ಯ ವಿಷಯ ಎಂದು ಪ್ರತಿಕ್ರಿಯಿಸಿದ್ದಾರೆ.

Bengaluru Entrepreneur Contemplates Leaving City Over Infrastructure and Weather

ಬೆಂಗಳೂರಿನ ಈ ಕೆಟ್ಟ ಪರಿಸ್ಥಿತಿಯಿಂದ ಮುಕ್ತವಾಗಲು ನಗರ ತೊರೆಯಬೇಕೆ? ಮುಂಬೈ ಮತ್ತು ಪುಣೆ ನಗರಕ್ಕೆ ಸ್ಥಳಾಂತರವಾಗಲು ಯೋಗ್ಯವಾಗಿದೆಯೇ?. ಭಾರತ ತೊರೆಯಬೇಕೆ? ಎಂದು ಅವರು ಕೇಳಿದ್ದಾರೆ. ಈ ಮೂಲಕ ನಗರದ ಸ್ಥಿತಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಬೆಂಗಳೂರು ಇನ್ನಷ್ಟು ಹದಗೆಡಲಿದೆ

ರಾಜಧಾನಿ ಬೆಂಗಳೂರು ಮುಂದಿನ 5 ವರ್ಷಗಳಲ್ಲಿ ಕೆಟ್ಟ ವಾತಾವರಣ ಮತ್ತು ಕೆಟ್ಟ ನೀರಿನಿಂದ ಮತ್ತಷ್ಟು ಹಾಳಾಗಲಿದೆ. ನಾನು ಬೆಂಗಳೂರಿನಿಂದ ಸ್ಥಳಾಂತರವಾಗಬೇಕೆ? ಎಂದು ಟ್ವೀಟ್ ನಲ್ಲಿ ಕೇಳಿದ್ದಾರೆ.

ಶಾರ್ಮ ಅವರ ಟ್ವೀಟ್ ನೆಟ್ಟಿಗರಲ್ಲಿ ಚರ್ಚೆ ಸೃಷ್ಟಿಸಿದೆ. ಅವರ ಈ ಪೋಸ್ಟ್‌ಗೆ ಅನೇಕ ಕಾಮೆಂಟ್‌ಗಳು ಬಂದಿವೆ. ನಗರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬೆಂಗಳೂರಿನ ಸಮಸ್ಯೆಯನ್ನು ಕೆಲವು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವು ಇದರೊಂದಿಗೆ ಬದುಕು ನಿಭಾಯಿಸಲು ಆಗದಿದ್ದರೆ ಭಾರತ ಬಿಟ್ಟು ಹೊರ ಹೋಗುವ ಬಗ್ಗೆ ಯೋಚಿಸಿ ಎಂದಿದ್ದಾರೆ.

ಎಲ್ಲ ನಗರಳಂತೆ ಇಲ್ಲೂ ಅನೇಕ ಸಮಸ್ಯೆಗಳಿವೆ

ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಅಭಿವೃದ್ಧಿಯಂತಹ ಸಕಾರಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದರು. ಮತ್ತೊಬ್ಬರು ಕಾಮೆಂಟ್ ಮಾಡಿ, ಪ್ರತಿ ನಗರಗಳಲ್ಲೂ ಈ ರೀತಿಯ ಸಮಸ್ಯೆಗಳು ಇವೆ. ಇನ್ನೊಬ್ಬ ನೆಟ್ಟಿಗರು, ಇದೇನು ಹೊಸ ವಿಷಯವಲ್ಲ. ಸಾಮಾನ್ಯ ಸಂಗತಿಯಾಗಿದೆ. ಕೇವಲ ನೀರು, ಹವಾಮಾನ ಸಮಸ್ಯೆ ಮಾತ್ರವಲ್ಲ ಇಲ್ಲಿ ಇನ್ನೂ ಅನೇಕ ಸಮಸ್ಯೆಗಳು ಇವೆ. ಇಲ್ಲಿ ನಿಮಗೆ ಸರಿ ಹೊಂದದಿದ್ದರೆ, ಜಾಗ ಖಾಲಿ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಕೆಲವರು ಸಮಸ್ಯೆಗಳನ್ನು ಕಂಡು ವಲಸೆ ನಗರ ಎಂದು ಭಾವಿಸುತ್ತಾರೆ. ವೋಟ್ ಬ್ಯಾಂಕ್ ರಾಜಕಾರಣ ಇರುವವರೆಗೂ ನಗರವನ್ನು ಬದಲಾಯಿಸಲು ಸಾಧ್ಯವಿಲ್ಲ. ಇಲ್ಲಿನ ಶೇಕಡಾ 80ರಷ್ಟು ಮತದಾರರು ನಗರದ ಮೂಲಭೂತ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸುತ್ತಾರೆ. ನಾವು ಸರ್ಕಾರವನ್ನು ಒತ್ತಾಯಿಸುವುದಿಲ್ಲ. ಹೀಗಾಗಿ ಸರ್ಕಾರವನ್ನು ದ್ವೇಷಿಸಿದರೆ ಉಪಯೋಗವಿಲ್ಲ ಎಂದು ರಾಜಕಾರಣಿಗಳ ಬಗ್ಗೆ ಮತ್ತೊಬ್ಬರು ಅಸಮಾಧಾನ ಹೊರ ಹಾಕಿದ್ದಾರೆ.

ಈ ಉದ್ಯಮಿಯ ಪೋಸ್ಟ್‌ಗೆ ಅನೇಕ ಮಂದಿ ಪ್ರತಿಕ್ರಿಯಿಸಿ ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಕೆಲವು ಕಾಮೆಂಟ್ ಗಳಿಗೆ ಅವರು ಕೂಲ್ ಆಗಿಯೇ ಉತ್ತರಿಸಿದ್ದಾರೆ. ಒಟ್ಟಾರೆ ಬೆಂಗಳೂರಿನ ಮೂಲಭೂರ್ತ ಸೌಕರ್ಯಗಳ ಬಗ್ಗೆ ಈ ಉದ್ಯಮಿ ಚರ್ಚೆ ಹುಟ್ಟುಹಾಕುವ ಮೂಲಕ ಸುದ್ದಿಯಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+