ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಎಂಬೆಸಿ ಟೆಕ್‌ ಪಾರ್ಕ್‌ಗೆ ಬಾಂಬ್ ಬೆದರಿಕೆ ಕರೆ

|
Google Oneindia Kannada News

Recommended Video

ಬೆಂಗಳೂರಿನ ಎಂಬೆಸಿ ಟೆಕ್‌ ಪಾರ್ಕ್‌ಗೆ ಬಾಂಬ್ ಬೆದರಿಕೆ ಕರೆ | oneindia kannada

ಬೆಂಗಳೂರು, ಜೂನ್ 08: ಬೆಂಗಳೂರಿನ ರಿಂಗ್‌ ರೋಡ್ ಬಳಿ ಇರುವ ಎಂಬಸ್ಸಿ ಟೆಕ್‌ ಪಾರ್ಕ್‌ಗೆ ಶುಕ್ರವಾರ ಮಧ್ಯಾಹ್ನ ಬಾಂಬ್ ಬೆದರಿಕೆ ಕರೆ ಬಂದಿದ್ದು, ಉದ್ಯೋಗಿಗಳು ಆತಂಕದಲ್ಲಿದ್ದಾರೆ.

bengaluru embassy Tech village receives bomb threat

ಶುಕ್ರವಾರ ಮಧ್ಯಾಹ್ನ ಟೆಕ್‌ ಪಾರ್ಕ್‌ನ ಒಳಗಿರುವ ಸಿಸ್ಕೋ ಕಚೇರಿಗೆ ಬೆದರಿಕೆ ಕರೆ ಬಂದಿದ್ದು, ಕೂಡಲೇ ಸಿಬ್ಬಂದಿಗಳನ್ನು ಹೊರಕ್ಕೆ ಬರಲು ಹೇಳಿತು. ಟೆಕ್‌ ಪಾರ್ಕ್‌ನಲ್ಲಿ ಕೆಲಸ ಮಾಡುವ 7000 ಉದ್ಯೋಗಿಗಳು ಆತಂಕದಿಂದ ಕಚೇರಿಗಳಿಂದ ಹೊರಕ್ಕೆ ಬಂದಿದ್ದಾರೆ.

ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ. ವೈಟ್‌ಫಿಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್ ಅಹ್ಮದ್ ಅವರು ಬಾಂಬ್ ಕರೆ ಬಂದಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಅದು ಹುಸಿ ಕರೆ ಇರಬಹುದೆಂಬ ಶಂಕೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಕರೆ ಮಾಡಿದಾತ ಹಿಂದಿಯಲ್ಲಿ ಮಾತನಾಡಿದ್ದು, ಟೆಕ್ ಪಾರ್ಕ್‌ನಲ್ಲಿ ಬಾಂಬ್ ಇದ್ದು, ಇನ್ನು 10 ನಿಮಿಷದಲ್ಲಿ ಸ್ಪೋಟವಾಗಲಿದೆ ಎಂದು ಬೆದರಿಸಿದ್ದಾರೆ. ಸೈಬರ್‌ ಕ್ರೈಮ್ ವಿಭಾಗವನ್ನು ಸಂಪರ್ಕಿಸಲಾಗಿದ್ದು, ಕರೆ ಮಾಡಿದಾತನ ಸುಳಿವು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಡಿಸಿಪಿ ಹೇಳಿದ್ದಾರೆ.

ಓಟರ್‌ ರಿಂಗ್ ರೋಡ್ ಬಳಿಯ ಎಂಬೆಸಿ ಟೆಕ್‌ ವಿಲೇಜ್‌ನಲ್ಲಿ ಸಿಸ್ಕೋ, ಆಲ್ಟಿಮೆರ್ಕ್, ಮೂಡಿ ಅನಾಲೆಕಿಟ್ಸ್‌, ಸೋನಿ, ವೆಲ್ಸ್ ಫರ್ಗೋ ರೀತಿಯ ಅಂತರರಾಷ್ಟ್ರೀಯ ಸಂಸ್ಥೆಗಳ ಮಳಿಗೆ ಮತ್ತು ಕಚೇರಿಗಳಿವೆ.

ಪುಣ್ಯ ಕ್ಷೇತ್ರ ಕಾಶಿಗೂ ಇದೇ ರೀತಿಯ ಬಾಂಬ್ ಬೆದರಿಕೆ ಕರೆ ಇತ್ತೀಚೆಗೆ ಬಂದಿತ್ತು.

English summary
Bengaluru’s Embassy Tech Village, situated on Outer Ring Road received a bomb threat call on Friday. Bomb squads and sniffer dogs are at the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X