Bengaluru Elevated Corridors: ಬೆಂಗಳೂರಿಗೆ ಭರ್ಜರಿ ಗುಡ್‌ನ್ಯೂಸ್: 11ಎಲಿವೇಟೆಡ್ ಕಾರಿಡಾರ್ ಅಭಿವೃದ್ಧಿಗೆ 13,262 ಕೋಟಿ ರೂ.
Bengaluru Elevated Corridors: ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳ ಅಭಿವೃದ್ಧಿ ಹಾಗೂ 11 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮುಂದಾಗಿದೆ. ಅಲ್ಲದೆ ಈ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಬರೋಬ್ಬರಿ 13,262 ಕೋಟಿ ರೂ. ಅನುದಾನವನ್ನು ಮೀಸಲಿರಿಸಿದೆ.
ಬೆಂಗಳೂರಿನ ಪ್ರಮುಖ 11 ಎಲಿವೇಟೆಡ್ ಕಾರಿಡಾರ್‌ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಳೆದ ಆರು ತಿಂಗಳಿನಿಂದಲೂ ಹೆಚ್ಚು ಚರ್ಚೆ ಆಗುತ್ತಿತ್ತು. ಇದೀಗ ಈ 11 ಕಾರಿಡಾರ್‌ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕ ಸಚಿವ ಸಂಪುಟವು ಅನುಮೋದನೆ ನೀಡಿದೆ. ಬೆಂಗಳೂರಿನಾದ್ಯಂತ 11 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಇದಕ್ಕಾಗಿ ಅಂದಾಜು 13,262 ಕೋಟಿ ರೂ. ಮೊತ್ತದ್ದಾಗಿದೆ. ಬೆಂಗಳೂರಿನಲ್ಲಿ ಮೆಗಾ ಮೊಬಿಲಿಟಿಯ ಭಾಗವಾಗಿದೆ. ಈ ಯೋಜನೆಯು ನಗರದ ದೀರ್ಘಕಾಲದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂದು ಹೇಳಲಾಗಿದೆ.

ಈ ವಿಚಾರವಾಗಿ ಮಾತನಾಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು, ಬೆಂಗಳೂರಿನಲ್ಲಿ 75.6 ಕಿ.ಮೀ. ವ್ಯಾಪ್ತಿಯ ಈ ಕಾರಿಡಾರ್‌ಗಳು ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಿವೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೊದಲು 2024 ರಲ್ಲಿ ನಗರದಾದ್ಯಂತ 110 ಕಿ.ಮೀ. ಎತ್ತರದ ರಸ್ತೆಗಳನ್ನು ಪ್ರಸ್ತಾಪಿಸಿ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಘೋಷಿಸಿದ್ದರು. ಬೆಂಗಳೂರು ಸಬರ್ಬನ್ ಮೊಬಿಲಿಟಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (BSMILE) ರಚನೆಯಾದ ನಂತರ 126 ಕಿ.ಮೀ. ವ್ಯಾಪ್ತಿಯ 13 ಕಾರಿಡಾರ್‌ಗಳಿಗೆ ವಿವರವಾದ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದೆ. ಇದು ಅಂದಾಜು 18,000 ಕೋಟಿ ರೂ., ಅಂದರೆ ಪ್ರತಿ ಕಿ.ಮೀ.ಗೆ ಸರಿಸುಮಾರು 142 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಆದಾಗ್ಯೂ, ಕರ್ನಾಟಕದ ಕ್ಯಾಬಿನೆಟ್ ಈಗ ಕೇವಲ 75 ಕಿ.ಮೀ.ಗಳ ಅಭಿವೃದ್ಧಿ ಕಾಮಗಾರಿ ಕೆಲಸಗಳಿಗೆ ಮಾತ್ರ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಮೂರು ಪ್ರತ್ಯೇಕ ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆಯುವುದಕ್ಕೆ ಉದ್ದೇಶಿಸಲಾಗಿದೆ. ಅನುಮೋದಿತ 11 ಕಾರಿಡಾರ್‌ಗಳಲ್ಲಿ ಒಂಬತ್ತು ಕಾರಿಡಾರ್‌ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
ಬೆಂಗಳೂರು - ಪ್ರಮುಖ ಮಾರ್ಗಗಳ ವಿವರ
ತುಮಕೂರು ರಸ್ತೆಯಲ್ಲಿರುವ RNS ಶಾಂತಿನಿಕೇತನದ ಹತ್ತಿರದ MEI ಜಂಕ್ಷನ್
ಮಹಾಲಕ್ಷ್ಮಿ ಲೇಔಟ್‌ನಲ್ಲಿ ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ಹೊರ ವರ್ತುಲ ರಸ್ತೆಯವರೆಗೆ ಪೈಪ್‌ಲೈನ್ ರಸ್ತೆಯಲ್ಲಿ ಗ್ರೇಡ್ ಸೆಪರೇಟರ್‌ಗಳು
ದೊಡ್ಡಬಳ್ಳಾಪುರ ರಸ್ತೆ (ಪೊಲೀಸ್ ಸ್ಟೇಷನ್ ಜಂಕ್ಷನ್) ನಿಂದ ಹಳೆಯ ಯಲಹಂಕ ಮೂಲಕ ಕೋಗಿಲು ವೃತ್ತದಲ್ಲಿ ಎನ್‌ಎಚ್ -7 (ನವಯುಗ ಫ್ಲೈಓವರ್) ವರೆಗೆ ಎಲಿವೇಟೆಡ್ ಕಾರಿಡಾರ್
ಕನಕಪುರ ರಸ್ತೆಯ ಉದ್ದಕ್ಕೂ ಕೋಣನಕುಂಟೆ ವೃತ್ತ ಮತ್ತು ರಘುವನಹಳ್ಳಿ ಕ್ರಾಸ್‌ನಲ್ಲಿ ಎಲಿವೇಟೆಡ್ ಕಾರಿಡಾರ್‌ಗಳು
ಅಸ್ತಿತ್ವದಲ್ಲಿರುವ ಬಿಜಿಎಸ್ ಫ್ಲೈಓವರ್‌ನಿಂದ ಟೌನ್ ಹಾಲ್‌ವರೆಗಿನ ಲೂಪ್ ಫ್ಲೈಓವರ್ ಸೇರಿದಂತೆ ಮಿನರ್ವಾ ಸರ್ಕಲ್-ಹಡ್ಸನ್ ಸರ್ಕಲ್ ಎಲಿವೇಟೆಡ್ ಕಾರಿಡಾರ್
ಸಂಗೊಳ್ಳಿ ರಾಯಣ್ಣ ವೃತ್ತ (ಆನಂದರಾವ್ ಫ್ಲೈಓವರ್) ನಿಂದ ನೃಪತುಂಗ ರಸ್ತೆ (ಕೆಆರ್ ಸರ್ಕಲ್) ವರೆಗಿನ ಕಾರಿಡಾರ್‌ಗಳು
ಮೈಸೂರು ರಸ್ತೆಯ ಸಿರ್ಸಿ ವೃತ್ತದಿಂದ ನಾಯಂಡಹಳ್ಳಿಯವರೆಗೆ
ಶೂಲೆ ಸರ್ಕಲ್ - ಹೊಸೂರು ರಸ್ತೆಯ - ಸೇಂಟ್ ಜಾನ್ಸ್ ಆಸ್ಪತ್ರೆ ಮಾರ್ಗ
ಇನ್ನು ಕರ್ನಾಟಕ ಸರ್ಕಾರವು ಇದೀಗ 2023ಕ್ಕಿಂತಲೂ ಮೊದಲು ಘೋಷಿಸಲಾದ ಹಾಗೂ ದೀರ್ಘಾವಧಿಯಿಂದ ಬಾಕಿ ಉಳಿದಿರುವ ಮಧ್ಯಂತರ ರಿಂಗ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. IOC ಜಂಕ್ಷನ್‌ನಲ್ಲಿ ಎತ್ತರದ ರೋಟರಿ ಫ್ಲೈಓವರ್ ಮತ್ತು ಬೈಯಪ್ಪನಹಳ್ಳಿ ಲೆವೆಲ್ ಕ್ರಾಸಿಂಗ್‌ನಲ್ಲಿ ಹೆಚ್ಚುವರಿ ಎರಡು ಪಥದ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಸಂಬಂಧಿಸಿದಂತೆ 436.44 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.












Click it and Unblock the Notifications