Bengaluru Traffic: ಈದ್ ಮಿಲಾದ್ ದಿನ ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ, ನಿಲುಗಡೆಗೆ ನಿರ್ಬಂಧ
ಸೆಪ್ಟೆಂಬರ್ 16, ಸೋಮವಾರ ಈದ್ ಮಿಲಾದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ವೈಎಂಸಿಎ ಮೈದಾನಕ್ಕೆ ಸಾವಿರಾರು ಮುಸ್ಲಿಮರು ನಗರದ ವಿವಿಧ ಸ್ಥಳಗಳಿಂದ ವಾಹನ ಹಾಗೂ ಮೆರವಣಿಗೆ ಮೂಲಕ ಆಗಮಿಸಲಿದ್ದು, ಸಂಚಾರ ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಅಂದು ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಬಳಸಲು ಕೋರಿದ್ದಾರೆ.
ಈದ್ ಮಿಲಾದ್ ಸಂದರ್ಭದಲ್ಲಿ ಮೆರವಣಿಗೆ ಮಾರ್ಗಗಳನ್ನು ಪೊಲೀಸರು ಸೂಚಿಸಿದ್ದು, ಅದೇ ಮಾರ್ಗಗಳಲ್ಲಿ ಮೆರವಣಿಗೆ ಮಾಡಲು ಸೂಚನೆ ಕೊಡಲಾಗಿದೆ. ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಮೆರವಣಿಗೆ ಹೋಗುವ ರಸ್ತೆಗಳು
ಜೆ.ಸಿ. ನಗರ ದರ್ಗಾದಿಂದ ಶಿವಾಜಿನಗರ ಕಂಟೋನ್‌ಮೆಂಟ್ ಕಡೆಗೆ.
ಹಳೇ ಬಸ್ ನಿಲ್ದಾಣದಿಂದ ಸಣ್ಣ ಅಮಾನಿಕೆರೆಯವರೆಗೆ
ಬೆಳ್ಳಳ್ಳಿ ಕ್ರಾಸ್‌ನಿಂದ ನಾಗವಾರ ಸಿಗ್ನಲ್‌ವರೆಗೆ
ರಾಜಗೋಪಾಲನಗರ ಮುಖ್ಯರಸ್ತೆಯಿಂದ ಪೀಣ್ಯ 2ನೇ ಹಂತದವರೆಗೆ
ಸೌತ್ ಎಂಡ್ ಸರ್ಕಲ್‌ನಿಂದ ಆರ್ ವಿ ರಸ್ತೆಯಲ್ಲಿರುವ ಲಾಲ್‌ಬಾಗ್ ವೆಸ್ಟ್ ಗೇಟ್ ಸರ್ಕಲ್‌ವರೆಗೆ
ಗೀತಾ ಜಂಕ್ಷನ್‌ನಿಂದ ಸೌತ್ ಎಂಡ್ ಸರ್ಕಲ್‌ವರೆಗೆ
ಬೇಂದ್ರೆ ಜಂಕ್ಷನ್‌ನಿಂದ ಓಬಳಪ್ಪ ಗಾರ್ಡನ್‌ವರೆಗೆ
ಮಹಾಲಿಂಗೇಶ್ವರ ಬಡಾವಣೆಯಿಂದ ಆಡುಗೋಡಿವರೆಗಿನ ಎಲ್ಲಾ ಮಾರ್ಗಗಳ ಮೂಲಕ ವೈಎಂಸಿಎ ಮೈದಾನಕ್ಕೆ ಬಂದು ಸೇರಲಿದ್ದಾರೆ.
#ಸಂಚಾರಸಲಹೆ#TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpeasttraffic @acpwfieldtrf @kghallitrfps @ftowntrfps @bwaditrafficps @snagartrps @acpcentraltrf @cparktrafficps @highgroundtrfps @DCPTrWestBCP pic.twitter.com/3j9iKmZcfV
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) September 13, 2024
ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ ಸಂಚಾರ ಇರುವುದಿಲ್ಲ.
ಮಾಸ್ಕ್ ಜಂಕ್ಷನ್‌ನಿಂದ ಎಂಎಂ ರಸ್ತೆ ಮೂಲಕ ನೇತಾಜಿ ಜಂಕ್ಷನ್‌ವರೆಗೆ ಎಂಎಂ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಬದಲಾಗಿ ತಾತ್ಕಾಲಿಕವಾಗಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು ನೇತಾಜಿ ಜಂಕ್ಷನ್‌ನಿಂದ ಮಾಸ್ಕ್ ಜಂಕ್ಷನ್‌ವರೆಗೆ ವಾಹನ ಸಂಚಾರಕ್ಕೆ ಅವಕಾಶ ಇರುತ್ತದೆ.
ನೇತಾಜಿ ಜಂಕ್ಷನ್‌ನಿಂದ ಹೇನ್ಸ್ ಜಂಕ್ಷನ್‌ವರೆಗೆ ಹೇನ್ಸ್ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.
ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಭಾಗಶಃ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪರ್ಯಾಯ ಮಾರ್ಗಗಳು
ಕೆ.ಆರ್. ಸರ್ಕಲ್‌ನಿಂದ ನೃಪತುಂಗ ರಸ್ತೆಯನ್ನು ಬಳಸುವ ವಾಹನ ಸವಾರರು/ಚಾಲಕರು ಕೆಆರ್ ಸರ್ಕಲ್‌ನಲ್ಲಿ ಕಬ್ಬನ್ ಉದ್ಯಾನವನ್ನು ಪ್ರವೇಶಿಸಿ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಅಥವಾ ಸೆಂಟ್ರಲ್ ಲೈಬ್ರರಿ ವೃತ್ತದ ಬಳಿ ಬಲ ತಿರುವು ಪಡೆದು, ಹಡ್ಸನ್ ವೃತ್ತಕ್ಕೆ ಬಂದು ಮುಂದೆ ಸಾಗಬಹುದು.
ಸಿಟಿ ಮಾರ್ಕೆಟ್ ನಿಂದ ಕೆಂಪೇಗೌಡ ನಿಲ್ದಾಣಕ್ಕೆ ತೆರಳುವ ವಾಹನಗಳು ಜೆಸಿ ರಸ್ತೆ, ಟೌನ್ ಹಾಲ್ ಸರ್ಕಲ್ - ಎನ್‌ಆರ್ ಸರ್ಕಲ್ ಮೂಲಕ ಕೆಜಿ ರಸ್ತೆಯಲ್ಲಿ ಚಲಿಸಲು ಕೇಳಲಾಗಿದೆ. ರಿಚ್ಮಂಡ್ ರಸ್ತೆ ರೆಸಿಡೆನ್ಸಿ ರಸ್ತೆ ಕಡೆಗೆ ಹೋಗುವವರು ಪಿ.ಕೆ.ಲೇನ್ ಮತ್ತು ಓ.ಟಿ.ಸಿ. ರಸ್ತೆಯಲ್ಲಿ ಚಲಿಸಿ ಎನ್.ಆರ್.ವೃತ್ತದ ಮೂಲಕ ದೇವಾಂಗ ವೃತ್ತ, ಮಿಷನ್ ರಸ್ತೆ ಮಾರ್ಗವಾಗಿ ಹೋಗಬಹುದಾಗಿದೆ.
ರಿಚ್‌ಮಂಡ್ ರಸ್ತೆ ಕಡೆಯಿಂದ ಬರುವ ವಾಹನಗಳು ಆರ್.ಆರ್.ಎಂ.ಆರ್. ರಸ್ತೆ ಹಡ್ಸನ್ ವೃತ್ತ ಮೂಲಕ ಕೆ.ಜಿ.ರಸ್ತೆ ಕಡೆಗೆ ಹಾಗೂ ಎನ್.ಆರ್.ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ಸಂಚರಿಸಬಹುದು.
ಪೊಲೀಸ್ ಕಾರ್ನರ್ ಕಡೆಯಿಂದ ಬರುವ ವಾಹನಗಳು ಹಡ್ಸನ್ ವೃತ್ತದ ಮೂಲಕ ಕಬ್ಬನ್ ಪಾರ್ಕ್ ಒಳಭಾಗ ಸಂಚರಿಸುವುದನ್ನು ನಿಷೇಧಿಸಿದ್ದು, ಕಸ್ತೂರಿಬಾ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಚಲಿಸಬಹುದು.
ಮೈಸೂರು ರಸ್ತೆ ಸಿರ್ಸಿ ವೃತ್ತ - ಸಿರ್ಸಿ ರಸ್ತೆ - ಚಾಮರಾಜಪೇಟೆ 7ನೇ ಅಡ್ಡರಸ್ತೆ ಬಲ ತಿರುವು ಚಾಮರಾಜಪೇಟೆ 2, 3, 4 & 5ನೇ ಮುಖ್ಯರಸ್ತೆಯಲ್ಲಿ ಎಡತಿರುವು ಪಡೆದು ಸಿಟಿ ಮಾರ್ಕೆಟ್ ಹಾಗು ಇತರೆ ಕಡೆಗೆ ಹೋಗಬಹುದು.
ನೇತಾಜಿ ರಸ್ತೆ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ ಹೋಗುವ ವಾಹನಗಳು ನೇತಾಜಿ ಜಂಕ್ಷನ್ ಇಂದ ಬಲತಿರುವು ಪಡೆದು ಮಾಸ್ಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕ್ಲಾರೆನ್ಸ್ ರೈಲ್ವೆ ಮೇಲ್ವೇತುವೆಯಲ್ಲಿ ಪಾಟರಿ ರಸ್ತೆಗೆ ಬಲ ತಿರುವು ಪಡೆದು ಪಾಟರಿ ರಸ್ತೆ ಮತ್ತು ಹೆಣ್ಣೂರು ರಸ್ತೆ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ಹೆಣ್ಣೂರು ಮುಖ್ಯರಸ್ತೆ ಲಿಂಗರಾಜಪುರಂ ಪ್ರೈಓವರ್ ಮುಖೇನ ಹೆಣ್ಣೂರು, ಬಾಣಸವಾಡಿ ಹಾಗೂ ಹೊರ ವರ್ತುಲ ರಸ್ತೆ ಕಡೆಗೆ ಸಂಚರಿಸಬಹುದು.
ಮಾಸ್ಕ್ ಜಂಕ್ಷನ್‌ನಿಂದ ಎಂ.ಎಂ ರಸ್ತೆಯಲ್ಲಿ ನೇತಾಜಿ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಮಾಸ್ಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕೋಲ್ಸ್ ರಸ್ತೆ ತಲುಪಿ ಹೆಚ್.ಪಿ ಪೆಟ್ರೋಲ್ ಬಂಕ್ ಹತ್ತಿರ ಎಡ ತಿರುವು ಪಡೆದು ನೇರವಾಗಿ ಸೆಂಟ್ ಜಾನ್ಸ್ ಚರ್ಚ್ ರಸ್ತೆ ತಲುಪಿ ಕೋಲ್ಸ್ ಪಾರ್ಕ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹೇನ್ಸ್ ಜಂಕ್ಷನ್ ತಲುಪಬಹುದು.
ಥಣಿಸಂದ್ರ ಕಡೆಯಿಂದ ಶಿವಾಜಿನಗರ ಕಡೆಗೆ ಬರುವ ವಾಹನಗಳು ನಾಗವಾರ ಜಂಕ್ಷನ್‌ನಿಂದ - ಹೆಣ್ಣೂರು ಜಂಕ್ಷನ್ - ಸಿದ್ದಪ್ಪ ರೆಡ್ಡಿ ಜಂಕ್ಷನ್ - ಅಯೋಧ್ಯ ಜಂಕ್ಷನ್ - ಲಿಂಗರಾಜಪುರಂ ಫ್ಲೈ ಓವರ್‌ನಿಂದ - ಪುಲಕೇಶಿನಗರ ಸಂಚಾರ ಠಾಣೆ ಕಡೆಯಿಂದ ರಾಬರ್ಟ್‌ನ್ ರಸ್ತೆ ಜಂಕ್ಷನ್ ನಲ್ಲಿ ಬಲತಿರುವು ಪಡೆದುಕೊಂಡು ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪುವುದು. ಹಾಗೂ ನಾಗವಾರ ಜಂಕ್ಷನ್ ನಿಂದ ಬಲತಿರುವು ಪಡೆದು ಹೆಬ್ಬಾಳ ಮುಖೇನ ನಗರಕ್ಕೆ ಸಂಚರಿಸಬಹುದು.
ಆರ್.ಟಿ.ನಗರ ದಿಂದ ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳನ್ನು ಪುಷ್ಪಾಂಜಲಿ ಟಾಕೀಸ್ ಎಡ ತಿರುವು ಪಡೆದು ವೀರಣ್ಣ ಪಾಳ್ಯ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ರಸ್ತೆಗೆ ಚಲಿಸಬಹುದು.
ಈ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ
ನೃಪತುಂಗ ರಸ್ತೆ, ಕೆ.ಆರ್. ವೃತ್ತದಿಂದ ಪೊಲೀಸ್ ಕಾರ್ನರ್ ವರೆಗೆ, ಕೆ.ಜಿ.ರಸ್ತೆ, ಪೊಲೀಸ್ ಕಾರ್ನರ್ ನಿಂದ ಮೈಸೂರು ಬ್ಯಾಂಕ್ ವೃತ್ತದ ವರೆಗೆ, ಎನ್.ಆರ್.ರಸ್ತೆ, ಟೌನ್‌ಹಾಲ್ ಜಂಕ್ಷನ್ ನಿಂದ ಪೊಲೀಸ್ ಕಾರ್ನರ್ ವರೆಗೆ, ಪಿ.ಕಾಳಿಂಗರಾವ್ ರಸ್ತೆ, ಎನ್.ಆರ್ ಜಂಕ್ಷನ್ ನಿಂದ ಸುಬ್ಬಯ್ಯ ವೃತ್ತದವರೆಗೆ, ಕಸ್ತೂರಿಬಾ ರಸ್ತೆ, ಹಡ್ಗನ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದ ವರೆಗೆ ಹಾಗೂ ಸಿದ್ದಲಿಂಗಯ್ಯ ವೃತ್ತದಿಂದ ಕ್ಲೀನ್ಸ್ ವೃತ್ತದವರೆಗೆ, ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ಜಂಕ್ಷನ್ ವರೆಗೆ, ಆರ್.ಆರ್.ಎಂ.ಆರ್ ರಸ್ತೆ, ರಿಚ್ಮಂಡ್ ವೃತ್ತದಿಂದ ಹಡ್ಗನ್ ವೃತ್ತದವರೆಗೆ, ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ಲೀನ್ಸ್ ವೃತ್ತದವರೆಗೆ, ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಬಿ.ಆರ್.ವಿ ಜಂಕ್ಷನ್‌ವರೆಗೆ ವಾಹನ ನಿಲ್ಲಿಸಲು ಅವಕಾಶ ಇರುವುದಿಲ್ಲ.
ಕ್ವೀನ್ಸ್ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕ್ಲೀನ್ಸ್ ವೃತ್ತದವರೆಗೆ, ಡಾ: ಬಿ.ಆರ್.ಅಂಬೇಡ್ಕರ್ ರಸ್ತೆ ಕೆ.ಆರ್.ವೃತ್ತದಿಂದ ಬಾಳೇಕುಂದ್ರಿ ವೃತ್ತದವರೆಗೆ, ಶೇಷಾದ್ರಿ ರಸ್ತೆ, ಮಹಾರಾಣಿ ವೃತ್ತದಿಂದ ಕೆ.ಆರ್.ವೃತ್ತದವರೆಗೆ, ಹಳೇ ಅಂಚೆ ಕಛೇರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆರ್.ವೃತ್ತದವರೆಗೆ, ಕಬ್ಬನ್ ಉದ್ಯಾನವನದ ಒಳ ಆವರಣದವರೆಗೆ, ನೇತಾಜಿ ರಸ್ತೆ, ಹೇನ್ಸ್ ರಸ್ತೆ, ಎಂ.ಎಂ ರಸ್ತೆ, ಮಾಸ್ಕ್ ರಸ್ತೆ, ಕೋಲ್ಸ್ ರಸ್ತೆ, ಸೌಂಡರ್ಸ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ ಹಾಗೂ ಮಿಲ್ಲರ್ಸ್ ರಸ್ತೆ ಎಕ್ಸ್‌ಟೆಂಕ್ಷನ್‌ನ ಎರಡೂ ಬದಿಯಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್‌ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿರುತ್ತದೆ. ಗೋವಿಂದಪುರ ಪೊಲೀಸ್ ಠಾಣೆಯವರೆಗೆ ಎರಡು ಬದಿಯಲ್ಲಿ ಪಾರ್ಕಿಂಗ್ ನಿಷೇದ ಮಾಡಲಾಗಿರುತ್ತದೆ. ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್ ನಿಂದ ನರೇಂದ್ರ ಟೆಂಟ್ ಜಂಕ್ಷನ್ ವರೆಗೆ ಎರಡು ಬದಿಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.












Click it and Unblock the Notifications