ಬೆಂಗಳೂರು: ಶಾಲೆಗಳಲ್ಲಿ ನಕಲಿ ಪಠ್ಯಕ್ರಮ ಬೋಧನೆ, ಇಲಾಖೆ ಕ್ರಮ
ಬೆಂಗಳೂರಿನ ಹಲವು ಶಾಲೆಗಳಲ್ಲಿ ನಕಲಿ ಪಠ್ಯಕ್ರಮವನ್ನು ಮಕ್ಕಳಿಗೆ ಬೋಧಿಸುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ರಾಜ್ಯ ಶಿಕ್ಷಣ ಇಲಾಖೆ ಅದರ ಕಡಿವಾಣಕ್ಕೆ ಮುಂದಾಗಿದೆ.
ಬೆಂಗಳೂರು, ಫೆಬ್ರವರಿ 12: ಬೆಂಗಳೂರಿನ ಹಲವು ಶಾಲೆಗಳಲ್ಲಿ ನಕಲಿ ಪಠ್ಯಕ್ರಮವನ್ನು ಮಕ್ಕಳಿಗೆ ಬೋಧಿಸುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ರಾಜ್ಯ ಶಿಕ್ಷಣ ಇಲಾಖೆ ಅದರ ಕಡಿವಾಣಕ್ಕೆ ಮುಂದಾಗಿದೆ.
ಕರ್ನಾಟಕ ರಾಜ್ಯದಲ್ಲಿ ನೋಂದಾಯಿಸದ ಹಾಗೂ ನೋಂದಾಯಿತ ಎಂಬ ಎರಡು ವಿಧದ ಶಾಲೆಗಳಿವೆ. ನೋಂದಣಿ ಆಗದ ಶಾಲೆಗಳಲ್ಲಿ ಅನುಮೋದನೇ ಆಗದ ಪಠ್ಯಕ್ರಮವನ್ನು ಮಕ್ಕಳಿಗೆ ಬೋಧಿಸಲಾಗುತ್ತಿದೆ. ಹೀಗಾಗಿ ಅಂತಹ ಶಾಲೆಗಳನ್ನು ಮುಚ್ಚಬೇಕು. ಜೊತೆಗೆ ಇಲಾಖೆಯಡಿ ನೋಂದಾಯಿತ ಶಾಲೆಗಳಲ್ಲಿ ಅನುಮೋದನೆ ಆಗದ ಪಠ್ಯಕ್ರಮ ಬೋಧನೆ ಸಮಸ್ಯೆ ಪರಿಹರಿಸಿ ಅನುಮೋದಿತ ಸಿಲೆಬಸ್ ಪಾಠ ಮಾಡುವಂತೆ ಇಲಾಖೆ ಖಡಕ್ ಸೂಚನೆ ನೀಡಿದೆ.
ಈ ಕುರಿತು ಸಾರ್ವಜನಿಕರಿಗೆ ಶಾಲೆ ಪಠ್ಯಕ್ರಮ ಯಾವುದಿದೆ. ಮಕ್ಕಳು ಏನು ಕಲಿಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಲು ಇಲಾಖೆ ವೆಬ್‌ಸೈಟ್‌ನಲ್ಲಿ ಶಾಲಾ ವಿವರ ಹಾಕಲು ಸರ್ಕಾರವನ್ನು ಅನುಮತಿ ಕೇಳಲಾಗುವುದು. ಈಗಾಗಲೇ 500 ಶಾಲೆಗಳಿಗೆ ಅನುಮೋದಿತವಲ್ಲದ ಪಠ್ಯಕ್ರಮ ಬೋಧನೆಗಾಗಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿತ್ತು.

ನೋಟಿಸ್ ಜಾರಿ ಮಾಡಿದ್ದ ಪ್ರಕರಣದ ಮುಂದುವರಿದು ಇಲಾಖೆ ಖಡ್ಕ ಸಂದೇಶ ನೀಡಿದೆ. ಸರ್ಕಾರದ ಜತೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು. ರಾಜ್ಯ ಮಂಡಳಿಯನ್ನು ಹೊರತುಪಡಿಸಿ ಇತರ ಮಂಡಳಿಗಳ ಜತೆ ಸಂಯೋಜಿತವಾಗಿರದ ಶಾಲೆಗಳನ್ನು ಗುರುತಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್. ವಿಶಾಲ್ ತಿಳಿಸಿದರು.
ಕೇವಲ ನೋಟಿಸ್ ಜಾರಿ ಮಾಡಿ ಪ್ರಯೋಜನ ಆಗಲ್ಲ. ಈ ಕಾರಣಕ್ಕೆ ಶಿಕ್ಷಣ ಇಲಾಖೆ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಪ್ರತಿ ತಿಂಗಳು ಶಾಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಲು ಅಥವಾ ಮುಚ್ಚಲು ಇಲಾಖೆಯು ನೋಟಿಸ್ ಕಳುಹಿಸುತ್ತಿದ್ದೆವೆ ಎಂದರು.

ಎಸ್ಎಸ್ಎಲ್‌ಸಿ ಮಂಡಳಿಯಡಿಯಲ್ಲಿ ಬರುವ ಶಾಲೆಗಳ ವಿವರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅದೇ ರೀತಿ ಪೋಷಕರಿಗೆ ಮಕ್ಕಳು ಕಲಿಯುವ ಪಾಠದ ಮಾಹಿತಿ, ಪಾರದರ್ಶಕತೆ ಸಲುವಾಗಿ ಶಾಲೆಗಳ ವೆಬ್‌ಸೈಟ್‌ನಲ್ಲಿ ಪಠ್ಯಕ್ರಮದ ಮಾಹಿತಿ ಅಳವಡಿಕೆ ಮಾಡಲು ಸೂಚಿಸಲಾಗಿದೆ. ಪಠ್ಯಕ್ರಮಕ್ಕೆ ಅನುಮತಿ ಪಡೆದು ಸಿಬಿಎಸ್ಇ/ಐಪಿಎಸ್ಇ ಪಠ್ಯಕ್ರಮ ಬೋಧನೆ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿರುವ ಧೋನಿ ಗ್ಲೋಬರ್ ಶಾಲೆ ಸೇರಿದಂತೆ ನಗರದ ನೂರಾರು ಶಾಲೆಗಳಿಗೆ ನೋಟಿಸ್ ನೀಡಿದ್ದೇವೆ. ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.












Click it and Unblock the Notifications