ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಕ್ರೈಂ ರೌಂಡಪ್: ಐವತ್ತು ಸಾವಿರ ಕೊಟ್ಟರೆ ಯಾವುದೇ ಡಿಗ್ರಿ ಸರ್ಟಿಫಿಕೇಟ್ ಕೈಗೆ ಕೊಡ್ತಾರೆ!

|
Google Oneindia Kannada News

ಬೆಂಗಳೂರು, ನ. 29: ಐಟಿ ಬಿಟಿ ಉದ್ಯೋಗಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ, ಐದು ಸಾವಿರ ರೂ.ಗೆ ಪದವಿ ಸರ್ಟಿಫಿಕೇಟ್ ನೀಡುತ್ತಿದ್ದ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ, ಹಾಡ ಹಗಲೇ ಅಂಗಡಿ ಮಾಲೀಕನಿಗೆ ಲಾಂಗ್ ತೋರಿಸಿ ಸುಲಿಗೆ ಮಾಡಿದ ಪುಂಡರ ಕೃತ್ಯ ಸಿಸಿಟಿವಿಯಲ್ಲಿ ಸೆರೆ. ಟ್ರಾವೆಲ್ಸ್ ಹೆಸರಿನಲ್ಲಿ ಕಾರುಗಳನ್ನು ಪಡೆದು ಸಾರ್ವಜನಿಕರಿಗೆ ವಂಚನೆ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.

ಐವತ್ತು ಸಾವಿರಕ್ಕೆ ಪದವಿ ಸರ್ಟಿಫಿಕೇಟ್ ಲಭ್ಯ:

ಐವತ್ತು ಸಾವಿರ ಕೊಟ್ಟರೆ ಸಾಕು ಯಾವುದೇ ಪದವಿಯ ಅಂಕಪಟ್ಟಿ ಕೈಗೆ ಕೊಡುತ್ತಾರೆ. ಖಾಸಗಿ ಕಂಪನಿಗಳಿಗೆ ಈ ಅಂಕಪಟ್ಟಿ ಕೊಟ್ಟರೆ ಸಾಕು ಕೆಲಸ ಸಿಗುತ್ತದೆ. ಹೀಗೆ ಸಾವಿರ ರೂ. ಪಡೆದು ವಿವಿಧ ಪದವಿಗಳ ಅಂಕಪಟ್ಟಿಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಅಮೃತಹಳ್ಳಿ ಪೊಲೀಸರು ಪತ್ತೆ ಮಾಡಿದ್ದಾರೆ.

Bengaluru Crime News Roundup (29 Nov 2021): Fake Degree Marks Card Racket busted

ಡ್ರೀಮ್ ಎಜುಕೇಷನ್ ಸರ್ವೀಸ್ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಕೇಶ್, ಕೃಷ್ಣ ಮತ್ತು ತನ್ಮಯ್ ಬಂಧಿತ ಆರೋಪಿಗಳು. ಡ್ರೀಮ್ ಎಜುಕೇಷನ್ ಸರ್ವೀಸ್ ಹೆಸರಿನಲ್ಲಿ ಹೆಬ್ಬಾಳ- ಕೆಂಪಾಪುರದಲ್ಲಿ ಕಚೇರಿ ತೆರೆದಿದ್ದ ಅರೋಪಿಗಳು ಸಾರ್ವಜನಿಕರಿಗೆ ವಿವಿಧ ವಿಶ್ವ ವಿದ್ಯಾಲಯ ಹೆಸರಿನಲ್ಲಿ ನಕಲಿ ಅಂಕಪಟ್ಟಿ ನೀಡಿ ವಂಚನೆ ಮಾಡುತ್ತಿದ್ದರು. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಡ್ರೀಮ್ ಎಜುಕೇಷನ್ ಸರ್ವೀಸ್ ಮೇಲೆ ದಾಳಿ ಮಾಡಿ ವಿವಿಧ ವಿಶ್ವ ವಿದ್ಯಾನಿಲಯಲಗಳಿಗೆ ಸೇರಿದ ಅಂಕಪಟ್ಟಿಗಳನ್ನು ಜಪ್ತಿ ಮಾಡಿದ್ದಾರೆ.

Bengaluru Crime News Roundup (29 Nov 2021): Fake Degree Marks Card Racket busted

ವಿವಿಧ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಅಂಕಪಟ್ಟಿಗಳನ್ನು ತಯಾರಿಸಿ ಕೊಡುತ್ತಿದ್ದರು. ಬಿಎ, ಬಿಕಾಂ, ಬಿಎಸ್‌ಸಿ ಸೇರಿದಂತೆ ವಿವಿಧ ಪದವಿಗಳ ಅಂಕಪಟ್ಟಿಗಳನ್ನು ಹಣ ಪಡೆದ ಒಂದು ವಾರಕ್ಕೆ ನೀಡುತ್ತಿದ್ದರು. ನೂರಾರು ವಿದ್ಯಾರ್ಥಿಗಳಿಂದ ಹಣ ಪಡೆದು ಅಂಕಪಟ್ಟಿಗಳನ್ನು ಮಾರಾಟ ಮಾಡಿರುವುದು ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೇಸು ದಾಖಲಿಸಿಕೊಂಡು ಅಮೃತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಡ್ರಗ್ ಪೆಡ್ಲರ್ ಸೆರೆ: ಐಟಿ ಬಿಟಿ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಟ ಮಾಡುತ್ತಿದ್ದ ಇಬ್ಬರು ಅರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್, ಚರಸ್ ಮತ್ತು ಗಾಂಜಾ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾ ಪ್ರಜೆಯಿಂದ ಕಡಿಮೆ ಬೆಲೆಗೆ ಡ್ರಗ್ ಖರೀದಿ ಮಾಡಿ ಐಟಿ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Bengaluru Crime News Roundup (29 Nov 2021): Fake Degree Marks Card Racket busted

ಹಾಡ ಹಗಲೇ ರೋಲ್ ಕಾಲ್: ಹಾಡ ಹಗಲೇ ಅಂಗಡಿಗೆ ನುಗ್ಗಿರುವ ಪುಂಡರ ಗುಂಪೊಂದು 25 ಸಾವಿರ ರೂ. ಸುಲಿಗೆ ಮಾಡಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ವಸಂತನಗರದಲ್ಲಿ ನಡೆದಿದೆ.

ಬೈಕ್‌ನಲ್ಲಿ ಬಂದಿರುವ ಪುಂಡರ ಗ್ಯಾಂಗ್ ಲಾಂಗ್ ಹಿಡಿದು ಅಂಗಡಿಗೆ ಎಂಟ್ರಿ ಕೊಟ್ಟಿದೆ. ಹಣ ಕೊಡುವಂತೆ ಲಾಂಗ್ ತೋರಿಸಿ ಬೆದರಿಸಿದ್ದು, ಹೆದರಿದ ಅಂಗಡಿ ಮಾಲೀಕ ಹಣ ಕೊಟ್ಟಿದ್ದಾನೆ. ಆ ಬಳಿಕ ಪುಂಡರ ಗುಂಪಿನ ಸದಸ್ಯ ಲಾಂಗು ಹಿಡಿದು ಸಾರ್ವಜನಿಕವಾಗಿ ರಾಜಾರೋಷವಾಗಿ ತೆರಳಿದ್ದಾನೆ. ಈ ಘಟನೆ ವಸಂತನಗರದ ಎಂಟನೇ ಕ್ರಾಸ್‌ನಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತೀಚೆಗೆ ಪುಂಡರ ಸುಲಿಗೆ ಕೃತ್ಯಗಳು ಪದೇ ಪದೇ ಸಂಭವಿಸುತ್ತಿವೆ. ಕೆಲ ದಿನಗಳ ಹಿಂದೆ ನಂದಿನಿ ಪಾರ್ಲರ್ ಮಾಲೀಕನಿಗೆ ಹೆದರಿಸಿ ಸುಲಿಗೆ ಮಾಡಿದ್ದರು. ಕೆಲ ದಿನಗಳಿಂದ ಈಚೆಗೆ ನಾಲ್ಕು ಘಟನೆಗಳು ವರದಿಯಾಗಿವೆ. ಈ ಕುರಿತು ಹೈಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಟ್ರಾವೆಲ್ಸ್ ಹೆಸರಿನಲ್ಲಿ ಕಾರು ಪಡೆದು ವಂಚನೆ: ಟ್ರಾವೆಲ್ಸ್ ಹೆಸರಿನಲ್ಲಿ ಸಾರ್ವಜನಿಕರಿಂದ ಕಾರುಗಳನ್ನು ಬಾಡಿಗೆ ಪಡೆದು ವಂಚನೆ ಮಾಡುತ್ತಿದ್ದ ಜಾಲವನ್ನು ಬಾಗಲಗುಂಟೆ ಪೊಲೀಸರು ಪತ್ತೆ ಮಾಡಿದ್ದಾರೆ. ಸುಮಾರು ಹತ್ತು ಕೋಟಿ ಮೌಲ್ಯದ ಕಾರುಗಳ ಸಮೇತ ತಮಿಳುನಾಡು ಮೂಲದ ಶಿವಕುಮಾರ್ ಪರಾರಿಯಾಗಿದ್ದಾನೆ. ಬಾಡಿಗೆ ಆಸೆಗೆ ಬಿದ್ದು ಕಾರು ಕೊಟ್ಟವರು ಮೋಸ ಹೋಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬಾಗಲಗುಂಟೆಯ ನಾಗಸಂದ್ರದಲ್ಲಿ ಅರ್.ಎಸ್. ಟ್ರಾವೆಲ್ಸ್ ಕಚೇರಿ ತೆರೆದಿದ್ದ ಶಿವಕುಮಾರ್, ಇನ್ನೋವಾ, ಟೊಯೋಟಾ ಸೇರಿದಂತೆ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆಯುತ್ತಿದ್ದ. ಪ್ರತಿ ತಿಂಗಳು ತಪ್ಪದೇ ಬಾಡಿಗೆ ಹಣವನ್ನು ವಾಹನ ಮಾಲೀಕರಿಗೆ ಹಾಕುತ್ತಿದ್ದ. ಈತ ಪ್ರತಿ ತಿಂಗಳು ಬಾಡಿಗೆ ಹಣ ಪಾವತಿಸಿ ಜನರ ನಂಬಿಕೆ ಗಳಿಸಿದ್ದ. ಈತನನ್ನು ನಂಬಿ ಸುಮಾರು ನೂರಕ್ಕೂಹೆಚ್ಚು ಮಂದಿ ಶಿವಕುಮಾರ್‌ಗೆ ಕಾರುಗಳನ್ನು ಬಾಡಿಗೆಗೆ ಬಿಟ್ಟಿದ್ದರು. ಈ ತಿಂಗಳು ನ. 08 ರಂದು ಬಾಡಿಗೆ ಹಣ ಪಾವತಿ ಮಾಡಬೇಕಿತ್ತು. ಶಿವಕುಮಾರ್ ಯಾರಿಗೂ ಬಾಡಿಗೆ ಹಣ ಪಾವತಿ ಮಾಡಿರಲಿಲ್ಲ. ಸಾರ್ವಜನಿಕವಾಗಿ ಯಾರಿಗೂ ಕಾಣಿಸಿಕೊಂಡಿರಲಿಲ್ಲ. ಅನುಮಾನಗೊಂಡು ಸುಮಾರು ದಿನ ನೋಡಿದರೂ ಶಿವಕುಮಾರ್ ಪತ್ತೆಯಾಗಿರಲಿಲ್ಲ. ಬಾಡಿಗೆ ಪಡೆದ ಹೆಸರಿನಲ್ಲಿ ನೂರಾರು ಕಾರುಗಳನ್ನು ಪಡೆದು ಮಾರಾಟ ಮಾಡಿದ್ದಾನೆ. ಮೋಸಹೋದವರು ಇದೀಗ ಶಿವಕುಮಾರ್ ವಿರುದ್ಧ ದೂರು ನೀಡಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

English summary
Bengaluru Crime News Roundup (29 Nov 2021) : Bengaluru: Fake Degree Marks Card Racket busted, accused arrested. Robbery in shopkeeper in broad light. Man sold vehicles those who took for rent Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X