Bengaluru Accident: ಕಾರಲ್ಲಿ ಚೇಸ್ ಮಾಡಿ ಡೆಲಿವರಿ ಬಾಯ್‌ನ ಕೊಂದ ದಂಪತಿ, ಕಾರಣ ಶಾಕಿಂಗ್
ಉದ್ಯಾನನಗರಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಜನಸಂಖ್ಯೆ ಹೆಚ್ಚಾದಂತೆ ನಗರದ ಗಲ್ಲಿಗಲ್ಲಿಗಳಲ್ಲಿ ಕ್ರೈಂ ಮಿತಿಮೀರಿದೆ. ಇದೀಗ ದಂಪತಿ ಸೇರಿ ಡೆಲಿವರಿ ಬಾಯ್‌ವೊಬ್ಬರ ಜೀವ ತೆಗೆದಿದ್ದಾರೆ. ಈ ಘಟನೆಯಿಂದ ಬೆಂಗಳೂರು ಬೆಚ್ಚಿಬಿದ್ದಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿ ಕಾರಲ್ಲಿ ಚೇಸ್ ಮಾಡಿ ಯುವಕನಿಗೆ ಜೋರಾಗಿ ಗುದ್ದಿದ್ದಾರೆ. ಇದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದಕ್ಕೆ ಕಾರಣ ಏನು ಗೊತ್ತಾ?
ಬೆಂಗಳೂರಲ್ಲಿ ಗಾಡಿ ಓಡಿಸೋದು ಅಂದ್ರೆ ತಮಾಷೆಯ ಮಾತಲ್ಲ. ಟ್ರಾಫಿಕ್, ಸಿಗ್ನಲ್ ಜಂಜಾಟದಲ್ಲಿ ಅತಿವೇಗದ ಚಾಲನೆ, ಇಷ್ಟಬಂದಂತೆ ಗಾಡಿ ಓಡಿ ಉಳಿದವರಿಗೂ ತೊಂದರೆ ಕೊಡೋದು ಬೆಂಗಳೂರಲ್ಲಿ ಪ್ರತಿದಿನ ನಡೆಯುತ್ತೆ. ಗಾಡಿ ಟಚ್ ಆಯ್ತು ಅಂತ ರಸ್ತೆಗಳಲ್ಲೇ ಅಡ್ಡ ಹಾಕ್ಕೊಂಡು ಕಿರುಚಾಡಿ, ಶರ್ಟ್ ಹಿಡಿದು ಗಲಾಟೆ ಮಾಡೋದು, ಪೊಲೀಸರು ಬಂದ್ರೆ ಸಮಾಧಾನ ಮಾಡಿಸೋದು ನೋಡಿರುತ್ತೀರಿ. ಆದರೆ ಗಂಡ ಹೆಂಡತಿ ಈ ಚಿಕ್ಕ ವಿಚಾರಕ್ಕೆ ಒಬ್ಬನ ಪ್ರಾಣವನ್ನೇ ತೆಗೆದಿದ್ದಾರೆ. ಅಷ್ಟೇ ಅಲ್ಲದೆ ನಾಟಕ ಆಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಹೌದು, ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ. ಬೈಕ್‌ನಲ್ಲಿ ಇಬ್ಬರು ಹೋಗುತ್ತಿದ್ದಾಗ ದಂಪತಿ ಕಾರಿನಲ್ಲಿ ಹಿಂಬಾಲಿಸಿಕೊಂಡು ಉದ್ದೇಶಪೂರಕವಾಗಿ ಗುದ್ದಿದ್ದಾರೆ. ಈ ವೇಳೆ ಬೈಕ್‌ನಲ್ಲಿದ್ದ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಪೊಲೀಸರು ತನಿಖೆ ನಡೆಸಿದಾಗ ಈ ಘಟನೆಗೂ ಮುಂಚೆ ಇಬ್ಬರ ನಡುವೆ ಕಿರಿಕ್ ಆಗಿರುವುದು ತಿಳಿದುಬಂದಿದೆ. ಬೈಕ್ ಬಂದು ಕಾರಿನ ಮಿರರ್‌ಗೆ ಟಚ್ ಮಾಡಿದ್ದಕ್ಕೆ ಈ ರೀತಿ ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಕಾರಿನ ಚಾಲಕ ವೇಗವಾಗಿ ಬಂದು ಬೈಕ್ ಅನ್ನೇ ಹಿಂಬಾಲಿಸಿ ಗುದ್ದಿದ್ದಾನೆ. ಈ ರಭಸಕ್ಕೆ ಎಂಬ ಯುವಕ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ. ಆತ ಡೆಲಿವರಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.
ಸಾಕ್ಷಿ ನಾಶದ ಯತ್ನ
ಈ ಘಟನೆ ನಂತರ ಕಾರಿನ ಚಾಲಕ ಹಾಗೂ ಪತ್ನಿ ಮಾಸ್ಕ್ ಹಾಕೊಂಡು ಸ್ಥಳಕ್ಕೆ ಬಂದಿದ್ದರು. ಅಪಘಾತದ ಸ್ಥಳದಲ್ಲಿದ್ದ ಕಾರಿನ ಬಿಡಿಭಾಗಗಳನ್ನು ಅಲ್ಲಿಂದ ತೆಗೆದುಕೊಂಡು ಹೋಗಿರುವುದು ಕೂಡ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೀಗಾಗಿ ಸಾಕ್ಷಿನಾಶ ಆರೋಪದ ಮೇರೆಗೂ ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಮಾರ್ಷಲ್ ಆರ್ಟ್ ತರಬೇತುದಾರ ಮನೋಜ್ ಕುಮಾರ್ (34) ಮತ್ತು ಪತ್ನಿ ಆರತಿ ಶರ್ಮಾ (30) ಅವರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications