ಕೊಲೆ ಆರೋಪಿಯಿಂದ ಪೊಲೀಸ್ ಮೇಲೆ ಕಲ್ಲು ತೂರಾಟ, ಪೊಲೀಸರಿಂದ ಫೈರಿಂಗ್

ಬೆಂಗಳೂರು, ಮಾರ್ಚ್ 30: ಕೊಲೆ ಆರೋಪಿಯ ಜಾಡು ಹಿಡಿದು ಪೊಲೀಸರು ಹೋದಾಗ ಆತ ಪೊಲೀಸರ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾನೆ.ಪೊಲೀಸರು ತಮ್ಮ ರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೊಲೆ ಆರೋಪಿ ರಾಜೇಂದ್ರನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ರಾಜೇಂದ್ರ ಕಳೆದ ಭಾನುವಾರ ಸೆಕ್ಯೂರಿಟಿ ಗಾರ್ಡ್ ವೊಬ್ಬರನ್ನು ಬರ್ಬರ ಕೊಲೆ ಮಾಡಿದ್ದನು.

ಇಂದು ಬೆಳಗ್ಗೆ ಪೊಲೀಸರು ಆರೋಪಿ ರಾಜೇಂದ್ರನನ್ನು ಸೆರೆ ಹಿಡಿಯಲು ಯತ್ನಿಸಿದ್ದರು. ಈ ವೇಳೆ ರಾಜೇಂದ್ರ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ.

Bengaluru cops open fire on murder accused

ಕಳೆದ ಶನಿವಾರ ರಾಜೇಂದ್ರ ಪದ್ಮನಾಭನಗರದ ಮುಖ್ಯರಸ್ತೆಯ ಕರ್ನಾಟಕ ಬ್ಯಾಂಕ್ ಎದುರುಗಡೆ ಸೆಕ್ಯೂರಿಟಿ ಗಾರ್ಡ್ ಲಿಂಗಪ್ಪನನ್ನು ಕೊಲೆ ಮಾಡಿದ್ದನು. ಶನಿವಾರ ತಡರಾತ್ರಿ ಲಿಂಗಪ್ಪ ಮಲಗಿರುವಾಗ ರಾಜೇಂದ್ರ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದನು.

ಕೊಲೆ ಮಾಡಿದ ಬಳಿಕ ಆರೋಪಿ ಪರಾರಿಯಾಗಿದ್ದರು. ಬಳಿಕ ಆತ ಇರುವ ಮಾಹಿತಿ ಪಡೆದ ಪೊಲೀಸರು ಬೆಳಗಿನ ಜಾವ ರಾಜೇಂದ್ರನ ಬಂಧನಕ್ಕೆ ಯತ್ನಿಸಿದ್ದರು. ಹಲ್ಲೆ ಮಾಡಿದ ಕಾರಣ ಆತನ ಮೇಲೆ ಫೈರಿಂಗ್ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+