ಬೆಂಗಳೂರಿನ ಈ ಭಾಗದ ವಾಣಿಜ್ಯ ಸ್ವತ್ತುಗಳ ಕಂದಾಯ ಪಾವತಿ ಸರ್ವೇ, ಏಕಕಾಲಕ್ಕೆ 100ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿ
ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಆಸ್ತಿ ಹಾಗೂ ವಾಣಿಜ್ಯ ಸ್ವತ್ತುಗಳಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇರಿಸಿದೆ. ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾಗಿರುವ ಇಂದಿರಾನಗರ 100 ಅಡಿ ರಸ್ತೆಯ ಹಾಗೂ ಅಕ್ಕಪಕ್ಕದಲ್ಲಿನ ರಸ್ತೆಯಲ್ಲಿನ ವಾಣಿಜ್ಯ ಸ್ವತ್ತುಗಳ ಕಂದಾಯ ಪಾವತಿಯ ಮರುಪರಿಶೀಲನೆ ಹಾಗೂ ಪರಿಷ್ಕರಣೆ ಸರ್ವೇ ಕಾರ್ಯಕ್ಕೆ ಮುಂದಾಗಿದೆ.
ಇಂದಿರಾನಗರ 100 ಅಡಿ ರಸ್ತೆಯ ಹಾಗೂ ಅಕ್ಕಪಕ್ಕದಲ್ಲಿನ ರಸ್ತೆಯಲ್ಲಿನ ವಾಣಿಜ್ಯ ಸ್ವತ್ತುಗಳ ಕಂದಾಯ ಪಾವತಿಯ ಮರುಪರಿಶೀಲನೆ ಹಾಗೂ ಪರಿಷ್ಕರಣೆ ಸರ್ವೇ ಇಂದಿನಿಂದ ಪ್ರಾರಂಭವಾಗುತ್ತಿದೆ. ಕೇಂದ್ರ ನಗರ ಪಾಲಿಕೆಯ ಎಲ್ಲಾ ಕಂದಾಯ ವಿಭಾಗಗಳ 9 ಕಂದಾಯ ಅಧಿಕಾರಿಗಳ ನೇತೃತ್ವದ ತಂಡದಿಂದ 100 ಕ್ಕೂ ಹೆಚ್ಚು ಸಿಬ್ಬಂದಿಯಿಂದ ಏಕಕಾಲಕ್ಕೆ ಪರಿಶೀಲನೆ ಕಾರ್ಯ ನಡೆಯಲಿದೆ ಎಂದು ಹೇಳಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಂದಾಯ ಅಧಿಕಾರಿ, ಸಿ.ವಿ.ರಾಮನ್ ನಗರ ಹಾಗೂ ಕಂದಾಯ ಅಧಿಕಾರಿ, ಶಾಂತಿನಗರ ವಿಭಾಗ ವ್ಯಾಪ್ತಿಯಲ್ಲಿರುವ ಇಂದಿರಾನಗರ, 100 ಅಡಿ ರಸ್ತೆಯ ಹಾಗೂ ಅಕ್ಕಪಕ್ಕದಲ್ಲಿನ ರಸ್ತೆಗೆ ಹೊಂದಿಕೊಂಡಿರುವ ಎಲ್ಲಾ ವಾಣಿಜ್ಯ ಸ್ವತ್ತುಗಳ ಕಂದಾಯ ಪಾವತಿಯ ಮರುಪರಿಶೀಲನೆ ಹಾಗೂ ಪರಿಷ್ಕರಣೆಗೆ ಸಂಬಂಧಿಸಿದಂತೆ ನವೆಂಬರ್ 14ರಂದು ಬೆಳಿಗ್ಗೆ 10ಗಂಟೆಗೆ ಸರ್ವೆ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಕಂದಾಯ ಅಧಿಕಾರಿಗಳ ನೇತೃತ್ವದ 9 ತಂಡಗಳ ಸುಮಾರು 100 ಕ್ಕೂ ಹೆಚ್ಚು ಅಧಿಕಾರಿ / ಸಿಬ್ಬಂದಿಯಿಂದ ಇಂದಿರಾನಗರ, 100 ಅಡಿ ರಸ್ತೆ, ದೊಮ್ಮಲೂರು ಬ್ರಿಡ್ಜ್ ವಾಣಿಜ್ಯ ಸ್ವತ್ತುಗಳ ಕಂದಾಯ ಪಾವತಿಯ ಮರುಪರಿಶೀಲನೆ ಹಾಗೂ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ತಿಳಿಸಿದ್ದಾರೆ.
ಏಕಕಾಲಕ್ಕೆ ಸರ್ವೇ ಕಾರ್ಯಾಚರಣೆ
ಇನ್ನು ಈ ಪರಿಶೀಲನೆಯು ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಮೌಲ್ಯಮಾಪಕರು, ಕಂದಾಯ ಪರಿವೀಕ್ಷಕರು, ಕಂದಾಯ ವಸೂಲಿಗಾರರು, ವಾಣಿಜ್ಯ ಸ್ವತ್ತುಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳೊಂದಿಗೆ ಸ್ಥಳದಲ್ಲಿ ಹಾಜರಿದ್ದು, ಕಂದಾಯ ಪಾವತಿಯ ಮರುಪರಿಶೀಲನೆ ಹಾಗೂ ಪರಿಷ್ಕರಣೆ ಸರ್ವೇ ಕಾರ್ಯ ನಡೆಸಲಿದ್ದಾರೆ.
ಅಲ್ಲದೇ ಈ ಸರ್ವೇ ಕಾರ್ಯಕ್ಕೆ ನೆರವಾಗಲು ನಗರ ಯೋಜನೆ, ಆರೋಗ್ಯ ವೈದ್ಯಾಧಿಕಾರಿ, ಕಾರ್ಯಪಾಲಕ ಎಂಜಿನಿಯರರು, ವಾರ್ಡ್‌ಗಳ ಮಾರ್ಷಲ್ಸ್ ಗಳ ಸಮನ್ವಯದೊಂದಿಗೆ ನಡೆಯಲಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications