Get Updates
Get notified of breaking news, exclusive insights, and must-see stories!

17,000 ಕೋಟಿ ವೆಚ್ಚದ 71 ಕಿ.ಮೀ.ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಟೋಲ್ ಶುಲ್ಕ ಎಷ್ಟು ಗೊತ್ತಾ?

Bengaluru-Chennai Expressway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಚಾರದಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಪೂರ್ಣಗೊಂಡಿದ್ದು, ವಾಹನಗಳು ಕೂಡ ಸಂಚಾರ ಮಾಡುತ್ತಿವೆ. ಮತ್ತೊಂದೆಡೆ ಶೀಘ್ರದಲ್ಲೇ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆಯಾಗಲಿದ್ದು, ಇದಕ್ಕೂ ಮುನ್ನ ಕರ್ನಾಟಕ ಭಾಗದಲ್ಲಿ ಯಾವ್ಯಾವ ವಾಹನಗಳಿಗೆ ಟೋಲ್‌ ದರ ಎಷ್ಟು ಎನ್ನುವ ಮಾಹಿತಿ ಬಹುರಂಗವಾಗಿದೆ. ಹಾಗಾದ್ರೆ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಲೋಕಾರ್ಪಣೆಯಾದ ಆರಂಭದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ದರ ವಿಚಾರವಾಗಿ ಸುದ್ದಿಯಾಗುತ್ತಲಿತ್ತು. ಟೋಲ್‌ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ವಾಗ್ವಾದಗಳು ನಡೆದು ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿರುವ ಘಟನೆಗಳು ನಡೆದಿವೆ. ಈಗಲೂ ಕೂಡ ಈ ಹೆದ್ದಾರಿ ಒಂದಲ್ಲ ಒಂದು ವಿಚಾರಕ್ಕೆ ಮುನ್ನಲೆಗೆ ಬರುತ್ತಿದೆ. ಈ ನಡುವೆಯೇ ಇದೀಗ ಉದ್ಘಾನೆಗೂ ಮುನ್ನ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಟೋಲ್‌ ದರ ನಿಗದಿ ಮಾಡಲಾಗಿದ್ದು, ಇದು ಯಾವಾಗಿನಿಂದ ಜಾರಿಯಾಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

Bengaluru-Chennai Expressway Toll Fee Revealed Know statistics details

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕರ್ನಾಟಕ ಭಾಗದಲ್ಲಿ ಸಂಪೂರ್ಣವಾಗಿ ಮುಕ್ತಾಯವಾಗಿದ್ದು, ವಾಹನಗಳು ಸಂಚಾರ ಕೂಡ ಮಾಡುತ್ತಿವೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳದ ಹಿನ್ನೆಲೆ ಉದ್ಘಾಟನೆ ದಿನಾಂಕ ಮುಂದೂಡಿಕೆಯಾಗುತ್ತಾ ಬಂದಿದ್ದು, ಶೀಘ್ರದಲ್ಲೇ ಅಂದರೆ 2025 ಆಗಸ್ಟ್‌ನಲ್ಲಿ ಉದ್ಘಾಟನೆಯಾಗಲಿದೆ ಎನ್ನುವ ಮಾಹಿತಿ ಇದೆ. ಇದಕ್ಕೂ ಮುನ್ನ ಈ ಹೆದ್ದಾರಿ ಟೋಲ್‌ ದರಗಳ ಮಾಹಿತಿ ಬಹಿರಂಗವಾಗಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದರಗಳನ್ನು ಅಂತಿಮಗೊಳಿಸಿದ ತಕ್ಷಣ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ಸಂಗ್ರಹ ಪ್ರಾರಂಭ ಆಗಲಿದೆ. ಕಾರುಗಳಿಗೆ ಒಂದು-ಮಾರ್ಗ ಪ್ರಯಾಣಕ್ಕೆ ₹190 ವರೆಗೆ ನಿಗದಿಪಡಿಸಲಾಗಿದೆ. ಕರ್ನಾಟಕ ಭಾಗದಲ್ಲಿನ ಹೊಸಕೋಟೆ ಬಳಿಯ ಹೆಡಿಗೆನಬೆಲೆಯಿಂದ ಕೆಜಿಎಫ್ ಸುಂದರಪಾಳ್ಯವರೆಗಿನ ಹೆದ್ದಾರಿಯಲ್ಲಿ ವಾಹನ ಚಲಾಯಿಸುವ ವಾಹನ ಸವಾರರು ಶೀಘ್ರದಲ್ಲೇ ಟೋಲ್ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ ಅಂತಲೂ ವರದಿ ಆಗಿದೆ.

ಕರ್ನಾಟಕದ ವ್ಯಾಪ್ತಿಯಲ್ಲಿ 71 ಕಿಲೋ ಮೀಟರ್ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಪೂರ್ಣಗೊಳ್ಳಬೇಕಿದೆ. ಕರ್ನಾಟಕ ಭಾಗದಲ್ಲಿ ಈಗಾಗಲೇ ವಾಹನಗಳು ಸಂಚಾರ ಮಾಡುತ್ತಿದ್ದು, ಶೀಘ್ರದಲ್ಲೇ ಟೋಲ್‌ ಶುಲ್ಕ ಆಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಟೋಲ್‌ ದರಗಳ ವಿವರ: ಮಾಹಿತಿ ಪ್ರಕಾರ, ಹೆಡಿಗೆನಬೆಲೆಯಿಂದ ಸುಂದರಪಾಳ್ಯಕ್ಕೆ ಕಾರುಗಳು ಮತ್ತು ಜೀಪ್‌ಗಳಲ್ಲಿ ಏಕಮುಖ ಪ್ರಯಾಣಕ್ಕೆ ₹185, ಎರಡು ಕಡೆಯಿಂದ ಪ್ರಯಾಣಕ್ಕೆ ₹275 ವೆಚ್ಚ ಆಗಲಿದೆ. ಆದರೆ, ಹೆಚ್ಚಾದ ದರಗಳ ಪ್ರಕಾರ, ನೋಡಿದ್ರೆ, ಒಮುಖ ಪ್ರಯಾಣಕ್ಕೆ ₹190ರಷ್ಟು ದರ ಆಗಲಿದೆ. ಮಾಸಿಕ ಪಾಸ್‌ ಮಾಡಿಸಿಕೊಂಡರೆ, 50 ಟ್ರಿಪ್‌ಗಳಿಗೆ ಒಂದು ದಿಕ್ಕಿನಲ್ಲಿ ₹6,105 ರೂಪಾಯಿ ಆಗಲಿದ್ದು, ಮತ್ತೆ ಹಿಂದಿರುಗಿದರೆ, ₹6,260 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

* ವಾಹನಗಳ ಆಧಾರದ ಮೇಲೆ ಟೋಲ್‌ ದರಗಳು ನಿರ್ಧಾರ ಆಗಲಿವೆ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು, ಮತ್ತು ಮಿನಿ ಬಸ್‌ಗಳಿಗೆ ಹೆಡಿಗೆನಬೆಲೆಯಿಂದ ಸುಂದರಪಾಳ್ಯಕ್ಕೆ ಏಕಮುಖ ಪ್ರಯಾಣಕ್ಕೆ ₹295 ಮತ್ತು ದ್ವಿಮುಖ ಪ್ರಯಾಣಕ್ಕೆ ₹445 ಶುಲ್ಕ ವಿಧಿಸಲಾಗುತ್ತದೆ. ಸುಂದರಪಾಳ್ಯದಿಂದ ಹೆಡಿಗೆನಬೆಲೆಗೆ, ದರಗಳು ಕ್ರಮವಾಗಿ ₹305 ಮತ್ತು ₹455ಗೆ ಹೆಚ್ಚಳ ಆಗಲಿದೆ.

* ಟ್ರಕ್‌ಗಳು ಮತ್ತು ಬಸ್‌ಗಳಂತಹ ಭಾರೀ ವಾಹನಗಳಿಗೆ ಹೆಡಿಗೆನಬೆಲೆಯಿಂದ ಒಮ್ಮುಖ ಪ್ರಯಾಣಕ್ಕೆ ₹620 ಮತ್ತು ದ್ವಿಮುಖ ಪ್ರಯಾಣಕ್ಕೆ ₹930 ಶುಲ್ಕ ವಿಧಿಸಲಾಗುತ್ತದೆ. ಸುಂದರಪಾಳ್ಯದಿಂದ ಒಮ್ಮುಖ ಪ್ರಯಾಣ ₹635 ಮತ್ತು ದ್ವಿಮುಖ ಪ್ರಯಾಣಲಗಲೆ ₹955ಕ್ಕೆ ಏರಿಕೆ ಆಗಲಿದೆ.

ಹೆಡಿಗೆನಬೆಲೆ, ಅಗ್ರಹಾರ, ಕೃಷ್ಣರಾಜಪುರ ಮತ್ತು ಸುಂದರಪಾಳ್ಯದಲ್ಲಿರುವ ನಾಲ್ಕು ಟೋಲ್ ಪ್ಲಾಜಾಗಳು ಟೋಲ್‌ ಶುಲ್ಕ ಸಂಗ್ರಹಣೆ ಕಾರ್ಯವನ್ನು ನಿರ್ವಹಿಸಲಿದ್ದು, ಪ್ರಯಾಣದ ದೂರ ಆಧಾರದ ಮೇರೆಗೆ ಟೋಲ್ ಸಂಗ್ರಹವನ್ನು ವಿದಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 120 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿದೆ.

ರಾಜ್ಯದಲ್ಲಿ ಮೂರು ಹಂತಗಳಲ್ಲಿ ನಿರ್ಮಾಣ

* ಹೊಸಕೋಟೆ-ಮಾಲೂರು ನಡುವೆ 27.1 ಕಿಲೋ ಮೀಟರ್
* ಮಾಲೂರು-ಬಂಗಾರಪೇಟೆ 27.1 ಕಿಲೋ ಮೀಟರ್
* ಬಂಗಾರಪೇಟೆ-ಬೇತಮಂಗಲ, 17.5 ಕಿಲೋ ಮೀಟರ್
* ಕರ್ನಾಟದಲ್ಲಿ ವ್ಯಾಪ್ತಿಯಲ್ಲಿ ಒಟ್ಟು 71 ಕಿಲೋ ಮೀಟರ್ ರಸ್ತೆ ನಿರ್ಮಾಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+