ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ; ಟೆಂಡರ್ ಆಹ್ವಾನ
ಬೆಂಗಳೂರು, ನವೆಂಬರ್ 04: ಬೆಂಗಳೂರು-ಚೆನ್ನೈ ನಡುವೆ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡುವ ಯೋಜನೆಗೆ ಚಾಲನೆ ಸಿಕ್ಕಿದೆ. 1990ರಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಉಭಯ ನಗರಗಳ ನಡುವೆ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೆಚ್‌ಎಎಂ ಮಾದರಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಮೊದಲ ಹಂತದಲ್ಲಿ ಯೋಜನೆಗೆಗಾಗಿ ಟೆಂಡರ್ ಆಹ್ವಾನಿಸಲಾಗಿದ್ದು, ಯೋಜನೆಯನ್ನು 10 ಭಾಗವಾಗಿ ವಿಭಾಗಿಸಲಾಗಿದೆ.
ಮೊದಲ ಮೂರು ಹಂತದ ಪ್ಯಾಕೇಜ್‌ಗೆ ಈಗ ಎನ್‌ಎಚ್‌ಎಐ ಆಸಕ್ತ ಕಂಪನಿಗಳಿಂದ ಟೆಂಡರ್ ಆಹ್ವಾನಿಸಿದೆ. ಈ ಪ್ಯಾಕೇಜ್ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳನ್ನು ಒಳಗೊಂಡಿದೆ.
ದಕ್ಷಿಣ ಭಾರತದ ಮೊದಲ ಹಸಿರು ಎಕ್ಸ್‌ಪ್ರೆಸ್ ವೇ ಯೋಜನೆ ಇದಾಗಿದೆ. ಕರ್ನಾಟಕದಿಂದ ಹೊರಟು ಆಂಧ್ರ ಪ್ರದೇಶ ಮೂಲಕ ಚೆನ್ನೈ ತಲುಪುವ ಯೋಜನೆ ಪೂರ್ಣಗೊಂಡರೆ ಬೆಂಗಳೂರು-ಚೆನ್ನೈ ನಡುವಿನ ದೂರ 250 ಕಿ. ಮೀ.ಗಳಿಗೆ ಕಡಿಮೆಯಾಗಲಿದೆ.

3 ಪ್ಯಾಕೇಜ್‌ಗೆ ಟೆಂಡರ್
ಕರ್ನಾಟಕದಲ್ಲಿ ಈ ಎಕ್ಸ್‌ಪ್ರೆಸ್ ವೇ ನಿರ್ಮಾಣದ ಮೂರು ಪ್ಯಾಕೇಜ್‌ಗಳಿವೆ. ಎನ್‌ಎಚ್‌ಎಐ ಪ್ರಸ್ತುತ ಹೊಸಕೋಟೆ-ಮಾಲೂರು 27 ಕಿ. ಮೀ. ಮಾರ್ಗಕ್ಕೆ ಟೆಂಡರ್ ಕರೆದಿದೆ. ಮಾಲೂರು-ಬಂಗಾರಪೇಟೆ, ಬಂಗಾರಪೇಟೆ-ಆಂಧ್ರಪ್ರದೇಶ ಗಡಿ ಕರ್ನಾಟಕದಲ್ಲಿನ ಉಳಿದ ಎರಡು ಪ್ಯಾಕೇಜ್ ಆಗಿದೆ.

ಕರ್ನಾಟಕದಲ್ಲಿ 72 ಕಿ. ಮೀ. ಮಾರ್ಗ
ಕರ್ನಾಟಕದಲ್ಲಿ ಈ ಎಕ್ಸ್‌ಪ್ರೆಸ್ ವೇ 72 ಕಿ. ಮೀ. ದೂರ ಇರುತ್ತದೆ. ಕೇಂದ್ರ ಸರ್ಕಾರ ಎಕ್ಸ್‌ಪ್ರೆಸ್ ವೇ ನಿರ್ಮಾಣ ಯೋಜನೆಗೆ ಚುರುಕುಗೊಳಿಸಬೇಕು ಎಂದು ಸೂಚನೆ ನೀಡಿದೆ. 2021ರ ಜನವರಿಯಲ್ಲಿ ಟೆಂಡರ್ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಆಂಧ್ರಪ್ರದೇಶದಲ್ಲಿ ಅರಣ್ಯ ಇಲಾಖೆ ಅನುಮತಿ ಕಾರಣಕ್ಕಾಗಿ ಟೆಂಡರ್ ವಿಳಂಬವಾಗಿದೆ.

ದಕ್ಷಿಣ ಭಾರತದ ಮೊದಲ ಎಕ್ಸ್‌ಪ್ರೆಸ್ ವೇ
ಕೇಂದ್ರ ಸರ್ಕಾರದ ಹಸಿರು ಎಕ್ಸ್‌ಪ್ರೆಸ್ ವೇ ಯೋಜನೆಯಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಸೇರಿದ್ದು, ಇದು ದಕ್ಷಿಣ ಭಾರತದ ಮೊದಲ ಎಕ್ಸ್‌ಪ್ರೆಸ್ ವೇ ಯೋಜನೆಯಾಗಿದೆ. 2,650 ಹೆಕ್ಟೇರ್ ಭೂಮಿಯನ್ನು ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಸಿವಿಲ್ ಕಾಮಗಾರಿಗಾಳಿಗಾಗಿ 17,930 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
Recommended Video

250 ಕಿ. ಮೀ. ದೂರದ ರಸ್ತೆ
ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಎಕ್ಸ್‌ಪ್ರೆಸ್ ವೇ ಹಾದು ಹೋಗಲಿದೆ. ಹೊಸಕೋಟೆ-ಮಾಲೂರು ಮೂಲಕ ಹಾದು ಹೋಗುವ ಮಾರ್ಗ ಆಂಧ್ರದ ವಿಕೋಟಾ-ಪಾಲಮನಾರ್-ಆರಕೋಕಂ ಮೂಲಕ ಸಾಗಿ ತಮಿಳುನಾಡಿನ ಶ್ರೀಪೆರಂಬೂರು ಮೂಲಕ ಸಾಗಲಿದೆ. ಈ ಮಾರ್ಗ ಬೆಂಗಳೂರು-ಚೆನ್ನೈ ನಡುವಿನ ದೂರವನ್ನು 250 ಕಿ. ಮೀ.ಗೆ ಕಡಿಮೆ ಮಾಡಲಿದೆ.












Click it and Unblock the Notifications