ಮುಂಬರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕರ್ನಾಟಕ ಸೇರಿ ಯಾವ ರಾಜ್ಯದಲ್ಲಿ ಎಷ್ಟು ಕಿ.ಮೀ. ಹಾದುಹೋಗಿದೆ?

Bengaluru-Chennai Expressway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಲಿದೆ. ಇನ್ನು ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಉದ್ಘಾಟನೆ ಯಾವಾಗ ಎನ್ನುವ ಮಾಹಿತಿಯನ್ನು ಇತ್ತೀಚೆಗಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬಿಚ್ಚಿಟ್ಟಿದ್ದಾರೆ. ಇದು ಕರ್ನಾಟಕ ಸೇರಿ ಮೂರು ರಾಜ್ಯಗಳ ಮೂಲಕ ಹಾದುಹೋಗಲಿದೆ. ಹಾಗಾದ್ರೆ, ಎಲ್ಲೆಲ್ಲಿ ಎಷ್ಟು ಕಿಲೋ ಮೀಟರ್ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಜ್ಯದಲ್ಲಿ ಹಲವು ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣ ಹಂತದಲ್ಲಿದ್ದರೆ, ಇನ್ನೂ ಕೆಲವು ಕಾಮಗಾರಿ ಆರಂಭದಲ್ಲಿವೆ. ಮತ್ತೊಂದೆಡೆ ಕೆಲವು ಉದ್ಘಾಟನೆ ಹಂತದಲ್ಲಿದ್ದು, ಈ ಸಾಲಿಗೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕೂಡ ಸೇರಲಿದೆ. ಈಗಾಗಲೇ ಕಾರ್ನಾಟಕ ಭಾಗದಲ್ಲಿ ಈ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ವಾಹನ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಇತ್ತೀಚೆಗಷ್ಟೇ ಟೋಲ್‌ ಶುಲ್ಕವನ್ನು ಕೂಡ ಬಿಡುಗಡೆ ಮಾಡಲಾಗಿದ್ದು, ಹೆದ್ದಾರಿ ಸಚಿವಾಲಯ ಒಪ್ಪಿಗೆ ಸೂಚಿಸಿದ ಬಳಿಕ ಜಾರಿ ಮಾಡಲಾಗುತ್ತದೆ ಎನ್ನುವ ಮಾಹಿತಿ ಇದೆ.

Bengaluru Chennai Expressway How Many Kilometers Passed Through Karnataka and Other States

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಉದ್ಘಾಟನೆ ದಿನಾಂಕ ಮುಂದೂಡಿಕೆ ಆಗುತ್ತಾ ಬಂದಿದೆ. ಇದಕ್ಕೆ ಕಾರಣವೂ ಇದೆ. ಆಂಧ್ರಪ್ರದೇಶ ಹಾಗೂ ತಮಿಲುನಾಡು ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ ಕಾರಣ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಇದರಿಂದ ಲೋಕಾರ್ಪಣೆ ದಿನಾಂಕ ಸಹ ಮಂದೆ ಹೋಗುತ್ತಲಿದೆ. 262 ಕಿಲೋ ಮೀಸರ್ ಉದ್ದದ ಈ ಎಕ್ಸ್‌ಪ್ರೆಸ್‌ ನಿರ್ಮಾಣ ವೆಚ್ಚ ಸುಮಾರು ₹17,000ರಿಂದ ₹17,900 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ಈ ಎಕ್ಸ್‌ಪ್ರೆಸ್‌ ವೇ ಕರ್ನಾಟಕ ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳ ಹಲವು ಭಾಗಗಳಲ್ಲಿ ಹಾದುಹೋಗಲಿದೆ. ಇದನ್ನು ಹೊರತುಪಡಿಸಿ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಭಾಗ ಆಗಿದ್ದು, ಕಾಮಗಾರಿ ಪೂರ್ಣಗೊಂಡ ಬಂತರ ಎರಡು ನಗರಗಳ ನಡುವಿನ ಪ್ರಯಾಣ ಸಮಯ ಕೇವಲ ಎರಡೂವರೆ ಗಂಟೆಗಳಿಗೆ ಇಳಿಕೆಯಾಗಲಿದೆ.

ನಾಲ್ಕು ಪ್ಯಾಕೇಜ್‌ಗಳ ಕಾಮಗಾರಿ ಈಗಾಗಲೇ ಮುಕ್ತಾಯ ಆಗಿದೆ. ಎಲ್ಲಾ ಪ್ಯಾಕೇಜ್‌ಗಳ ಕಾಮಗಾರಿಗಳು 2026ಕ್ಕೆ ಮುಕ್ತಾಯ ಆಗಿ ವಾಹನಗಳ ಸಂಚಾರಕ್ಕೆ ಮುಕ್ತ ಆಗಲಿದೆ ಎಂದು ಎಂದು ಇತ್ತೀಚೆಗಷ್ಟೇ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಮಾಹಿತಿಯನ್ನು ನೀಡಿದ್ದಾರೆ. ಕರ್ನಾಟಕ ಭಾಗದಲ್ಲಿ ಕಾಮಗಾರಿ ಕಂಪ್ಲೀಟ್‌ ಆಗಿದ್ದು, ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದ ಕಾಮಗಾರಿ ಪೂರ್ಣಗೊಳ್ಳುವಿಕೆಗಾಗಿ ಕಾಯಲಾಗುತ್ತಿದೆ ಅಂತಲೂ ತಿಳಿಸಿದ್ದಾರೆ.

ಯಾವ ರಾಜ್ಯದಲ್ಲಿ ಎಷ್ಟು ಕಿಲೋ ಮೀಟರ್?

* ಕರ್ನಾಟಕ ಭಾಗ: 71 ಕಿಲೋ ಮೀಟರ್
* ತಮಿನಾಡು 106 ಕಿಲೋ ಮೀಟರ್
* ಆಂಧ್ರ ಪ್ರದೇಶದಲ್ಲಿ 85 ಕಿಲೋ ಮೀಟರ್‌

ಕರ್ನಾಟಕ ಭಾಗದ ಕಾಮಗಾರಿ ಹಾಗೂ ವೆಚ್ಚ

* ಬೆಂಗಳೂರು-ಮಾಲೂರು: 2,761 ಕೋಟಿ ರೂಪಾಯಿ
* ಮಾಲೂರು-ಬಂಗಾರ ಪೇಟೆ: 1,496 ಕೋಟಿ ರೂಪಾಯಿ
* ಪ್ಯಾಕೇಜ್‌ - 3: 784.22 ಕೋಟಿ ರೂಪಾಯಿ

ಆಂಧ್ರಪ್ರದೇಶ ಭಾಗದ ಕಾಮಗಾರಿ ಹಾಗೂ ವೆಚ್ಚ

* ಬೈರೆಡ್ಡಿಪಲ್ಲಿ-ಬಂಗಾರುಪಾಲೆಂ ಭಾಗದಲ್ಲಿ ಶೇ.70ರಷ್ಟು ಕಾಮಗಾರಿ ಪೂರ್ಣ: 2,171 ಕೋಟಿ ರೂಪಾಯಿ
* ಬೇತಮಂಗಲ-ಬೈರೆಡ್ಡಿಪಲ್ಲಿ ಭಾಗದಲ್ಲಿ ಶೇ.90ರಷ್ಟು ಕಾಮಗಾರಿ ಪೂರ್ಣ: 1,306 ಕೋಟಿ ರೂಪಾಯಿ
* ಬಂಗಾರು ಪಾಲೆಂ-ಗುಡಿಪಾಲ ಭಾಗದಲ್ಲಿ ಕಾಮಗಾರಿ ಸಂಪೂರ್ಣ ಮುಕ್ತಾಯ: 1,288 ಕೋಟಿ ರೂಪಾಯಿ

ತಮಿಳುನಾಡು ಭಾಗದ ಕಾಮಗಾರಿ ಹಾಗೂ ವೆಚ್ಚ

* ಗುಡಿಪಾಲ-ವಾಲಾಜಪೇಟೆ ಭಾಗದಲ್ಲಿ ಶೇ.88ರಷ್ಟು ಕಾಮಗಾರಿ ಪೂರ್ಣ: 1,028 ಕೋಟಿ ರೂಪಾಯಿ
* ವಾಲಾಜಪೇಟೆ - ಅರಕ್ಕೋಣಂ ಭಾಗದಲ್ಲಿ ಶೇ.91ರಷ್ಟು ಕಾಮಗಾರಿ ಪೂರ್ಣ: 843 ಕೋಟಿ ರೂಪಾಯಿ
* ಅಣಕ್ಕೋಣಂ-ಕಾಂಚಿಪುರಂ ಭಾಗದಲ್ಲಿ ಶೇ.53.6ರಷ್ಟು ಕಾಮಗಾರಿ ಪೂರ್ಣ: 1,155 ಕೋಟಿ ರೂಪಾಯಿ
* ಕಾಂಚಿಪುರಂ-ಪೆರಂಬದೂರು ಭಾಗದಲ್ಲಿ ಶೇ.79ರಷ್ಟು ಕಾಮಗಾರಿ ಪೂರ್ಣ: 2,948 ಕೋಟಿ ರೂಪಾಯಿ

ಹೀಗೆ ಯಾವ್ಯಾವ ರಾಜ್ಯದಲ್ಲಿ ಈ ಎಕ್ಸ್‌ಪ್ರೆಸ್‌ ವೇ ಎಷ್ಟು ಕಿಲೋ ಮೀಟರ್ ಹಾದುಹೋಗಿದೆ, ಕಾಮಗಾರಿ ಸ್ಥಿತಿ ಹಾಗೂ ವೆಚ್ಚದ ಮಾಹಿತಿಯನ್ನು ನೀಡಲಾಗಿದೆ. ಒಟ್ಟಿನಲ್ಲಿ ಈ ಬಹುನಿರೀಕ್ಷಿತ ಎಕ್ಸ್‌ಪ್ರೆಸ್‌ ವೇ ಮುಂದಿನ ವರ್ಷ ಉದ್ಘಾಟನೆಯಾಗಲಿದೆ ಅಂತಲೂ ನಿತಿನ್‌ ಗಡ್ಕರಿ ಅವರು ಮಾಹಿತಿ ಕೊಟ್ಟಿದ್ದಾರೆ. ಇದರಿಂದ ಯಾವಾಗ ಲೋಕಾರ್ಪಣೆ ಆಗುತ್ತದೆ ಎಂದು ಕಾದುಕುಳಿತವರಿಗೆ ನೆಮ್ಮದಿ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+