Freedom Park: ಗುಡ್ ನ್ಯೂಸ್: ಸ್ವಾತಂತ್ರ್ಯ ಉದ್ಯಾನ ಸಮಗ್ರ ಅಭಿವೃದ್ಧಿಗೆ ಪ್ಲಾನ್
ಬೆಂಗಳೂರು, ಅಕ್ಟೋಬರ್ 24: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ವಾತಂತ್ರ್ಯ ಉದ್ಯಾನವನ (ಫ್ರೀಡಂ ಪಾರ್ಕ್) ಅನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ನಗರದ ಕೇಂದ್ರ ನಗರ ಪಾಲಿಕೆ ಸಜ್ಜಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ರಾಜೇಂದ್ರ ಚೋಳನ್ ರವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶುಕ್ರವಾರ ಬೆಳಗ್ಗೆ ನಗರದ ಸ್ವಾತಂತ್ರ್ಯ ಉದ್ಯಾನವನ (ಫ್ರೀಡಂ ಪಾರ್ಕ್) ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದರು. ಪಾರ್ಕ್‌ನಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ವಾಯುವಿಹಾರಿಗಳ ನಡಿಗೆಗೆ ಸುಗಮ ಮಾರ್ಗ, ಸೂಕ್ತ ಭದ್ರತಾ ವ್ಯವಸ್ಥೆ ಸೇರಿದಂತೆ ಸಮಗ್ರ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಕಿಡ್ಸ್ ಪಾರ್ಕ್ ನಿರ್ಮಾಣ, ಶೌಚಾಲಯ ವ್ಯವಸ್ಥೆ
ನಗರದ ಹೃದಯ ಭಾಗದಲ್ಲಿರುವ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಾಯುವಿಹಾರಕ್ಕೆ (ವಾಕಿಂಗ್) ಆಗಮಿಸುವ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳ ನಡಿಗೆಗೆ ಸುಗಮವಾಗುವಂತೆ ಮಾರ್ಗವನ್ನು ನಿರ್ಮಿಸಬೇಕೆಂದರು. ಉದ್ಯಾನವನಕ್ಕೆ ಆಗಮಿಸುವ ಮಕ್ಕಳ ಆಟೋಟಕ್ಕಾಗಿ ಆಟದ ಉಪಕರಣಗಳೊಂದಿಗೆ ಕಿಡ್ಸ್ ಪಾರ್ಕ್ ನಿರ್ಮಿಸಬೇಕು ಎಂದು ಹೇಳಿದರು.
ಉದ್ಯಾನವನಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಮತ್ತು ಉದ್ಯಾನವನದಲ್ಲಿ ಸ್ವಚ್ಛತೆ ಕಾಪಾಡಬೇಕು. ಇಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಅವುಗಳ ಸರಿಯಾದ ಪೋಷಣೆಗೆ ಕ್ರಮ ವಹಿಸಲು ಹಾಗೂ ಒಣಗಿದ ಹಾಗೂ ಅಪಾಯಕಾರಿ ಮರ ಮತ್ತು ರೆಂಬೆ ಕೊಂಬೆಗಳನ್ನು ತೆರವುಗೊಳಿಸುವಂತೆ ನಿರ್ದೇಶಿಸಿದರು.
ಬಹುಮಹಡಿ ವಾಹನ ನಿಲುಗಡೆ ಕಟ್ಟಡದ ಮೇಲ್ಭಾಗದ ಸ್ಥಳವನ್ನು ವಾಣಿಜ್ಯ ಉದ್ದೇಶ ಬಳಸಿ ಕಂದಾಯ ಉತ್ಪತ್ತಿಗೆ ಕ್ರಮ ವಹಿಸಬೇಕಿದೆ. ಉದ್ಯಾನವನದ ಪಕ್ಕದಲ್ಲಿರುವ ಬಹುಮಹಡಿ ವಾಹನ ನಿಲುಗಡೆ ಸ್ಥಳಕ್ಕೆ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಈ ಕಟ್ಟಡದ ಮೇಲ್ಭಾಗದಲ್ಲಿರುವ ಜಾಗವನ್ನು, ವಸ್ತು ಪ್ರದರ್ಶನ ಮತ್ತು ಮಾರಾಟ ಹಾಗೂ ಇನ್ನಿತರ ವಾಣಿಜ್ಯ ಉದ್ದೇಶಗಳಿಗೆ ಉಪಯೋಗಕ್ಕೆ ನೀಡುವ ಮೂಲಕ ನಗರ ಪಾಲಿಕೆಗೆ ಆದಾಯ ಬರುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.
ಕಟ್ಟಡ ತ್ಯಾಜ್ಯ ರಸ್ತೆಗೆ ಸುರಿದವರಿಗೆ ದಂಡ ವಿಧಿಸಿ
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಹಂತದಲ್ಲಿರುವ ಕೆಲವು ಕಟ್ಟಡಗಳ ತ್ಯಾಜ್ಯ, ಕಬ್ಬಿಣ, ಜಲ್ಲಿಕಲ್ಲು, ಮರಳು ಇತರೆ ವಸ್ತುಗಳನ್ನು ರಸ್ತೆಯಲ್ಲಿ ಹಾಕಲಾಗಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕಾರಣ ಅದನ್ನು ಕೂಡಲೇ ತೆರವುಗೊಳಿಸಲು ಹಾಗೂ ಕಟ್ಟಡ ಮಾಲೀಕರಿಗೆ ದಂಡ ವಿಧಿಸಬೇಕು.
ಸ್ವಾತಂತ್ರ್ಯ ಉದ್ಯಾನವನದ ಅಕ್ಕ ಪಕ್ಕದಲ್ಲಿನ ರಸ್ತೆಗಳನ್ನು ಪರಿಶೀಲಿಸಿದ ಅವರು, ರಸ್ತೆಬದಿಯಲ್ಲಿ ಎಳನೀರು ಮಾರಾಟ ಮಾಡುತ್ತಿರುವವರ ತೆಂಗಿನ ಚಿಪ್ಪುಗಳನ್ನು ಅಲ್ಲಿಯೇ ಬಿಡದೆ, ವಿಲೇವಾರಿ ಮಾಡಲು ಕ್ರಮ ವಹಿಸಲು ಸೂಚಿಸಿದರು. ಜೊತೆಗೆ ಪಾದಚಾರಿ ಮಾರ್ಗಗಳ ಸರಿಯಾಗಿ ನಿರ್ವಬೇಕು ಎಂದು ತಿಳಿಸಿದರು.












Click it and Unblock the Notifications