ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿವೀಸ್ ಮಹಿಳೆ ವಂಚನೆ ಜಾಲ ಬೆಂಗಳೂರಲ್ಲಿ ಬಯಲು

|
Google Oneindia Kannada News

ಬೆಂಗಳೂರು, ಡಿ. 4 : ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಜಾಲವೊಂದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ನ್ಯೂಜಿಲೆಂಡ್ ಮೂಲದ ಡೆನಿಸ್ ಎಂಬ ಮಹಿಳೆ ಈ ಜಾಲದ ರೂವಾರಿಯಾಗಿದ್ದು, ಸುಮಾರು 50 ಕೋಟಿಗೂ ಹೆಚ್ಚು ವಂಚನೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಚೈನ್ ಲಿಂಕ್ ವಂಚನಾ ಜಾಲದಲ್ಲಿ ತೊಡಗಿದ್ದ ನ್ಯೂಜಿಲ್ಯಾಂಡ್‌ನ ಡೆನಿಸ್, ಯಲಹಂಕದ ಮಹಮ್ಮದ್ ಖುರಂ (44), ಹೆಬ್ಬಾಳದ ಕಿರಣ್ (39), ಶೇಷಾದ್ರಿಪುರಂನ ಹಿತೇಶ್ (42) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಲಕ್ಷ 25 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನ್ಯೂಜಿಲ್ಯಾಂಡ್‌ನ ಡೆನಿಸ್ ಕಳೆದ ಐದು ವರ್ಷಗಳಿಂದ ಅಮೆರಿಕ, ಪಾಕಿಸ್ತಾನ, ದುಬೈ ನಂತರ ಭಾರತದಲ್ಲಿ ವಂಚನೆ ಜಾಲವನ್ನು ಸ್ಥಳೀಯ ಆರೋಪಿಗಳೊಂದಿಗೆ ಸೇರಿ ವಿಸ್ತರಣೆ ಮಾಡಿದ್ದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಪಂಜಾಬ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆರೋಪಿಗಳು ಚೈನ್ ಲಿಂಕ್ ಜಾಲ ಹೊಂದಿದ್ದಾರೆ ಎಂದು ತಿಳಿದುಬಂದಿದ್ದು, ವಿಚಾರಣೆ ಮುಂದುವರೆದಿದೆ. [ಪುರಾತನ ವಿಗ್ರಹ ಕಳ್ಳಸಾಗಣೆ ಜಾಲ ಪತ್ತೆ ಹಚ್ಚಿದ ಸಿಸಿಬಿ]

ವಂಚನೆ ಹೇಗೆ : ವೆಬ್‌ಸೈಟ್‌ ಮೂಲಕ ತಮ್ಮ ಚೈನ್‌ ಲಿಂಕ್ ಜಾಲಕ್ಕೆ ಸದಸ್ಯರನ್ನು ಸೇರಿಸಿಕೊಳ್ಳುತ್ತಿದ್ದ ಆರೋಪಿಗಳು ಪ್ರಾಥಮಿಕ ಸದಸ್ಯತ್ವ ಪಡೆದವರಿಗೆ 130 ‌ಡಾಲರ್, ವೃತ್ತಿಪರ ಸದಸ್ಯತ್ವ ಪಡೆದವರಿಗೆ 405 ಡಾಲರ್ ಹಣವನ್ನು ನೀಡುವುದಾಗಿ ಹೇಳುತ್ತಿದ್ದರು.

New Zealand

ಪ್ರಾಥಮಿಕ ಸದಸ್ಯತ್ವ ಪ‌ಡೆದವರು ಹೊಸ ಸದಸ್ಯರನ್ನು ಪರಿಚಯಿಸಿ ನೋಂದಣಿ ಮಾಡಿಸಿದರೆ 25 ಡಾಲರ್ ಕಮಿಷನ್ ಹಾಗೂ ಪ್ರತಿ ಸದಸ್ಯತ್ವಕ್ಕೆ 100 ಪಾಯಿಂಟ್‌ಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಿದ್ದರು. 300 ರಿಂದ 600 ಪಾಯಿಂಟ್‌ ಗಳಿಸಿದರೆ 25 ಡಾಲರ್ ಹೆಚ್ಚುವರಿ ಕಮಿಷನ್ ನೀ‌ಡುವುದಾಗಿ ವಂಚನೆ ನ‌ಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದರೆ.

ಈ ಚೈನ್‌ಲಿಂಕ್‌ ಜಾಲದಿಂದ ವಂಚನೆಗೊಳಗಾದ ಇಬ್ಬರು ನೀಡಿದ ದೂರಿನ ಅನ್ವಯ ಕ್ಯಾಪಿಟಲ್ ಹೋಟೆಲ್ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

English summary
Bengaluru CCB police busts international MLM Fraud and arrested New Zealand based woman in Capital Hotel, Bengaluru. According to complaint CCB squad raided Room No 225 of Hotel Capital and 4 accused arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X