• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಹಲವೆಡೆ ಮಾರ್ಚ್ 22 ರಿಂದ 27ರವರೆಗೆ ವಿದ್ಯುತ್ ವ್ಯತ್ಯಯ

|

ಬೆಂಗಳೂರು, ಮಾರ್ಚ್ 22: ಬೆಂಗಳೂರಿನ ಹಲವೆಡೆ ಮಾರ್ಚ್ 22 ರಿಂದ 27ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಆರ್‌ಬಿಐ, ಖೋಡೆ, ಸೇಂಟ್ ಜಾನ್ಸ್ ಉಪಕೇಂದ್ರದಲ್ಲಿ ಅಪ್‌ಗ್ರೇಡ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ.

ಬೆಂಗಳೂರಿನ ಹಲವೆಡೆ ಮಾರ್ಚ್ 6 ರಂದು ವಿದ್ಯುತ್ ವ್ಯತ್ಯಯ

ಮಾರ್ಚ್ 22: ಬಿಸಿಎಂಸಿ ಲೇಔಟ್,ತಿಪ್ಪಸಂದ್ರ, ಚೆನ್ನಮ್ಮ ಗಾರ್ಡನ್ಸ್ ಹಾಗೂ ಗಣಪತಿಪುರ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬಿಟಿಎಂ ಲೇಔಟ್ ಮೊದಲನೇ ಹಂತ, 20ನೇ ಮುಖ್ಯರಸ್ತೆಯ ಒಂದರಿಂದ ಐದನೇ ಹಂತದವರೆಗೂ ಬೆಳಗ್ಗೆ 10 ರಿಂದ 5.30ರವರೆಗೂ ವಿದ್ಯುತ್ ಇರುವುದಿಲ್ಲ.

ಮಾರ್ಚ್ 23: ಆರ್‌ಬಿಐ ಲೇಔಟ್, ಶ್ರೀನಿಧಿ ಲೇಔಟ್, ಚುಂಚಘಟ್ಟ, ಜೆಪಿನಗರದ ಒಂದರಿಂದ ಐದನೇ ಹಂತ. ಸಾರಕ್ಕಿ ಥೋಟ, ರೋಸ್ ಗಾರ್ಡನ್, ಸಿದ್ದೇಶ್ವರ ಥಿಯೇಟರ್, ಸಿಂಧೂರ್ ಚೌಲ್ಟ್ರಿಯಲ್ಲಿ ಬೆಳಗ್ಗೆ 10 ರಿಂದ 5.30ರವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಮಾರ್ಚ್ 24: ಚುಂಚಘಟ್ಟ ರಸ್ತೆ, ಶ್ರದ್ಧಾನಗರ, ಶಿವಶಕ್ತಿನಗರ, ಬೀರಪ್ಪ ಗಾರ್ಡನ್, ಚುಂಚಘಟ್ಟ ಮುಖ್ಯರಸ್ತೆ, ದೊಡ್ಡಮನೆ ಕೈಗಾರಿಕಾ ಪ್ರದೇಶ, ಎಂಎಸ್ ಲೇಔಟ್, ರಾಜೀವ್ ಗಾಂಧಿ ರಸ್ತೆ, ಚರ್ಚ್ ರಸ್ತೆ, ಶ್ರೀನಿವಾಸ ಕಲ್ಯಾಣ ಮಂಟಪ ರಸ್ತೆ ಹಾಗೂ ಕನಕಪುರ ಮುಖ್ಯರಸ್ತೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಿಟಿಎಂ ಲೇಔಟ್ 1 ನೇ ಹಂತ, 17ನೇ ಮುಖ್ಯರಸ್ತೆಯಲ್ಲಿ ಕೂಡ ವಿದ್ಯುತ್ ಕಡಿತವಾಗಲಿದೆ.

ಮಾರ್ಚ್ 25: ಬಿಸಿಎಂಸಿ ಲೇಔಟ್, ತಿಪ್ಪಸಂದ್ರ ಹಾಗೂ ಶ್ರೀನಿಧಿ ಲೇಔಟ್‌ನಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಿಟಿಎಂ ಲೇಔಟ್ ಮೊದಲನೇ ಹಂತದ 15 ರಿಂದ 16ನೇ ಮುಖ್ಯರಸ್ತೆಯಲ್ಲಿ ಕರೆಂಟ್ ಇರುವುದಿಲ್ಲ.

ಮಾರ್ಚ್ 26: ಎಸ್‌ಎಲ್‌ವಿ ಹೋಟೆಲ್ ಎದುರು ರಸ್ತೆ, ಬ್ರಾಹ್ಮಿನ್ ಹೋಟೆಲ್, ಗಣಪತಿಪುರ, ಜೆಪಿ ನಗರ ಆರನೇ ಹಂತ, ಸಾರಕ್ಕಿ ತೋಟ, ರೋಸ್ ಗಾರ್ಡನ್, ಸಿದ್ದೇಶ್ವರ ಥಿಯೇಟರ್ ಸುತ್ತಮುತ್ತಲಿನ ಪ್ರದೇಶ, ಸಿಂಧೂರ್ ಚೌಲ್ಟ್ರಿ ಬೆಳಗ್ಗೆ 10 ರಿಂದ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

   ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಇಲ್ಲ - ಕೃಷಿ ಸಚಿವ ಸ್ಪಷ್ಟನೆ | Oneindia Kannada

   ಮಾರ್ಚ್ 27: ಸಾರಕ್ಕಿ ಕೆರೆ, ಜರಗನಹಳ್ಳಿ, ರಾಜಮ್ಮ ಗಾರ್ಡನ್, ರಾಜೀವ್ ಗಾಂಧಿ ರಸ್ತೆ, ಎಂಎಸ್ ಲೇಔಟ್ ಹಾಗೂ ಜಿಕೆಎಂ ಕಾಲೇಜು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 10.30ರಿಂದ 5.30ರವರೆಗೆ ವಿದ್ಯುತ್ ಅಡಚಣೆ ಉಂಟಾಗಲಿದೆ.

   English summary
   Parts of Bengaluru will face disruptions in power supply from March 22 to March 27, BESCOM announced on Sunday. Shutdowns are expected due to upgrade and repair works at the RBI, Khodays and St John's substations.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X