ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದ್ಧಟತನದ ಚಾಲಕರ ಕಿವಿ ಹಿಂಡಲು ಮುಂದಾದ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 05: ತನ್ನ ಚಾಲಕರ ಅನುಚಿತ ವರ್ತನೆ, ವೇಗದ ಚಾಲನೆ, ಟ್ರಾಫಿಕ್ ನಿಯಮ ಉಲ್ಲಂಘನೆ ಎಲ್ಲದಕ್ಕೂ ಬ್ರೇಕ್ ಹಾಕಲು ಸ್ವತಃ ಬಿಎಂಟಿಸಿಯೇ ಮುಂದಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಚಾಲಕರಿಗೆ ಶಿಸ್ತು ಕಲಿಸಲು ಅಭಿಯಾನ ಆರಂಭಮಾಡಿದೆ. ಪ್ರಯಾಣಿಕರಿಗೆ ಅಗತ್ಯ ಜಾಗದಲ್ಲಿ ನಿಲುಗಡೆ ಕಲ್ಪಿಸದ, ಟ್ರಾಫಿಕ್ ನಿಯಮಗಳನ್ನು ಪಾಲಿಸದ ಚಾಲಕರ ಕಿವಿ ಹಿಂಡಲಿದೆ.[ಕ್ಯಾಬ್, ಟ್ಯಾಕ್ಸಿ, ಮಿನಿ ಬಸ್ ವಿರುದ್ಧ ಬಿಎಂಟಿಸಿ ಸಮರ]

Bengaluru: BMTC to deploy officials to discipline its drivers

ಸೋಮವಾರ 69 ನೇ ಬಸ್ ಡೇ ಅಂಗವಾಗಿ ' ಬಸ್ ಸ್ಟಾಪ್ ಡಿಸಿಪ್ಲೀನ್ ಕ್ಯಾಂಪೇನ್' ಆರಂಭ ಮಾಡಲಾಗಿದ್ದು ಆರು ವರ್ಷಗಳ ಕಾಲ ಮುಂದುವರಿಯಲಿದೆ. ಶಿಸ್ತು ಉಲ್ಲಂಘನೆ ಮಾಡುವ ಚಾಲಕರನ್ನು ಶಿಕ್ಷೆಗೆ ಗುರಿ ಮಾಡಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ಸ್ಟಾಪ್ ಡಿಸಿಪ್ಲೀನ್ ಕ್ಯಾಂಪೇನ್ ಹೈಲೈಟ್ಸ್

* ಪೀಕ್ ಅವರ್ ನಲ್ಲಿ 11 ವಿಶೇಷ ತಂಡಗಳು ಪ್ರಮುಖ ಬಸ್ ನಿಲ್ದಾಣಗಳಲ್ಲಿ ಚಾಲಕರ ಚಲನವಲನಗಳನ್ನು ಗಮನಿಸುತ್ತವೆ.

* ಟ್ರಾಫಿಕ್ ಸಮಸ್ಯೆ ಹೇರಳವಾಗಿರುವ ಸಿಲ್ಕ್ ಬೋರ್ಡ್, ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ವಿವಿಧೆಡೆ ತಂಡಗಳು ವಿಶೇಷ ನಿಗಾ ಇಡಲಿವೆ.[ನಿಮ್ಮ ಹೆಸರಲ್ಲೂ ನಕಲಿ ಸಿಮ್ ಕಾರ್ಡ್ ತಗೊಂಡಿರಬಹುದು!]

* ಚಾಲಕರು ಮೊಬೈಲ್ ನಲ್ಲಿ ಮಾತನಾಡುತ್ತ ಚಾಲನೆ ಮಾಡುತ್ತಿದ್ದರೆ, ವಾಹನಗಳ ನಡುವೆ ಸರಿಯಾದ ಅಂತರ ಕಾಯ್ದುಕೊಳ್ಳದಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

* ಅಲ್ಲದೇ ನಾಗರಿಕರೊಂದಿಗೆ ಉತ್ತಮ ನಡವಳಿಕೆ ತೋರಬೇಕು, ಜತೆಗೆ ಪಾದಚಾರಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.

English summary
On the 69th Bus Day on Monday, The BMTC starts new campaign for its drivers. Bengaluru Metropolitan Transport Corporation (BMTC) is all set to deal with drivers who do not stop for passengers or do not follow traffic rules. The campaign wich is named ‘Bus Stop Discipline Campaign’ which isgoing to complete 6 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X