ಬಿಎಂಟಿಸಿ ಕಂಡಕ್ಟರ್ ಮೇಲೆ ವಿದೇಶಿ ಮಹಿಳೆಯರ ಗೂಂಡಾಗಿರಿ
ಬೆಂಗಳೂರು, ಜು. 05: ಬಿಎಂಟಿಸಿ ಕಂಡಕ್ಟರ್ ಮೇಲೆ ನೈಜೀರಿಯಾ ಮಹಿಳೆಯರು ಕ್ಷುಲ್ಲಕ ಕಾರಣಕ್ಕೆ ಭಾನುವಾರ ಬೆಳಗ್ಗೆ ಹಲ್ಲೆ ಮಾಡಿದ್ದಾರೆ. ನಾಲ್ಕು ಜನ ನೈಜೀರಿಯಾ ಮಹಿಳೆಯರು ಹಲ್ಲೆ ಮಾಡಿದ್ದು ವಿಲ್ಸನ್ ಗಾರ್ಡನ್ ಪೊಲೀಸರ ವಶದಲ್ಲಿದ್ದಾರೆ.
ದಿನದ ಪಾಸ್ ಮೇಲೆ ಸಹಿ ಮಾಡುವಂತೆ ಕಂಡಕ್ಟರ್ ಕೇಳಿದ್ದೆ ಹಲ್ಲೆಗೆ ಕಾರಣವಾಗಿದೆ. ಮೆಜೆಸ್ಟಿಕ್ ನಿಂದ ಆನೆಕಲ್ ಗೆ ತೆರಳುತ್ತಿದ್ದ ರೂಟ್ ನಂಬರ್ 366 ಬಸ್ ನಲ್ಲಿ ಹಲ್ಲೆ ನಡೆದಿದೆ. ಬಸ್ ಮಹಾರಾಣಿ ಕಾಲೇಜ್ ಸಮೀಪ ಬಂದಾಗ ನಿರ್ವಾಹಕ ದೇವೇಗೌಡ ಪಾಸ್ ಮಹಿಳೆಯ ಪಾಸ್ ಪರಿಶೀಲನೆ ನಡೆಸಿದ್ದಾರೆ. ದಿನದ ಪಾಸ್ ಮೇಲೆ ಸಹಿ ಮಾಡದ್ದನ್ನು ಕಂಡು ರುಜು ಹಾಕುವಂತೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆಯರು ಏಕಾಏಕಿ ಹಲ್ಲೆ ನಡೆಸಿದ್ದಾರೆ.[ಒಎಲ್ಎಕ್ಸ್ ನಲ್ಲಿ ಮಾರಿಬಿಡಿ ಎಂಬ ನೈಜೀರಿಯನ್ ಸೆರೆ]

ಘಟನೆ ನಂತರ ನಿರ್ವಾಹಕರು ವಿಲ್ಸನ್ ಗಾರ್ಡನ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಒಟ್ಟು ಆರು ಜನ ನೈಜೀರಿಯಾ ಮಹಿಳೆಯರು ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಮಹಿಳೆಯರ ಪಾಸ್ ಪೋರ್ಟ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಯಲಹಂಕದಿಂದ ಮೆಜೆಸ್ಟಕ್ ಮೂಲಕ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಹಲ್ಲೆಗೊಳಗಾದ ದೇವೇಗೌಡ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಲ್ಸ್ ನ್ ಗಾರ್ಡ್ ನ್ ಪೊಲೀಸ್ ಠಾಣೆ ಎದುರು ಚಾಲಕರು ಮತ್ತು ನಿರ್ವಾಹಕರು ಪ್ರತಿಭಟನೆ ನಡೆಸುತ್ತಿದ್ದಾರೆ.[ಕಿವೀಸ್ ಮಹಿಳೆ ವಂಚನೆ ಜಾಲ ಬೆಂಗಳೂರಲ್ಲಿ ಬಯಲು]
ಮಹಾನಗರಲ್ಲಿ ವಿದೇಶಿಯರ ಪುಂಟಾಟ ದಿನೇ ದಿನೇ ಹೆಚ್ಚುತ್ತಿದೆ. ಕಳೆದ ತಿಂಗಳು ಹೋಟೆಲ್ ಕಾರ್ಮಿಕರ ಮೇಲೆ ಆಫ್ರಿಕನ್ ಪ್ರಜೆಗಳು ಹಲ್ಲೆ ನಡೆಸಿದ್ದರು. ನಕಲಿ ವೆಬ್ ತಾಣದ ಮೂಲಕ ಕಾರು ಮಾರಾಟ ಮಾಡುತ್ತೇವೆ ಎಂದು ಹೇಳಿ ಜನರನ್ನು ಮೋಸಗೊಳಿಸಿದ್ದ ನೈಜೀರಿಯನ್ ಯುವಕರನ್ನು ಬಂಧಿಸಿದ್ದು ವರದಿಯಾಗಿತ್ತು.












Click it and Unblock the Notifications