ತ್ರಿವರ್ಣ ಧ್ವಜ ಹಿಡಿದು ಬೈಕ್ ನಲ್ಲಿ ಸಾಗಿದ ಕೇಂದ್ರ ಸಚಿವ
ಬೆಂಗಳೂರು, , ಆಗಸ್ಟ್, 17: ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ದೇಶಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ತಿರಂಗಾ ಯಾತ್ರಾಗೆ ಬೆಂಗಳೂರಿನಲ್ಲೂ ಚಾಲನೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಣತಿ ಮೇರೆಗೆ ತಿರಂಗಾ ಯಾತ್ರಾ ಹಮ್ಮಿಕೊಳ್ಳಲಾಗಿದೆ. ವಿಜಯನಗರ ಮತ್ತು ಗೋವಿಂದರಾಜನಗರದಲ್ಲಿ ಆಗಸ್ಟ್ 16 ರಂದು ಸಂಜೆ ನಡೆದ ತಿರಂಗಾ ಯಾತ್ರೆಗೆ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಚಾಲನೆ ನೀಡಿದರು.[ಪರಿಸರ ದಿನಾಚರಣೆ : ಅದಮ್ಯ ಚೇತನದಿಂದ ಹಸಿರು ಜಾಥಾ]

ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ವಿ ಸೋಮಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ, ಬಿಬಿಎಂಪಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.[ಚಿತ್ರಗಳು : ಕರ್ನಾಟಕದಲ್ಲಿ ಬಿಜೆಪಿಯ ತಿರಂಗ ಯಾತ್ರೆ]

ಸುಮಾರು 25 ಕಿಮೀ ದೂರ ಬೈಕ್ ಜಾಥಾ ನಡೆಸಲಾಯಿತು. ಬೈಕ್ ಜಾಥಾ ವಿಜಯನಗರ ಮತ್ತು ಗೋವಿಂದರಾಜನಗರದಲ್ಲಿ ಸಂಚರಿಸಿತು. ಸುಮಾರು 14 ವಾರ್ಡ್ ಗಳಲ್ಲಿ ಬೈಕ್ ಜಾಥಾ ಸಂಚರಿಸಿತು. ಕೇಂದ್ರ ಸಚಿವ ಅನಂತ್ ಕುಮಾರ್ ಸಹ ಬೈಕ್ ಓಡಿಸಿ ಗಮನಸೆಳೆದರು.













Click it and Unblock the Notifications