ಬೆಂಗಳೂರು: ಬಿಬಿಎಂಪಿಯಿಂದ ಇದುವರೆಗೆ 2,641 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ
ಬೆಂಗಳೂರು, ಡಿಸೆಂಬರ್ 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2022-23ನೇ ಹಣಕಾಸು ವರ್ಷದಲ್ಲಿ ನವೆಂಬರ್ 25ರವರೆಗೆ 2,641 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸಿದೆ ಎಂದು ಅಂಕಿ ಅಂಶಗಳು ದೃಢಪಡಿಸಿವೆ.
ಈ ಬಗೆಗಿನ ಮಾಹಿತಿಯನ್ನು ಖಚಿತ ಪಡಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಕಳೆದ ಹಣಕಾಸು ವರ್ಷದಲ್ಲಿ ನಾವು ಸಂಗ್ರಹಿಸಿದ್ದಕ್ಕಿಂತ ಹೆಚ್ಚಿನ ಮೊತ್ತದೊಂದಿಗೆ ನಾವು ಆರ್ಥಿಕ ವರ್ಷವನ್ನು ನಾವು 3010 ಕೋಟಿ ತೆರಿಗೆ ಸಂಗ್ರಹಿಸಲಾಗಿತ್ತು. ಈ ವರ್ಷಾಂತ್ಯಕ್ಕೆ ಅಷ್ಟು ಮೊತ್ತಕ್ಕೆ ಹೆಚ್ಚು ತೆರಿಗೆ ಸಂಗ್ರಹಿಸಲಿದ್ದೇವೆ. ಆ ಮೂಲಕ ಒಟ್ಟು 4,000 ಕೋಟಿ ರೂ. ಗುರಿಯನ್ನು ತಲುಪಲಿದ್ದೇವೆ ಎಂದರು.
ಬಿಬಿಎಂಪಿ ಅಧಿಕಾರಿಗಳ ತಂಡವು ಒಂದು ತಿಂಗಳಿಗೂ ಹೆಚ್ಚು ಕಾಲ ಮತದಾರರ ಪಟ್ಟಿ ಪರಿಷ್ಕರಣೆ, ಪರಿಶೀಲನೆ ಕೆಲಸದಲ್ಲಿ ನಿರತರಾಗಿತ್ತು. ಈ ಕಾರಣದಿಂದ ತೆರಿಗೆ ಸಂಗ್ರಹದತ್ತ ಹೆಚ್ಚು ಗಮನ ಹರಿಸಿರಲಿಲ್ಲ. ಅಂಕಿ ಅಂಶಗಳ ಪ್ರಕಾರ, ನವೆಂಬರ್ 25 ರ ಹೊತ್ತಿಗೆ, ನಾಗರಿಕ ಸಂಸ್ಥೆಯು ನಾಲ್ಕು ವರ್ಗದ ಕಟ್ಟಡಗಳಿಂದ ಆಸ್ತಿ ತೆರಿಗೆಯಾಗಿ 2,641 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ವಸತಿ, ವಸತಿ ರಹಿತ ಕಟ್ಟಡ ಹಾಗೂ ಕೈಗಾರಿಕೆಗಳು ಒಳಪಟ್ಟಿವೆ ಎಂದು ತಿಳಿಸಿದರು.

ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಡೇಟಾಬೇಸ್ ಮೂಲಕ ಆಸ್ತಿಗಳನ್ನು ಗುರುತಿಸುವುದು, ಮಾಲ್‌ಗಳಿಂದ ತೆರಿಗೆ ವಸೂಲಿ ಮತ್ತು ಸ್ವಯಂ-ಮೌಲ್ಯಮಾಪನ ಅಫಿಡವಿಟ್‌ಗಳ ಶೇಕಡಾವಾರು ಪರಿಶೀಲನೆಯು ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಕ್ರಮಗಳಲ್ಲಿ ಪ್ರಮುಖವಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಪಾಲಿಕೆಯು 11,000 ಕೋಟಿ ರೂ.ಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದೆ. ಇದರಲ್ಲಿ 2021-22ರಲ್ಲಿ ಅತೀ ಹೆಚ್ಚು ಸಂಗ್ರಹವಾಗಿದೆ (3,010.4 ಕೋಟಿ ರೂ.), ಉಳಿದಂತೆ 2020-21ರಲ್ಲಿ 2,781.4 ಕೋಟಿ ಮತ್ತು 2019-20ರಲ್ಲಿ 2,686.2 ಕೋಟಿ ತೆರಿಗೆ ಪಾಲಿಕೆ ಬೊಕ್ಕಸಕ್ಕೆ ಸೇರಿದೆ.
ಬಿಬಿಎಂಪಿ ಕಾಯಿದೆ ಅಡಿ ತೆರಿಗೆ ಸಂಗ್ರಹ
ಬಿಬಿಎಂಪಿಯು ವಿವಿಧ ವಿಧಾನಗಳ ಮೂಲಕ ಸುಸ್ತಿದಾರರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಈ ಹಿಂದೆ, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ಸ್ (ಕೆಎಂಸಿ) ಕಾಯಿದೆ 1976 ರ ಸೆಕ್ಷನ್ 108 (ಎ) ಅಡಿಯಲ್ಲಿ ರಚಿಸಲಾದ ನಿಯಮಗಳ ನಿಬಂಧನೆಯಡಿಯಲ್ಲಿ ನಾಗರಿಕ ಸಂಸ್ಥೆ ಆಸ್ತಿ ಮಾಲೀಕರಿಂದ ತೆರಿಗೆ ಸಂಗ್ರಹಿಸುತ್ತಿತ್ತು, ಇದು ತೆರಿಗೆ ಸುಸ್ತಿದಾರರ ಚರ ಆಸ್ತಿಗಳನ್ನು ಮಾತ್ರ ವಶಪಡಿಸಿಕೊಳ್ಳುವ ಅಧಿಕಾರವನ್ನು ನಾಗರಿಕ ಸಂಸ್ಥೆಗೆ ನೀಡಿತ್ತು.
ಪ್ರಸ್ತುತ ಬಿಬಿಎಂಪಿ ಕಾಯಿದೆ, 2020ರ ಸೆಕ್ಷನ್ 144ರ ಅಡಿಯಲ್ಲಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದು ತೆರಿಗೆ ಸುಸ್ತಿದಾರರ ಚರ, ಸ್ಥಿರ ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳಲು ಬಿಬಿಎಂಪಿಗೆ ಅಧಿಕಾರ ನೀಡುತ್ತದೆ. ನಮ್ಮ ಡೇಟಾಬೇಸ್‌ನಲ್ಲಿ ಇಲ್ಲದ ಹಲವಾರು ಆಸ್ತಿಗಳನ್ನು ಹೊಂದಿರುವ ಕಾರಣ ನಾವು ಬೆಸ್ಕಾಂನಿಂದ ಆಸ್ತಿ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಅಲ್ಲದೆ, ಪ್ರಮಾಣಪತ್ರ ನೀಡಲಾಗಿದೆ, ಏಕೆ ಖಾತಾ ಇಲ್ಲ ಎಂಬುದನ್ನು ಗಮನಿಸಲಾಗಿದೆ. ಡಿಸೆಂಬರ್ ಕೊನೆಯ ವಾರ ಇಲ್ಲವೇ ಜನವರಿಯ ಆರಂಭದ ವೇಳೆಗೆ 1,000 ಕೋಟಿ ರೂ.ಗಳನ್ನು ಸಂಗ್ರಹಿಸುವ ವಿಶ್ವಾಸವಿದೆ ಎಂದು ಅವರು ವಿವರಿಸಿದರು.












Click it and Unblock the Notifications