ಬೆಂಗಳೂರು: ಅರ್ಹ ಫಲಾನುಭವಿಗಳಿಗೆ 96 ಮನೆ ವಿತರಿಸಿದ ಬಿಬಿಎಂಪಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವಾರ್ಡ್ -119ರ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡನ ಅರ್ಹ ಫಲಾನುಭವಿಗಳಿಗೆ ಅಂತೂ ಮನೆಗೆ ಸಿಕ್ಕಿವೆ. ಮನೆ, ಅರ್ಹರ ಪೂರ್ಣ ಮಾಹಿತಿ ತಿಳಿಯಿರಿ.
ಬೆಂಗಳೂರು, ಮಾರ್ಚ್ 17: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವಾರ್ಡ್ -119ರ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡನ ಅರ್ಹ ಫಲಾನುಭವಿಗಳಿಗೆ ಅಂತೂ ಮನೆಗೆ ಸಿಕ್ಕಿವೆ.
ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನ ಕಲಾಸಿಪಾಳ್ಯಂ, ಎ.ಎಂ ರಸ್ತೆಯಲ್ಲಿ ನಿರ್ಮಿಸಲಾಗಿರುವ ಬಹುಮಹಡಿ ವಸತಿ ಕಟ್ಟಡದ ಮನೆಗಳ ಹಂಚಿಕೆ ಪತ್ರವನ್ನು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅರ್ಹ ಫಲಾನುಭವಿಗಳಿಗೆ ಒಟ್ಟು 96 ಮನೆಗಳನ್ನು ವಿತರಿಸಿದರು.

ಬಿಬಿಎಂಪಿಯು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವಾರ್ಡ್ ಸಂ. 172/119 ಧರ್ಮರಾಯಸ್ವಾಮಿ ದೇವಸ್ಥಾನ ವ್ಯಾಪ್ತಿಯ ಕಲಾಸಿಪಾಳ್ಯಂ, ಮೋತಿನಗರ ರಸ್ತೆಯಲ್ಲಿ ಪಾಲಿಕೆಗೆ ಸೇರಿದ ಕಟ್ಟಡದಲ್ಲಿ ಬ್ಲಾಕ್ ಎ ನಲ್ಲಿ 24 ಮತ್ತು ಬ್ಲಾಕ್ ಬಿ ನಲ್ಲಿ 64 ಜನ ಪಲಾನುಭವಿಗಳು ವಾಸ ಮಾಡುತ್ತಿದ್ದರು.
ಕಟ್ಟಡವು ಶಿಥಿಲಗೊಂಡಿದ್ದರಿಂದ ಸದರಿ ಫಲಾನುಭವಿಗಳನ್ನು ಗುರುತಿಸಿ ಮನೆಗಳಿಂದ ತೆರವುಗೊಳಿಸಲಾಯಿತು. ಯೋಜನೆ ರೂಪಿಸಿ ಅದೇ ಜಾಗದಲ್ಲಿ 2016-17ನೇ ಸಾಲಿನ ಪಾಲಿಕೆ ಆಯವ್ಯಯದಲ್ಲಿ ಅನುದಾನದಡಿ ಮನೆ ನಿರ್ಮಾಣ ಆರಂಭವಾಯಿತು. ಗುತ್ತಿಗೆದಾರರ ಮುಖಾಂತರ ಬ್ಲಾಕ್ ಎ ನಲ್ಲಿ 20 ಮನೆ ಮತ್ತು ಬ್ಲಾಕ್ ಬಿ ನಲ್ಲಿ 76 ಮನೆ ಒಟ್ಟು 96 ಸಂಖ್ಯೆ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಇಲ್ಲಿನ ಒಟ್ಟು 96 ಮನೆಗಳ ಪೈಕಿ ಈ ಹಿಂದೆ ವಾಸವಾಗಿದ್ದ ಅದೇ ಅರ್ಹ ಫಲಾನುಭವಿಗಳಿಗೆ ಇಂದು 52 ಮನೆಗಳ ಹಂಚಿಕೆ ಪತ್ರ ವಿತರಿಸಲಾಗಿದೆ. ಬಾಕಿ ಇರುವ 44 ಮನೆಗಳ ಹಂಚಿಕೆ ಪತ್ರಗಳನ್ನು ಕೂಡಲೇ ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಡಾ. ಉದಯ್ ಬಿ ಗರುಡಾಚಾರ್, ಕಂದಾಯ ಅಧಿಕಾರಿ, ಸಹಾಯಕ ಕಾರ್ಯಪಾಲ ಅಭೊಯಂತರರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಕಟ್ಟಡದ ವಿವರಗಳು ಹೀಗಿವೆ
* ಯೋಜನೆಯ ಒಟ್ಟು ಅಂದಾಜು ಮೊತ್ತ.9.30 ಕೋಟಿ ರೂಪಾಯಿ.
* ಬ್ಲಾಕ್ ಎ- 2,30 ಕೋಟಿ ರೂಪಾಯಿ ಮತ್ತು ಬ್ಲಾಕ್ ಬಿ- 7 ಕೋಟಿ ರೂಪಾಯಿ.
* ಬ್ಲಾಕ್ ಎ-ಸ್ಟಿಲ್ಸ್ ಫ್ಲೋರ್ ವಾಹನಗಳ ನಿಲ್ದಾಣಕ್ಕಾಗಿ ಕಾಯ್ದಿರಿಸಲಾಗಿದೆ. ನೆಲಮಾಳಿಗೆ ಮತ್ತು ಒಂದನೇ ಅಂತಸ್ತು ವಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
* ಬ್ಲಾಕ್ ಬಿ- ಸ್ಟಿಲ್ಸ್ ಫ್ಲೋರ್ ವಾಹನಗಳ ನಿಲ್ದಾಣಕ್ಕಾಗಿ ಕಾಯ್ದಿರಿಸಲಾಗಿದೆ. ನೆಲಮಾಳಿಗೆ ಮತ್ತು ಒಂದನೇ ಅಂತಸ್ತು ವಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ವಸತಿ ಗೃಹ ಸ್ಥಳಾಂತರ: ಮತದಾರ ಚೀಟಿಗೆ ಅರ್ಜಿ ಸಲ್ಲಿಸಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್-172 ಮಡಿವಾಳದ ವ್ಯಾಪ್ತಿಗೆ ಬರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ವಸತಿ ಗೃಹವನ್ನು ಬಿಎಂಆರ್‌ಸಿಎಲ್ ಸಂಸ್ಥೆರವರು 2019-20 ರಲ್ಲಿ ಮೆಟ್ರೋ ಕಾಮಗಾರಿಗಾಗಿ ಭೂ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮತದಾರರ ಭಾಗದ ಸಂಖ್ಯೆ 198 ರಲ್ಲಿನ ಮತದಾರರರು ಬೇರೆಡೆಗೆ ಸ್ಥಳಾಂತರಗೊಂಡಿದೆ. ಸದರಿ ವಸತಿ ಗೃಹ ಬೇರೆಡೆ ಹಾಗೂ ಅಕ್ಕ-ಪಕ್ಕದ ಸ್ಥಳಗಳಿಗೆ ಸ್ಥಳಾಂತರಗೊಂಡ ಮತದಾರರು ನಮೂನೆ- 8 ನ್ನು ಪೂರಕ ದಾಖಲೆಗಳೊಂದಿಗೆ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ nvsp.in/VHA ಅಂತರ್ಜಾಲದ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಇಲ್ಲವೇ ವಾರ್ಡ್-172 ಮಡಿವಾಳದ ಸಹಾಯಕ ಸಂಪರ್ಕ ಕೇಂದ್ರ/ಸಹಾಯಕ ಮತದಾರರ ನೊಂದಣಾಧಿಕಾರಿಗಳು (ಬಿಟಿಎಂ ಲೇಔಟ್) ಕಚೇರಿಗೆ ಸಂಪರ್ಕಿಸುವಂತೆ ಬಿಬಿಎಂಪಿ ಪ್ರಕಟಣೆ ತಿಳಿಸಿದೆ.












Click it and Unblock the Notifications