ಸೋಮವಾರ (ಸೆಪ್ಟೆಂಬರ್ 11) ಬೆಂಗಳೂರು ಬಂದ್ ಕನ್ಫರ್ಮ್: ಏನಿರುತ್ತೆ, ಏನು ಇರಲ್ಲ?, ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಸೆಪ್ಟೆಂಬರ್, 09: ಬೆಂಗಳೂರು ಬ್ಯುಸಿ ಲೈಫ್‌ನಲ್ಲಿ ವೀಕೆಂಡ್‌ನಲ್ಲಿ ಆರಾಮಾಗಿ ನಿದ್ದೆ ಮಾಡೋಣ ಅಂತಾ ಕನಸು ಕಾಣ್ತಿರೋ ವೀಕೆಂಡ್ ಪ್ರಿಯರ ನಿದ್ದೆಗೆಡೆಸೋಕೆ ಪ್ಲಾನ್ ಒಂದು ರೆಡಿಯಾಗಿದೆ. ಪ್ರತೀಬಾರಿ ಇದ್ದ ಹಾಗೇ ಈ ವೀಕೆಂಡ್ ಇರುತ್ತೆ ಅಂತಾ ಭಾನುವಾರ ರಾತ್ರಿ ಲೇಟಾಗಿ ಮಲಗಿದ್ರೆ ಸೋಮವಾರ ಬೆಳ್ಳಂಬೆಳಗ್ಗೆಯೇ ಪರದಾಡಬೇಕಾದ ಸ್ಥಿತಿ ಎದುರಿಸಬೇಕಾಗುತ್ತೆ. ಯಾಕೆ ಅತೀರಾ ಇಲ್ಲಿದೆ ನೋಡಿ ವಿವರ.
ಸ್ಕೂಲ್ ವ್ಯಾನ್ ಬರುತ್ತೆ ಅಂತಾ ತರಾತುರಿಯಲ್ಲಿ ಮಕ್ಕಳನ್ನು ರೆಡಿಮಾಡೋ ಅಮ್ಮಂದಿರು, ಈ ಸೋಮವಾರ ಮಕ್ಕಳನ್ನು ಶಾಲೆಗೆ ಹೇಗೆ ಕಳಿಸೋದು ಅಂತಾ ಈಗಿನಿಂದಲೇ ಪ್ಲಾನ್ ಮಾಡಿಕೊಳ್ಳಬೇಕಾಗುತ್ತದೆ. ಶಕ್ತಿಯೋಜನೆ ಜಾರಿಯಾದ ಬಳಿಕ ಸರ್ಕಾರದ ಜೊತೆ ಮುಸುಕಿನ ಗುದ್ದಾಟ ನಡೆಸುತ್ತಿದ್ದ ಖಾಸಗಿ ಸಾರಿಗೆ ಒಕ್ಕೂಟಗಳು ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗೆ ಬಂದ್ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿವೆ.
ಬೈಕ್, ಟ್ಯಾಕ್ಸಿ ನಿರ್ಬಂಧ, ಚಾಲಕರಿಗೆ ಸಹಾಯಧನ ಸೇರಿದಂತೆ ಸರ್ಕಾರದ ಮುಂದೆ ಹತ್ತು ಹಲವು ಬೇಡಿಕೆ ಇಟ್ಟಿದ್ದ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇದೇ ಸೋಮವಾರ ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿವೆ. ಭಾನುವಾರ ಮಧ್ಯರಾತ್ರಿಯಿಂದಲೇ ಖಾಸಗಿ ವಾಹನಗಳ ಸೇವೆ ಸ್ಥಗಿತ ಮಾಡಿ ಬಂದ್ ನಡೆಸಲು ಸಜ್ಜಾಗಿರುವ ಒಕ್ಕೂಟ, ಸರ್ಕಾರದ ಜೊತೆಗೆ ಸಿಲಿಕಾನ್ ಸಿಟಿ ಜನರಿಗೂ ಶಾಕ್ ಕೊಡುವುದಕ್ಕೆ ಸಜ್ಜಾಗಿವೆ
ಶಕ್ತಿಯೋಜನೆ ಜಾರಿ ಬಳಿಕ ನಷ್ಟವಾಗುತ್ತಿದೆ ಅಂತಾ ಅಳಲು ತೋಡಿಕೊಂಡಿದ್ದ ಖಾಸಗಿ ಸಾರಿಗೆ ಒಕ್ಕೂಟ, ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಸರ್ಕಾರದ ಗಮನಸೆಳೆಯಲು ಸಜ್ಜಾಗಿತ್ತು. ಆದ್ರೆ ಒಕ್ಕೂಟ ನೀಡಿದ್ದ ಡೆಡ್‌ಲೈನ್ ಒಳಗೆ ಸರ್ಕಾರ ಬೇಡಿಕೆಗಳನ್ನು ಈಡೇರಿಸಿದಿದ್ದಕ್ಕೆ ಖಾಸಗಿ ಸಾರಿಗೆ ಒಕ್ಕೂಟ ಬಂದ್ ಮೂಲಕ ಸಮರ ಸಾರಿವೆ. ಇನ್ನು ಈ ಬಂದ್‌ಗೆ ಸುಮಾರು 30ಕ್ಕೂ ಹೆಚ್ಚು ಖಾಸಗಿ ಸಂಘಟನೆಗಳು ಸಾಥ್ ನೀಡೋಕೆ ಸಜ್ಜಾಗಿವೆ. ಒಕ್ಕೂಟ ಕರೆ ನೀಡಿರೋ ಬಂದ್‌ಗೆ ವಿವಿಧ ಚಾಲಕರ ಸಂಘಟನೆಗಳು ಬೆಂಬಲ ಸೂಚಿಸ್ತಿವೆ.

ಇನ್ನು ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಹಿನ್ನೆಲೆ ನಗರದಲ್ಲಿ 3 ಲಕ್ಷ ಆಟೋ, 1.5ಲಕ್ಷ ಟ್ಯಾಕ್ಸಿ, 20ಸಾವಿರ ಗೂಡ್ಸ್ ವಾಹನಗಳು, 5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೋರೆಟ್ ಕಂಪನಿ ಬಸ್ ಗಳು ಬಂದ್ ಆಗಲಿದ್ದು ಸಿಲಿಕಾನ್ ಸಿಟಿ ಜನರಿಗೆ ಬಂದ್ ಬಿಸಿ ತಟ್ಟುವ ಸಾಧ್ಯತೆಗಳು ಕಂಡುಬರುತ್ತಿದೆ.
ಸೋಮವಾರ ಈ ಸೇವೆ ಇರಲ್ಲ
1. ಸಾಧಾರಣ ಆಟೋಗಳು
2. ಓಲಾ ಊಬರ್ ಆಟೋಗಳು
3. ಶಾಲಾ ಆಟೋಗಳು
4. ಓಲಾ ಊಬರ್ ಕ್ಯಾಬ್‌ಗಳು
5. ಕಂಪನಿ ಕ್ಯಾಬ್‌ಗಳು
6. ಏರ್‌ಪೋರ್ಟ್ ಕ್ಯಾಬ್‌ಗಳು
7. ಸ್ಕೂಲ್ ವ್ಯಾನ್‌ಗಳು
8. ಸ್ಕೂಲ್ ಬಸ್‌ಗಳು
9. ಖಾಸಗಿ ಬಸ್‌ಗಳು
ಸೋಮವಾರ ಈ ಸೇವೆಗಳು ಇರುತ್ತವೆ
1. KSRTC, BMTC ಬಸ್
2. ಬೈಕ್, ಟ್ಯಾಕ್ಸಿ
3. ಸ್ವಂತ ವಾಹನಗಳು ಸಂಚಾರ ಮಾಡಬಹುದು.
ಬಂದ್ ದಿನ ಆಟೋರಿಕ್ಷಾಗಳು, ಓಲಾ, ಊಬರ್ ಆಟೋಗಳು, ಶಾಲಾ ಆಟೋಗಳು, ಕಂಪನಿಗಳ ಕ್ಯಾಬ್, ಏರ್‌ಪೋರ್ಟ್ ಕ್ಯಾಬ್‌ಗಳು ರಸ್ತೆಗಿಳಿಯೋದು ಡೌಟ್ ಎನ್ನಲಾಗ್ತಿದೆ. ಇನ್ನು ಸ್ಕೂಲ್ ವ್ಯಾನ್‌ಗಳು, ಸ್ಕೂಲ್ ಬಸ್‌ಗಳು, ಖಾಸಗಿ ಬಸ್‌ಗಳು ಕೂಡ ಬಂದ್‌ಗೆ ಬೆಂಬಲ ಸೂಚಿಸಿದ್ದು, ಈ ಎಲ್ಲಾ ವಾಹನಗಳ ಸಂಚಾರ ಬಂದ್ ಆಗಲಿದೆ. ಇತ್ತ KSRCT, BMTC, ಬೈಕ್ ಟ್ಯಾಕ್ಸಿ ಹಾಗೂ ಸ್ವಂತ ವಾಹನಗಳ ಮೂಲಕ ಎಂದಿನಂತೆ ಸಂಚಾರ ನಡೆಸಬಹುದಾಗಿದೆ.
ಇನ್ನು ಈ ಬಂದ್‌ನಿಂದ ಸರ್ಕಾರಿ ಸಾರಿಗೆ ಬಿಟ್ಟು ಖಾಸಗಿ ಸಾರಿಗೆ ಬಳಕೆ ಮಾಡುವವರಿಗೆ ಹೆಚ್ಚು ಎಫೆಕ್ಟ್ ಸಾಧ್ಯತೆ ಇದ್ದು, ಏರ್‌ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ ಹಿನ್ನೆಲೆ ಏರ್ಪೋಟ್ ಪ್ರಯಾಣಿರಿಗೆ ತೊಂದರೆ ಸಾಧ್ಯತೆ ಕೂಡ ಇರಲಿದೆ. ಅಲ್ಲದೇ ಓಲಾ, ಊಬರ್ ಬಳಕೆದಾರರು, ಕಾರ್ಪೋರೆಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್‌ಗಳು ಕೂಡ ಬಂದ್‌ಗೆ ಬೆಂಬಲ ಸೂಚಿಸಿದ್ದು, ಇವು ರಸ್ತೆಗಿಳಿಯೋದು ಡೌಟ್ ಇದೆ.
ಖಾಸಗಿ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುವವರಿಗೂ ಬಿಸಿ ತಟ್ಟಲಿದೆ. ಸದ್ಯ ಬಂದ್ ಹಿನ್ನೆಲೆ ಪೋಷಕರು, ವಿದ್ಯಾರ್ಥಿಗಳು ಈಗಾಗಲೇ ಪರ್ಯಾಯ ಮಾರ್ಗ ಹುಡುಕಲು ಸಜ್ಜಾಗಿದ್ದು, ವ್ಯಾನ್ ಬರಲಿಲ್ಲ ಅಂದ್ರೆ ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗೋಕೆ ಆಗಲ್ಲ ಅಂತಾ ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಶತಾಯಗತಾಯ ಬಂದ್ ಮಾಡಿಯೇ ತೀರುತ್ತೇವೆ ಅಂತಾ ಖಾಸಗಿ ಸಾರಿಗೆ ಒಕ್ಕೂಟ ಪಟ್ಟು ಹಿಡಿದು ಕುಳಿತಿದ್ದರೆ, ಅತ್ತ ಸಾರಿಗೆ ಇಲಾಖೆ, ಸರ್ಕಾರ ಮಾತ್ರ ಡೋಂಡ್‌ಕೇರ್ ಅಂತಾ ಬಂದ್‌ಗೆ ತಲೆಕೆಡಿಸಿಕೊಳ್ಳದೇ ಸೈಲೆಂಟ್ ಆಗಿದೆ. ಇವರಿಬ್ಬರ ಶೀತಲಸಮರದ ಮಧ್ಯೆ ಸೋಮವಾರ ಬಂದ್ ಬಿಸಿ ಹೇಗಿರಲಿದೆ ಅನ್ನೋ ಟೆನ್ಷನ್ ಸಿಲಿಕಾನ್ ಸಿಟಿ ಜನರದ್ದಾಗಿದೆ.












Click it and Unblock the Notifications