Bengaluru bandh: ಊಬರ್ ಆಟೋದವರ ಬಂದ್ ರಾಜಕೀಯ ಪ್ರೇರಿತ ಎಂದ ಡಿಕೆಶಿ
ಬೆಂಗಳೂರು ಸೆಪ್ಟೆಂಬರ್ 11: ಊಬರ್ ಆಟೋದವರ ಬಂದ್ ರಾಜಕೀಯ ಪ್ರೇರಿತ ಎಂದ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಶಕ್ತಿಯೋಜನೆ ಬಳಿಕ ಸರ್ಕಾರದ ಜೊತೆ ಮುಸುಕಿನ ಗುದ್ದಾಟ ನಡೆಸ್ತಿದ್ದ ಖಾಸಗಿ ಸಾರಿಗೆ ಒಕ್ಕೂಟ, ಇದೀಗ ತಮ್ಮ ಬೇಡಿಕೆಗಳ ಈಡೇರಿಕೆಗೆ ಬಂದ್ ಅಸ್ತ್ರಪ್ರಯೋಗ ಮಾಡಿದ್ದು ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೈಕ್ ಟ್ಯಾಕ್ಸಿ ನಿರ್ಬಂಧ, ಚಾಲಕರಿಗೆ ಸಹಾಯಧನ ಸೇರಿದಂತೆ ಸರ್ಕಾರದ ಮುಂದೆ ಹತ್ತು ಹಲವು ಬೇಡಿಕೆ ಇಟ್ಟಿದ್ದ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇಂದು ಬೆಂಗಳೂರು ಬಂದ್‌ಗೆ ಕರೆಕೊಟ್ಟಿದೆ. ಮದ್ಯರಾತ್ರಿಯಿಂದಲೇ ಖಾಸಗಿ ವಾಹನಗಳ ಸೇವೆ ಸ್ಥಗಿತ ಮಾಡಿ ಬಂದ್ ನಡೆಸಲು ಸಜ್ಜಾಗಿರೋ ಒಕ್ಕೂಟ, ಸರ್ಕಾರದ ಜೊತೆಗೆ ಸಿಲಿಕಾನ್ ಸಿಟಿ ಜರಿಗೂ ಶಾಕ್ ಕೊಟ್ಟಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, 'ಖಾಸಗೀ ವಾಹನದವರು ಇವತ್ತು ಎಲ್ಲರೂ ಕೂಡ ಬಂದ್ ಅಥವಾ ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಖಾಸಗೀ ಬಸ್ ಅವರಿಗೆ ತೊಂದರೆ ಆಗಿದೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾಕೆಂದರೆ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ' ಎಂದರು.
'ಆದರೆ ಊಬರ್ ಆಟೋದವರು ರಾಜಕೀಯ ಪ್ರೇರಣೆಯಿಂದ ಬಂದ್ ಮಾಡಿದ್ದಾರೆ ಅನಿಸುತ್ತದೆ. ನಾವು ಅವರ ಬಗ್ಗೆ ಸಿಂಪತಿ ಹೊಂದಿದ್ದೇವೆ. ಅವರ ಸಮಸ್ಯೆಗೆ ಪರಿಹಾರ ಕೊಡುವ ಆಲೋಚನೆ ಇದೆ. ಆದರೆ ಅವರು ಹೆದರಿಸುವುದು ಪ್ರಯಾಣಿಕರಿಗೆ ತೊಂದರೆ ಮಾಡುವುದರಿಂದ ಅವರಿಗೆ ಖಂಡಿತ ಒಳ್ಳೆದಾಗುವುದಿಲ್ಲ' ಎಂದರು.
ಸರ್ಕಾರ ಖಂಡಿತ ಎಲ್ಲಾ ವಿಚಾರಗಳನ್ನು ಗಮನಿಸುತ್ತದೆ. ಯಾವ ರೀತಿ ಸಹಾಯ ಮಾಡಬಹುದು ಎಂದು ಚರ್ಚೆ ಮಾಡಿ ತಿಳಿಸುತ್ತೇವೆ ಎಂದು ಸುದ್ದಿಗಾರರಿಗೆ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರು ಬಂದ್‌ಗೆ ಕರೆ
ಶಕ್ತಿಯೋಜನೆ ಬಳಿಕ ನಷ್ಟವಾಗ್ತಿದೆ ಅಂತಾ ಅಳಲು ತೋಡಿಕೊಂಡಿದ್ದ ಖಾಸಗಿ ಸಾರಿಗೆ ಒಕ್ಕೂಟ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಸರ್ಕಾರದ ಗಮನಸೆಲೆಯಲು ಸಜ್ಜಾಗಿತ್ತು. ಆದರೆ, ಒಕ್ಕೂಟ ನೀಡಿದ್ದ ಡೆಡ್‌ಲೈನ್ ಒಳಗೆ ಸರ್ಕಾರ ಬೇಡಿಕೆಗಳನ್ನು ಈಡೇರಿಸದ ಕಾರ ಇದೀಗ ಇಂದು ರಾಜ್ಯ ರಾಜಧಾನಿಯಲ್ಲಿ ಒಂದು ದಿನದ ಬಂದ್‌ಗೆ ಕರೆ ನೀಡುವ ಮೂಲಕ ಸರ್ಕಾರದ ವಿರುದ್ಧ ಸಮರ ಸಾರಿವೆ.
ಈ ಬಂದ್‌ಗೆ ಸುಮಾರು 30ಕ್ಕೂ ಹೆಚ್ಚು ಖಾಸಗಿ ಸಂಘಟನೆಗಳು ಸಾಥ್ ನೀಡಿದ್ದು ಸಿಲಿಕಾನ್ ಸಿಟಿ ಮಂದಿಗೆ ಇಂದು ಆಟೋ, ಟ್ಯಾಕ್ಸಿ, ಒಲಾ, ಊಬರ್ ಕೂಡ ಬಂದ್‌ಗೆ ಸಾಥ್ ನೀಡಿವೆ.
ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಹಿನ್ನೆಲೆ ನಗರದಲ್ಲಿ 3 ಲಕ್ಷ ಆಟೋ, 1.5ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್ ವಾಹನಗಳು, 5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80 ಸಾವಿರ ಸಿಟಿ ಟ್ಯಾಕ್ಸಿ ಕಾರ್ಪೋರೆಟ್ ಕಂಪನಿ ಬಸ್‌ಗಳು ಬಂದ್ ಆಗಿದ್ದು ಸಿಲಿಕಾನ್ ಸಿಟಿ ಜನರಿಗೆ ಬಂದ್ ಬಿಸಿ ಮುಟ್ಟಿದೆ.












Click it and Unblock the Notifications