ಬೆಂಗಳೂರಿಗೆ ಉತ್ತಮ ಸ್ವಯಂ ಸುಸ್ಥಿರ ಮೆಗಾ ಸಿಟಿ ಪಟ್ಟ: ಕಾರಣ?
ಬೆಂಗಳೂರು, ಸೆಪ್ಟೆಂಬರ್ 4: ಬೆಂಗಳೂರು ನಗರ ಸ್ವಚ್ಛ ಸರ್ವೇಕ್ಷಣ 2020ಯಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ ತ್ಯಾಜ್ಯ ನಿರ್ವಹಣೆ, ಗೃಹ ಮಿಶ್ರಗೊಬ್ಬರ ಉಪಕ್ರಮಗಳಿಂದಾಗಿ ಅತ್ಯುತ್ತಮ ಸ್ವಯಂ ಸುಸ್ಥಿರ ಮೆಗಾ ಸಿಟಿ ಎಂಬ ಬಿರುದನ್ನು ಪಡೆದುಕೊಂಡಿದೆ.
Recommended Video
ಸಿಲಿಕಾನ್ ಸಿಟಿಗೆ ಮತ್ತೊಂದು ಗರಿ ಲಭಿಸಿದ್ದು, 40 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ವಿಭಾಗದಲ್ಲಿ ಬೆಂಗಳೂರು 'ಅತ್ಯುತ್ತಮ ಸ್ವಯಂ ಸುಸ್ಥಿರ ಮೆಗಾ ಸಿಟಿ'(ಬೆಸ್ಟ್ ಸೆಲ್ಫ್ ಸಸ್ಟೇನೆಬಲ್ ಮೆಗಾ ಸಿಟಿ) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ತ್ಯಾಜ್ಯ ನಿರ್ವಹಣೆ ಕುರಿತು ಕೇಂದ್ರೀಕರಿಸುವುದು ಹಾಗೂ ಮನೆ ಗೊಬ್ಬರದ ಕುರಿತು ಉತ್ತೇಜನ ನೀಡುತ್ತಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಟ್ವೀಟ್ ಮಾಡಿ, ಬೆಂಗಳೂರಿಗೆ ಬೆಸ್ಟ್ ಸಸ್ಟೇನಬಲ್ ಮೆಗಾ ಸಿಟಿ ಎಂಬ ಬಿರುದು ಬರಲು ಕಾರಣವನ್ನು ವಿವರಿಸಿದ್ದಾರೆ.
Heartiest congratulations to citizens & city officials of Bengaluru on being awarded the title of the Best Self Sustainable Mega City (population category of > 40 lakhs)! This city has focused on decentralised waste management & promoted home composting with the name ‘Bioman’. pic.twitter.com/hYiUWJROPr
— Durga Shanker Mishra (@Secretary_MoHUA) September 3, 2020
40 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಕೆಟಗರಿಯಲ್ಲಿ ಬೆಂಗಳೂರು ಈ ಬಿರುದು ಪಡೆದಿದೆ. ಗೃಹ ಮಿಶ್ರಿತ ಗೊಬ್ಬರ ವ್ಯವಸ್ಥೆ'ಬಯೋ ಮ್ಯಾನ್' ಅನ್ನು ನಗರದಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ನಾಗರಿಕರಿಂದ ಇದು ಪ್ರೇರಿತವಾಗಿತ್ತು.

ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆಯ ಮೇಲೆ ಕೇಂದ್ರೀಕರಿಸಿದ ಮತ್ತು ಮನೆ ಮಿಶ್ರಿತ ಗೊಬ್ಬರವನ್ನು ಉತ್ತೇಜಿಸಿದ್ದರಿಂದ ಈ ಪ್ರಶಸ್ತಿ ಗೆಲ್ಲಲು ಸಾಧ್ಯವಾಯಿತು.
ಇದೇ ಮಾದರಿಯನ್ನು ಮಾರುಕಟ್ಟೆ ಇನ್ನಿತರೆ ಪ್ರದೇಶಗಳಲ್ಲಿ ಅಳವಡಿಸಿಕೊಂಡರೆ ಬೆಂಗಳೂರು ಸ್ವಚ್ಛ ನಗರಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದಿದ್ದಾರೆ.
ಕಳೆಪೆ ಸಾಧನೆಯ ನಡುವೆಯೂ ಪಾಲಿಕೆಗೆ ಬೆಸ್ಟ್ ಸಸ್ಟೇನೆಬಲ್ ಸಿಟಿ ಎಂಬ ಪ್ರಶಸ್ತಿ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ಸ್ವಚ್ಛ ಸರ್ವೇಕ್ಷಣ 2020ರ ಫಲಿತಾಂಶ ಹೊರಬಿದ್ದಿದೆ. ಇಂದೋರ್ ಭಾರತದ ಸ್ವಚ್ಛ ನಗರ ಎನ್ನುವ ಖ್ಯಾತಿಗೆ ಪಾತ್ರವಾದರೆ , ಛತ್ತೀಸ್‌ಗಢ ದೇಶದ ಸ್ವಚ್ಛ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಾಗರಿಕರೇ ನಡೆಸುವ ಕಾಂಪೋಸ್ಟ್ ಮಾರುಕಟ್ಟೆ ಅಥವಾ ಕಾಂಪೋಸ್ಟ್ ಸಂದೇಶ್‍ಗಳಲ್ಲಿ ವಿವಿಧ ರೀತಿಯ ಮಿಶ್ರ ಗೊಬ್ಬರ ತಯಾರಿಕೆಯನ್ನು ಪ್ರದರ್ಶಿಸಲಾಗುತ್ತದೆ. ಇದು ದೇಶದ ಉಳಿದ ಭಾಗಗಳಿಗೆ ಸ್ಪೂರ್ತಿದಾಯಕ ಮಾದರಿಯಾಗಿದೆ. ನಗರದ ಸ್ಥಳೀಯ ಸಂಸ್ಥೆ(ಯುಎಲ್‍ಬಿ) ಒಡಿಎಫ್++ ಟ್ಯಾಗ್‍ನ್ನು ಮುಡಿಗೇರಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು 40 ಲಕ್ಷ ಜನಸಂಖ್ಯೆ ವಿಭಾಗದಲ್ಲಿ 'ಬೆಸ್ಟ್ ಸೆಲ್ಫ್ ಸಸ್ಟೇನೆಬಲ್ ಮೆಗಾ ಸಿಟಿ' ಎಂಬ ಬಿರುದು ಪಡೆದಿದೆ. 3,200ರ ಪೈಕಿ 1,491 ಅಂಕಗಳನ್ನು ಪಡೆದಿದೆ. 10 ಲಕ್ಷ ಜನಸಂಖ್ಯೆ ಹೊಂದಿದ ನಗರದ ಸ್ಥಳೀಯ ಸಂಸ್ಥೆಗಳ ಪೈಕಿ ಬೆಂಗಳೂರು 37ನೇ ರ‌್ಯಾಂಕ್ ಪಡೆದಿದೆ
ಪ್ರತಿ ವರ್ಷ ನಗರಗಳ ಸ್ವಚ್ಛತೆ ಹಾಗೂ ಕಸವಿಲೇವಾರಿ ಮಾನದಂಡಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಪ್ರಶಸ್ತಿ ಮತ್ತು ಸ್ಥಾನ ನೀಡುತ್ತದೆ. ಬೆಂಗಳೂರು ಈ ಬಾರಿಯೂ ಹಿನ್ನಡೆ ಸಾಧಿಸುವುದರ ಜೊತೆಗೆ ಕಳೆದ ವರ್ಷಕ್ಕಿಂತ 20 ಸ್ಥಾನ ಹಿನ್ನಡೆ ಸಾಧಿಸಿದೆ.
ಸ್ವಚ್ಛ ಸರ್ವೇಕ್ಷಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಿನ್ನಡೆಯಾಗಿದೆ. ಕಳೆದ ಬಾರಿಯ ಪಟ್ಟಿಯಲ್ಲಿ 194ನೇ ಸ್ಥಾನಲ್ಲಿದ್ದ ಬೆಂಗಳೂರು ಈ ಬಾರಿ 214ನೇ ಸ್ಥಾನಕ್ಕೆ ಕುಸಿದಿದೆ.












Click it and Unblock the Notifications